Thursday, January 23, 2025
Homeಬೆಂಗಳೂರುಕೊರಿಯರ್‌ ಏಜೆನ್ಸಿಗಳ ಮೇಲೆ ಸಿಸಿಬಿ ದಾಳಿ..

ಕೊರಿಯರ್‌ ಏಜೆನ್ಸಿಗಳ ಮೇಲೆ ಸಿಸಿಬಿ ದಾಳಿ..

ಬೆಂಗಳೂರು, ಡಿ.7- ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಿಸಿಬಿ ಪೊಲೀಸರು ಇಂದು ಕೊರಿಯರ್‌ ಏಜೆನ್ಸಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದ್ದಾರೆ. ಹೊರರಾಜ್ಯಗಳಿಂದ ಬಂದಿರುವಂತಹ ಪಾರ್ಸಲ್‌ಗಳು ಸೇರಿದಂತೆ ಸ್ಥಳೀಯ ಪಾರ್ಸಲ್‌ಗಳನ್ನು ಸಹ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಪೊಲೀಸರು ಶ್ವಾನದಳ ದೊಂದಿಗೆ ಪರಿಶೀಲಿಸುತ್ತಿದ್ದು,
ಸಂಜೆವರೆಗೂ ಕಾರ್ಯಾಚರಣೆ ಮುಂದುವರೆಯಲಿದೆ.

ಚಾಮರಾಜಪೇಟೆ, ಕಲಾಸಿಪಾಳ್ಯ, ಎಸ್‌‍ಆರ್‌ ನಗರ ಸೇರಿದಂತೆ ಹಲವು ಕೊರಿಯರ್‌ ಏಜೆನ್ಸಿಗಳ ಮೇಲೆ ಬೆಳಗ್ಗೆಯಿಂದಲೇ ದಾಳಿ ಮಾಡಿ ಪಾರ್ಸಲ್‌ಗಳನ್ನು ಪರಿಶೀಲಿಸಿದ್ದು, ಈವರೆಗೂ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ. ಒಟ್ಟಾರೆ ಮಾದಕ ವಸ್ತುಗಳ ಸಾಗಾಣೆ ಮತ್ತು ಮಾರಾಟದ ಮೇಲೆ ಪೊಲೀಸರು ನಗರದಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ.

ಇತ್ತೀಚೆಗೆ ನಗರ ಪೊಲೀಸರು ಆರು ಕೋಟಿ ರೂ. ಹೆಚ್ಚು ಬೆಳೆಬಾಳುವ ಮಾದಕ ವಸ್ತುಗಳು ಹಾಗೂ ಗಾಂಜಾವನ್ನು ವಶಪಡಿಸಿಕೊಂಡಿದ್ದರು.

RELATED ARTICLES

Latest News