Friday, November 22, 2024
Homeರಾಜ್ಯಮಗುವನ್ನು ಕೊಲ್ಲುವ ಮುನ್ನ ಪತಿಯೊಂದಿಗೆ ಮೊಬೈಲ್‍ನಲ್ಲಿ ಜಗಳವಾಡಿದ್ಧ ಸುಚನಾ ಸೇಠ್

ಮಗುವನ್ನು ಕೊಲ್ಲುವ ಮುನ್ನ ಪತಿಯೊಂದಿಗೆ ಮೊಬೈಲ್‍ನಲ್ಲಿ ಜಗಳವಾಡಿದ್ಧ ಸುಚನಾ ಸೇಠ್

ಬೆಂಗಳೂರು,ಜ.11- ತನ್ನ ನಾಲ್ಕು ವರ್ಷದ ಮಗುವನ್ನು ತಾಯಿಯೇ ಹತ್ಯೆ ಮಾಡಿರುವ ಪ್ರಕರಣ ಇನ್ನಷ್ಟು ರೋಚಕ ತಿರುವುಗಳನ್ನು ಪಡೆದುಕೊಳ್ಳತೊಡಗಿದೆ. ಕೆಲವೇ ದಿನಗಳ ಮೊದಲು ಮಗನನ್ನು ಭೇಟಿಯಾಗುವಂತೆ ಪತಿಗೆ ಸುಚನಾ ಕೇಳಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಚನಾ ಸೇಠ್ ಅವರು ಗೋವಾದ ಹೊಟೇಲ್ ಕೊಠಡಿಯೊಂದರಲ್ಲಿ ತನ್ನ ಪತಿಯೊಂದಿಗೆ ಮೊಬೈಲ್‍ನಲ್ಲಿ ನಡೆದ ಜಗಳದ ನಂತರ ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಮಗುವಿನ ಸಾವಿನ ಬಗ್ಗೆಯಾಗಲಿ ಅಥವಾ ಅದರಲ್ಲಿ ತನ್ನ ಪಾತ್ರದ ಬಗ್ಗೆಯಾಗಲಿ ಮಹಿಳೆ ಇದುವರೆಗೆ ಯಾವುದೇ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

39 ವರ್ಷ ವಯಸ್ಸಿನ ಸುಚನಾ ಜ. 8 ರಂದು ತನ್ನ ಮಗನನ್ನು ಕೊಂದು ಶವವನ್ನು ಸೂಟ್‍ಕೇಸ್‍ನಲ್ಲಿ ತುಂಬಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಗುವನ್ನು ಬಟ್ಟೆ ಅಥವಾ ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಸೇಠ್ ಅವರನ್ನು ಪೊಲೀಸರು ಅದೇ ದಿನ ಕರ್ನಾಟಕದ ಚಿತ್ರದುರ್ಗದಿಂದ ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.

ತನಿಖೆ ವೇಳೆ, ಜ.6ರಂದು ತನ್ನ ಪತಿ ವೆಂಕಟ್ ರಾಮನ್‍ಗೆ ಸುಚನಾ, ಸಂದೇಶ ಕಳುಹಿಸಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮರುದಿನ ಮಗುವನ್ನು ಭೇಟಿಯಾಗಬಹುದು ಎಂದು ಆಕೆ ತಿಳಿಸಿದ್ದಳು. ಹಾಗಾಗಿ ರಾಮನ್ ಅವರು ಬೆಂಗಳೂರಿಗೆ ಬಂದಿದ್ದರು. ಆದರೆ ಆ ದಿನ ಪತ್ನಿ ಮತ್ತು ಮಗು ಬೆಂಗಳೂರಿನಲ್ಲಿಲ್ಲದೆ ಗೋವಾಗೆ ಹೋಗಿರುವ ಕಾರಣ ಮಗನನ್ನು ಭೇಟಿಯಾಗಲು ತಂದೆಗೆ ಸಾಧ್ಯವಾಗದೆ ಅದೇ ದಿನ ಅವರು ಇಂಡೋನೇಷ್ಯಾಕ್ಕೆ ತೆರಳಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಂಪತಿಯ ವಿಚ್ಛೇದನದ ದಾಖಲೆಗಳ ಪ್ರಕಾರ, ಸೇಠ್ ಅವರು ಆಗಸ್ಟ್ 2022 ರಲ್ಲಿ ತನ್ನ ಪತಿ ವೆಂಕಟ್ ರಾಮನ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದರು. ತನಗೆ ಮತ್ತು ತನ್ನ ಮಗನಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದರು. ಆದರೆ ವೆಂಕಟ್ ರಾಮನ್ ನ್ಯಾಯಾಲಯದಲ್ಲಿ ಆರೋಪವನ್ನು ನಿರಾಕರಿಸಿದ್ದರು. ಪತ್ನಿಯ ಮನೆಯಿಂದ ಅಥವಾ ಆಕೆ ಅಥವಾ ಮಗುವಿನೊಂದಿಗೆ ಸಂವಹನ ನಡೆಸುವುದನ್ನು ರಾಮನ್‍ಗೆ ನಿರ್ಬಂಧಿಸಿದ ವಿರುದ್ಧ ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು. ಇದು ಪತ್ನಿಯ ಅಸಮಾಧಾನಕ್ಕೆ ಕಾರಣ ಎನ್ನಲಾ ಗಿದ್ದು, ತನಿಖೆ ಮುಂದುವರೆದಿದೆ.

ಪ್ರಿಯಕರ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಪಾಪಿ ಪತ್ನಿ

ಅಮ್ಮಾ ನನ್ನನ್ನು ಏಕೆ ಕೊಂದೆ..?
ಬೆಂಗಳೂರು, ಜ.11- ಅಪ್ಪ-ಅಮ್ಮನ ನಡುವಿನ ಮನಸ್ತಾಪಕ್ಕೆ ಪ್ರಾಣತೆತ್ತ ಮಗು ಕೇಳುತ್ತಿದೆ ಅಮ್ಮಾ…. ನನ್ನನ್ನು ಯಾಕೆ ಕೊಂದೆ ಎಂದು…..!!!!! ಪ್ರೀತಿಯಿಂದ ಮಾತನಾಡಿಸುತ್ತಿದ್ದ ಅಪ್ಪನ ಕೈಯಲ್ಲಿದ್ದ ನಾಲ್ಕು ವರ್ಷದ ಮಗುವಿನ ಮೃತದೇಹವನ್ನು ನೋಡಿದಾಗ ಆ ಮಗು ಅಮ್ಮನನ್ನು ಹೀಗೆ ಪ್ರಶ್ನೆ ಮಾಡುತ್ತಿರುವಂತೆ ಭಾಸವಾಗುತ್ತಿತ್ತು.

ಅಪ್ಪ-ಅಮ್ಮನನ್ನೆ ನಂಬಿದ್ದ ಈ ಮುಗ್ದ ಮಗುವನ್ನು ಯಾರೆ ನೋಡಿದರೂ ಹೃದಯ ಕರಗುತ್ತದೆ. ಅಂತಹದ್ದರಲ್ಲಿ ತನ್ನ ಕರುಳ ಕುಡಿಯನ್ನೇ ಕೊಂದಿರುವ ನಿರ್ಧಯಿ ತಾಯಿಗೆ ತಪ್ಪಿನ ಅರಿವೇ ಆಗಲಿಲ್ಲವೆ…. ಹೆತ್ತ ತಾಯಿಯ ಇಂತಹ ಕ್ರೌರ್ಯ ನೋಡಿದರೆ ಮಾನವೀಯ ಮೌಲ್ಯಗಳು ಎತ್ತ ಸಾಗುತ್ತಿದೆ ಎಂಬ ಭಾಸವಾಗುತ್ತದೆ.

ಇದು ಪಾಶ್ಚಿಮಾತ್ಯ ಸಂಸ್ಕøತಿಯ ಪ್ರಭಾವವಿರಬಹುದೇ… ಈ ಪ್ರಕರಣದಲ್ಲಿ ಅತ್ಯಂತ ಪ್ರತಿಭಾನ್ವಿತೆಯಾಗಿರುವ ಸುಚನಾ ಸೇಠ್ ಅವರು ತಾನೂ ಒಬ್ಬ ತಾಯಿ ಎಂಬುದನ್ನು ಮರೆತಿದ್ದಾರೆ. ದಾಂಪತ್ಯದಲ್ಲಿ ಏನೇ ಮನಸ್ತಾಪವಿದ್ದರೂ, ಎಷ್ಟೇ ವೈಷಮ್ಯವಿದ್ದರೂ ಮಕ್ಕಳನ್ನು ಸಾಯಿಸುವ ಹಂತಕ್ಕೆ ಹೋಗುವುದು ಅಕ್ಷಮ್ಯ ಅಪರಾಧ.

ಒಂದು ವೇಳೆ ಮಕ್ಕಳು ಕೆಟ್ಟವರಾಗುತ್ತಾರೆ. ಆದರೆ ತಾಯಿ ಎಂದೂ ಕೆಟ್ಟವರಾಗಲ್ಲ ಎಂದು ಕೇಳಿದ್ದೇವೆ. ಆದರೆ ಈ ಪ್ರಕರಣದಲ್ಲಿ ಮಗು ಯಾವುದೇ ತಪ್ಪು ಮಾಡಿಲ್ಲ. ಅಪ್ಪನ ಜೊತೆ ಮಾತನಾಡಿದಕ್ಕೆ ಇಷ್ಟು ದೊಡ್ಡ ಶಿಕ್ಷೆಯೇ. ಇಂತಹ ಕ್ರೂರಿ ತಾಯಿಗೆ ಆ ದೇವರೇ ಶಿಕ್ಷೆ ಕೊಡಬೇಕು. ತಾಯಿ ಎಂಬ ಪದಕ್ಕೆ ಈ ಮಹಿಳೆ ಅವಮಾನ ಮಾಡಿದ್ದಾರೆ.

ತಂದೆ ರಾಮನ್ ಅವರು ಮಗುವಿನ ಮೃತದೇಹವನ್ನು ಕೈಯಲ್ಲಿ ಹಿಡಿದುಕೊಂಡು ಅಂತ್ಯಸಂಸ್ಕಾರಕ್ಕೆ ನಿಂತಿದ್ದನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ. ಆ ದೃಶ್ಯ ನೋಡಿದವರ ಕಣ್ಗಾಲೆಗಳು ಒದ್ದೆಯಾಗಿದೆ. ಎಷ್ಟೇ ಪ್ರತಿಭಾವಂತರಾದರೇನು, ಕೋಟ್ಯಾೀಶ್ವರರಾದರೇನು, ಮಾನವೀಯತೆ, ಮನುಷ್ಯತ್ವ ಎಂಬುದು ಬಹಳ ಮುಖ್ಯ ಹಾಗೂ ಮಹಿಳೆಯರು ಉದ್ಯೋಗ ಮಾಡಿ, ಸ್ವಂತ ದುಡಿಮೆಯಿಂದ ಹಣವನ್ನೆನೋ ಸಂಪಾದಿಸುತ್ತಿದ್ದಾರೆ, ಆದರೆ ಮಾನವೀಯತೆಯನ್ನು ಮರೆಯುತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಮಾನವನಾಗುವೆಯಾ, ಇಲ್ಲ ದಾನವನಾಗುವೆಯಾ, ಮಾನವ ಕುಲಕೇ ಮಣ್ಣಾಗುವೆಯಾ….. ಎಂಬ ಹಾಡಿನ ಸಾಲು ನೆನಪಾಗುತ್ತಿದೆ. ದಾಪಂತ್ಯದಲ್ಲಿ ಏನೇ ವಿರಸವಿದ್ದರೂ ಮಕ್ಕಳನ್ನು ಬಲಿಕೊಡುವ ಹಂತಕ್ಕೆ ಹೋಗಬಾರದು.

RELATED ARTICLES

Latest News