Thursday, December 5, 2024
Homeರಾಜ್ಯಅ.17ರಂದು ತೀರ್ಥೋದ್ಭವ

ಅ.17ರಂದು ತೀರ್ಥೋದ್ಭವ

Cauvery Tirthodbhava on Oct.17

ಮಡಿಕೇರಿ, ಅ.14– ರಾಜ್ಯದ ಜೀವನದಿ ಕಾವೇರಿಯ ಉಗಮಸ್ಥಾನ ಭಾಗಮಂಡಲದಲ್ಲಿ ಅ.17ರಂದು ಬೆಳಗ್ಗೆ 7.40ಕ್ಕೆ ಶುಭ ತುಲಾ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ ಎಂದು ದೇಗುಲ ಅರ್ಚಕರು ತಿಳಿಸಿದ್ದಾರೆ.

ತೀರ್ಥ ಕುಂಡಿಕೆಯಲ್ಲಿ ಅ. 17 ರಂದು ಕಾವೇರಿ ನೀರು ತೀರ್ಥ ರೂಪದಲ್ಲಿ ಉಗಮವಾಗಲಿದೆ. ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಹಿಂದಿನ ಕಾಲದಿಂದಲೂ ನಡೆದುಬಂದಿದ್ದು . ಅದರಂತೆ ಪ್ರತಿವರ್ಷ ತೀರ್ಥೋದ್ಭವದ ಮುಹೂರ್ತ ನಗದಿಯಾಗಿದೆ.

ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಜಿಲ್ಲಾಡಳಿತ ಈಗಾಗಲೇ ಸಿದ್ದತೆ ಆರಂಭಿಸಿದೆ.ಪೊಲೀಸರು ಕೂಡ ಬಿಗಿ ಭದ್ರತೆ ಕಲ್ಪಿಸಲಿದ್ದು ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಿಸುತ್ತಿದ್ದು ಮಡಿಕೇರಿಯಲ್ಲಿ ಹಬ್ಬದ ವಾತಾವರಣ ಮೂಡಿದೆ.

RELATED ARTICLES

Latest News