Friday, November 22, 2024
Homeಇದೀಗ ಬಂದ ಸುದ್ದಿಮೋಸದಿಂದ ತಂದೆಯ ಸ್ವತ್ತನ್ನು ಪಡೆದ ಸಹೋದರಿ ಸೇರಿ ನಾಲ್ವರ ವಿರುದ್ಧ ಕೇಸ್

ಮೋಸದಿಂದ ತಂದೆಯ ಸ್ವತ್ತನ್ನು ಪಡೆದ ಸಹೋದರಿ ಸೇರಿ ನಾಲ್ವರ ವಿರುದ್ಧ ಕೇಸ್

ಬೆಂಗಳೂರು,ಮಾ.16- ತಂದೆಗೆ ಸೇರಿದ ಎರಡು ಕಂಪೆನಿಗಳ ಸ್ವತ್ತನ್ನು ಮೋಸ ಮಾಡಿ ಪಡೆದುಕೊಂಡು ತಂದೆಯ ಅನಾರೋಗ್ಯದ ನೆಪವೊಡ್ಡಿ ಅಕ್ರಮ ಬಂಧನದಲ್ಲಿಟ್ಟುಕೊಂಡಿರುವ ಸಹೋದರಿ ಸೇರಿದಂತೆ ನಾಲ್ವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಭರತ್ರಾಜ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಭರತ್ರಾಜ್ ಅವರ ತಂದೆವೆಂಕಟಪ್ಪ ಲಕ್ಷ್ಮೀ ನಾರಾ ಯಣ್ ಎಂಬುವವರು ನಾರಿಮನ್ ಶೆಲ್ಟರ್ ಪ್ರೈವೇಟ್ ಲಿಮಿಟೆಡ್ ಮತ್ತು ನವ ನಾರಿಮನ್ ಎಂಬ ಎರಡು ಕಂಪೆನಿ ತೆರೆದಿದ್ದು, ಡೈರೆಕ್ಟರ್-ಛೇರ್ಮನ್ ಆಗಿರುತ್ತಾರೆ.ಈ ನಡುವೆ ವೆಂಕಟಪ್ಪ ಅವರು ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದು, ಕಂಪೆನಿ ರಕ್ಷಣೆ ಮಾಡಲು ಭರತ್ರಾಜ್ ಅವರಿಗೆ ಎಂಡಿ ಹಾಗೂ ಡೈರೆಕ್ಟರ್ ಆಗಿ ನೇಮಿಸಿದ್ದು, ಇವರು ಕಂಪೆನಿಗಳ ಹಣಕಾಸಿನ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದ್ದಾರೆ.

ಆ ಸಂದರ್ಭದಲ್ಲಿ ಕಂಪೆನಿಯ ಚೀಫ್ ಅಕೌಂಟೆಂಟ್ ಚೌಡರೆಡ್ಡಿ ಮತ್ತು ಆಟಿಡರ್ ಮೋಹನ್ ಮೋಸದಿಂದ 10 ರಿಂದ 15 ಕೋಟಿ ರೂ.ಗಳ ಸುಳ್ಳು ಲೆಕ್ಕ ನೀಡಿ ಮೋಸ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಭರತ್ರಾಜ್ ಅವರು ದೂರು ನೀಡಿದ್ದಾರೆ.ಅಲ್ಲದೆ, ತಂದೆ ವೆಂಕಟಪ್ಪ ಅವರ ಸಹಿಯನ್ನು ನಕಲಿ ಮಾಡಿ ಶೇರ್ಗಳನ್ನು ಸಹೋದರಿ ತೇಜವತಿ ವಿಜಯಲಕ್ಷ್ಮಿ ನಾರಾಯಣ್ ಹಾಗೂ ಪ್ರೇಮ ಜವರೇಗೌಡ ಅವರ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ.

ಸಹೋದರಿ ತೇಜವತಿ ಅವರು ತಮ್ಮ ತಂದೆಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದು, ತಾವು ಭೇಟಿಯಾಗಲು ಬಿಡದೆ ಬೆದರಿಕೆ ಹಾಕಿದ್ದಲ್ಲದೆ ಯಾವುದೋ ಔಷಗಳನ್ನು ಅವರಿಗೆ ಕೊಟ್ಟು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತೊಂದರೆ ಉಂಟುಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಸಹೋದರಿ ತೇಜವತಿ, ಪ್ರೇಮಾ ಹಾಗೂ ಚೌಡರೆಡ್ಡಿ ಮತ್ತು ಮೋಹನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಭರತ್ರಾಜ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News