Friday, November 22, 2024
Homeರಾಷ್ಟ್ರೀಯ | Nationalಮಧ್ಯಪ್ರದೇಶದಲ್ಲಿ 340 ಕೋಟಿ ರೂ.ಮೌಲ್ಯದ ಮಾದಕ ವಸ್ತು, ನಗದು ಜಪ್ತಿ

ಮಧ್ಯಪ್ರದೇಶದಲ್ಲಿ 340 ಕೋಟಿ ರೂ.ಮೌಲ್ಯದ ಮಾದಕ ವಸ್ತು, ನಗದು ಜಪ್ತಿ

ಭೋಪಾಲ್,ನ.18- ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅಕ್ಟೋಬರ್ 9 ರಿಂದ ಜಾರಿಗೆ ಬಂದ ನಂತರ ಇದುವರೆಗೂ 40.18 ಕೋಟಿ ಮೌಲ್ಯದ ನಗದು ಮತ್ತು ಸುಮಾರು 300 ಕೋಟಿ ಮೌಲ್ಯದ ಮದ್ಯ, ಮಾದಕ ವಸ್ತುಗಳು, ಆಭರಣಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಜ್ಯದ 230 ವಿಧಾನಸಭಾ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆದಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಸುಮಾರು ಶೇ.76 ರಷ್ಟು ಮತದಾನವಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ಅವರು, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ನೀತಿ ಸಂಹಿತೆ ಜಾರಿಯಾದಾಗಿನಿಂದ ರಾಜ್ಯಾದ್ಯಂತ ಜಾರಿ ಸಂಸ್ಥೆಗಳು ನಿರಂತರ ಕ್ರಮ ಕೈಗೊಂಡಿವೆ.

ಸೈಬರ್ ಪ್ರಕರಣ ಭೇದಿಸಲು 4 ವಿಶೇಷ ತಂಡ ರಚನೆ

ಫ್ಲೈಯಿಂಗ್ ಸರ್ವೆಲೆನ್ಸ್ ಟೀಮ್ (ಎಫ್‍ಎಸ್‍ಟಿ), ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ (ಎಸ್‍ಎಸ್‍ಟಿ) ಮತ್ತು ಪೊಲೀಸರ ಜಂಟಿ ತಂಡವು ಸುಮಾರು 339.95 ಕೋಟಿ ಮೌಲ್ಯದ ಅಕ್ರಮ ಮದ್ಯ, ಮಾದಕ ದ್ರವ್ಯಗಳು, ನಗದು, ಅಮೂಲ್ಯವಾದ ಲೋಹಗಳು, ಚಿನ್ನ, ಬೆಳ್ಳಿ, ಆಭರಣಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.

ಅಕ್ಟೋಬರ್ 9ರಿಂದ ನವೆಂಬರ್ 16ರವರೆಗೆ ಈ ಜಂಟಿ ತಂಡಗಳು 40.18 ಕೋಟಿ ನಗದು, 65.56 ಕೋಟಿ ಮೌಲ್ಯದ 34.68 ಲಕ್ಷ ಲೀಟರ್ ಅಕ್ರಮ ಮದ್ಯ, 17.25 ಕೋಟಿ ಮೌಲ್ಯದ ಮಾದಕ ವಸ್ತು, 92.76 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತಿತರ ಅಮೂಲ್ಯ ಲೋಹಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ. 124.18 ಕೋಟಿ ಎಂದು ರಾಜನ್ ಹೇಳಿದರು.

2018 ರ ಚುನಾವಣೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಯಲ್ಲಿ ಇಂತಹ ಕ್ರಮದಲ್ಲಿ 72.93 ಕೋಟಿ ಮೌಲ್ಯದ ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸೂಚಿಸಿದರು.

RELATED ARTICLES

Latest News