ವಿಷ ಆಹಾರ ಸೇವಿಸಿ 30 ಮಕ್ಕಳು ಅಸ್ವಸ್ಥ

ಮದ್ದೂರು,ಸೆ.17- ತಾಲೂಕಿನ ಅಂಬರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ 30 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಶಾಲೆಯಲ್ಲಿ ಒಟ್ಟು 53 ವಿದ್ಯಾರ್ಥಿಗಳಿದ್ದು, 48 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಮಧ್ಯಾಹ್ನದ ಬಿಸಿಯೂಟದ ಸಾಂಬಾರಿಗೆ ಹಲ್ಲಿ ಬಿದ್ದಿದ್ದು, ಮಕ್ಕಳು ಊಟದ ತಟ್ಟೆಯಲ್ಲಿ ಹಲ್ಲಿಯ ತುಂಡುಗಳು ಕಾಣಿಸಿಕೊಂಡು ಶಿಕ್ಷಕರಿಗೆ ತಿಳಿಸಿದಾಗ ಮುಖ್ಯ ಶಿಕ್ಷಕಿ ಲಕ್ಷ್ಮೀ ಮಕ್ಕಳು ಊಟ ಮಾಡದಂತೆ ತಡೆದು ತಕ್ಷಣ ಮಕ್ಕಳಿಗೆ ಉಪ್ಪಿನ ನೀರನ್ನು ಕುಡಿಸಿ ವಾಂತಿ ಮಾಡಿಸಿದ್ದಾರೆ. ನಂತರ ಮಕ್ಕಳಲ್ಲಿ ವಾಂತಿ […]

ಆಟೋ-ಕಾರು ಮುಖಾಮುಖಿ ಡಿಕ್ಕಿ: ಮೂವರ ಸಾವು

ಮಳವಳ್ಳಿ.ಜು.14- ತಾಲ್ಲೂಕಿನ ಹೊರವಲಯ ಕಣಗಲ್ ಬಳಿ ಚಾಮರಾಜನಗರ-ಮಳವಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ತಾಲ್ಲೂಕಿನ ಮಾರೇಹಳ್ಳಿ ಗ್ರಾಮದ ಕಣಿಗಲ್ ಬಳಿಯ ರಾತ್ರಿ ಸಮಾರು 12.20ರಲ್ಲಿ ಈ ದುರಂತ ಘಟನೆ ನಡೆದಿದೆಮದ್ದೂರು ತಾಲ್ಲೂಕಿನ ಹುಲಿಗೆರೆಪುರ ಗ್ರಾಮದ ನಿವಾಸಿ ಶ್ರೀನಿವಾಸ್(42) ಹಾಗೂ ಮಳವಳ್ಳಿ ತಾಲ್ಲೂಕಿನ ಕಣಿಕಹಳ್ಳಿ ಗ್ರಾಮದ ನಿವಾಸಿಗಳಾದ ರವಿಕುಮಾರ್(40) ಭಾಸ್ಕರ್(45) ಸಾವುನ್ನಪಿದ್ದ ದುರ್ದೈವಿಗಳಾಗಿದ್ದಾರೆ. ರವಿಕುಮಾರ್ ಮತ್ತು […]

ಸಂಸದೆ ಸುಮಲತಾ ವಿರುದ್ಧ ಶಾಸಕರ ಅಸಮಾಧಾನ

ಮಂಡ್ಯ, ಮಾ.9- ಉಭಯ ಸದನಗಳ ಅಧಿವೇಶನ ನಡೆಯುವ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಶಾಸಕರು ಸದಸ್ಯರಾಗಿರುವ ಸಕ್ಷಮ ಪ್ರಾಧಿಕಾರಗಳ ಸಭೆ ಕರೆಯಬಾರದು ಎಂಬ ಸರ್ಕಾರದ ಆದೇಶವಿದ್ದರೂ ಸಂಸದೆ ಸುಮಲತಾ ಅಂಬರೀಶ್ ದಿಶಾ ಸಮಿತಿ ಸಭೆ ನಡೆಸಿ ಸರ್ಕಾರದ ಆದೇಶವನ್ನು ಧಿಕ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ಉಭಯ ಸದನಗಳಲ್ಲೂ ನಡೆಯುತ್ತಿದ್ದು, ಶಾಸಕರು ಪಾಲ್ಗೊಂಡು ಚರ್ಚೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ ಮಂಡ್ಯದಲ್ಲಿ ದಿಶಾ ಸಮಿತಿ ಸಭೆ ನಡೆಸಿರುವುದರಿಂದ ಅವರು ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ದಿಶಾ ಸಭೆಯನ್ನು […]

ಕೊಟ್ಟ ಮಾತಿನಂತೆ ಅಸಹಾಯಕ ಯುವತಿಯ ಅದ್ದೂರಿ ಮದುವೆ ಮಾಡಿದ ಶಾಸಕ ಪುಟ್ಟರಾಜು

ಮೇಲುಕೋಟೆ, ಫೆ.28- ಅಸಹಾಯಕಳಾಗಿದ್ದ ಯುವತಿಗೆ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಲ್ಲದೆ ಕುಟುಂಬಕ್ಕೆ ಬದುಕಲು ನೆಲೆ ಕಲ್ಪಿಸುವ ಮೂಲಕ ಶಾಸಕ ಸಿ.ಎಸ್. ಪುಟ್ಟರಾಜು ಮಾನವೀಯತೆ ಮೆರೆದಿದ್ದಾರೆ. ಮನೆಯ ಯಜಮಾನನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಾಸಕರು ಮೃತನ ಪುತ್ರಿಗೆ ವಿವಾಹ ನೆರವೇರಿಸಿ ಇಡೀ ಕುಂಟುಂಬದಲ್ಲಿ ಸಂತಸ ತಂದು ಕಟ್ಟಿಕೊಟ್ಟಿದ್ದಾರೆ # ಘಟನೆಯ ವಿವರ: ಜಕ್ಕನಹಳ್ಳಿ ಗ್ರಾಮದ ಯುವತಿ ಸಹನ (ಗೊಂಬೆ) ಮತ್ತು ಅನಿಲ್ ರಾಜ್ ಮದುವೆ ಮೇಲುಕೋಟೆಯ ಆದಿಚಂಚನಗಿರಿ ಸಮುದಾಯ ಭವನದಲ್ಲಿ ಶಾಸಕರ […]

ಮಕ್ಕಳು ಸೇರಿ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಕೊಚ್ಚಿ ಕೊಂದ ದುಷ್ಕರ್ಮಿಗಳು..!

ಮಂಡ್ಯ, ಫೆ.6- ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಕೆಆರ್‍ಎಸ್‍ನ ಬಜಾರ್ ಲೈನ್‍ನಲ್ಲಿ ನಡೆದಿದೆ.ಗುಜರಾತ್ ಮೂಲದ ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4), ಗೋವಿಂದ (8) ಕೊಲೆಯಾಗಿದ್ದಾರೆ. ಬಜಾರ್ ಲೈನ್‍ನಲ್ಲಿ ವಾಸವಿದ್ದ ಈ ಕುಟುಂಬದವರ ಮನೆಗೆ ನಿನ್ನೆ ತಡ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು, ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವ್ಯಾಪಾರಿ ಸಮುದಾಯವಾದ ಬೈಯಾದ್ ಜನಾಂಗಕ್ಕೆ ಸೇರಿರುವ ಗಂಗರಾಮ್ […]

ಯುವಕರ ಪ್ರತಿಭೆ ಹೊರತೆಗೆಯುವ ಕಾರ್ಯವೇ ಯುವ ಜನೊತ್ಸವ : ಸಿಎಂ

ಮಂಡ್ಯ,ಜ.6-ಯುವಕರ ಪ್ರತಿಭೆಯನ್ನು ಹೊರತೆಗೆಯುವಂತಹ ಕಾರ್ಯವೇ ಯುವ ಜನೊತ್ಸವ. ಯುವಕರು ದೇಶದ ದೊಡ್ಡ ಆಸ್ತಿ. ಆಗಾಗಿ ಯುವಕರನ್ನು ಎಲ್ಲಾ ರಂಗದಲ್ಲೂ ಪ್ರೋತ್ಸಾಹಿಸುವುದು ಬಹಳ ಮುಖ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ಯುವ ಜನೋತ್ಸವ-2022ರ ಸಮಾರೂಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಯುವ ಜನೋತ್ಸವಕ್ಕೆ ಪ್ರಕೃತಿಯಲ್ಲಿ ಶಕ್ತಿ ಎಂದರೆ ಅದು ಯುವ ಶಕ್ತಿ. ಯಾವ ದೇಶದಲ್ಲಿ ಯುವಕರು ಹೆಚ್ಚಿದ್ದಾರೆ ಆ ದೇಶ ಭವ್ಯವಾದ ಭವಿಷ್ಯವಿದೆ. ಯುವಕರಲ್ಲಿ ಶಿಸ್ತು ಇರಬೇಕು ಶಿಸ್ತು ಇದ್ದರೆ […]