Friday, May 10, 2024
Homeರಾಜ್ಯಲೋಕಸಭಾ ಚುನಾವಣೆ ಬೆನ್ನಲ್ಲೇ ಸಿಎಂ ಕಡತ ಯಜ್ಞ

ಲೋಕಸಭಾ ಚುನಾವಣೆ ಬೆನ್ನಲ್ಲೇ ಸಿಎಂ ಕಡತ ಯಜ್ಞ

ಬೆಂಗಳೂರು,ಮಾ.16- ಲೋಕಸಭಾ ಚುನಾವಣೆ ಘೋಷಣೆಯಾಗುವ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡತ ಯಜ್ಞಕ್ಕೆ ಕೈ ಹಾಕಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಕೇಂದ್ರ ಚುನಾವಣಾ ಆಯೋಗ ಮಾಧ್ಯಮ ಗೋಷ್ಠಿಯನ್ನು ಕರೆದಿದೆ. ಬಹುತೇಕ ಲೋಕಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಲಿದ್ದು, ತತ್ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಮುಂದಿನ 2 ತಿಂಗಳ ಕಾಲ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದು, ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಬೇರೆ ಯಾವುದೇ ಯೋಜನೆಗಳಿಗೆ ಮಂಜೂರಾತಿ ನೀಡುವುದು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಸಂಪುಟದ ವಿವಿಧ ಸಚಿವರು ಮುಖ್ಯಮಂತ್ರಿಯವರ ಬೆನ್ನು ಬಿದ್ದಿದ್ದು, ಬಾಕಿ ಇರುವ ಕಡತಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಬೃಹತ್ ಮಧ್ಯಮ ಕೈಗಾರಿಕೆ, ಲೋಕೋಪಯೋಗಿ, ಕೆಐಡಿಪಿ, ಹಿಂದುಳಿದ ವರ್ಗಗಳು, ಕನ್ನಡ ಮತ್ತು ಸಂಸ್ಕøತಿ, ವಸತಿ, ಅಲ್ಪಸಂಖ್ಯಾತರ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಕಡತಗಳಿಗೆ ತರಾತುರಿಯಲ್ಲಿ ಅನುಮೋದನೆ ಪಡೆದುಕೊಳ್ಳುವ ಪ್ರಯತ್ನಗಳಾಗಿವೆ.

ಮುಖ್ಯಮಂತ್ರಿಯವರು ಇಂದು ತಮ್ಮ ಅಕೃತ ನಿವಾಸದಿಂದ ಹೊರಹೋಗಿದ್ದು ರಹಸ್ಯ ಸ್ಥಳದಲ್ಲಿ ಕುಳಿತು ಕಡತಗಳನ್ನು ಇತ್ಯರ್ಥಪಡಿಸುವುದರಲ್ಲಿ ಕಾರ್ಯೋನ್ಮುಖರಾಗಿದ್ದರು. ಇದಕ್ಕೂ ಮುನ್ನ ಅಕೃತ ನಿವಾಸ ಕಾವೇರಿಯಲ್ಲಿ ನೂರಾರು ಜನ ಅರ್ಜಿಗಳೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು.

RELATED ARTICLES

Latest News