Saturday, February 24, 2024
Homeರಾಷ್ಟ್ರೀಯಪ್ರಿಯಕರ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಪಾಪಿ ಪತ್ನಿ

ಪ್ರಿಯಕರ ಜೊತೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಪಾಪಿ ಪತ್ನಿ

ಕೋಲಾರ,ಜ.11- ಅಕ್ರಮ ಸಂಬಂದಕ್ಕೆ ಅಡ್ಡಿಯಾದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಬೇತಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಜಿಎಫ್ ತಾಲ್ಲೂಕು ಕೋಗಿಲಹಳ್ಳಿ ಗ್ರಾಮದ ಶಂಕರ ರೆಡ್ಡಿ ಕೊಲೆಯಾದ ವ್ಯಕ್ತಿ. ಇವರನ್ನು ಕೊಂದಿದ್ದ ಪತ್ನಿ ಸುನಂದ ಹಾಗೂ ಆಕೆಯ ಪ್ರಿಯಕರ ವೆಂಕಟೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆ ವಿವರ: ಕಳೆದ ಹದಿನೈದು ವರ್ಷಗಳ ಹಿಂದೆ ಶಂಕರ ರೆಡ್ಡಿ -ಸುನಂದ ವಿವಾಹವಾಗಿತ್ತು ಆರಂಭದಲ್ಲಿ ಇಬ್ಬರು ಸುಖವಾಗಿದ್ದರು ಅವರಿಗಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದರು ಆದರೆ ಕಳೆದ ವರ್ಷ ಮಳೆ ಬಾರದೆ ನೀರಿನ ಅಭಾವ ಉಂಟಾಗಿ ವವಸಾಯ ಮಾಡಲಾಗದೆ ಬೆಂಗಳೂರಿನ ವೈಟ್‍ಫೀಲ್ಡ್ ಬಳಿಯ ನಲ್ಲೂರಹಳ್ಳಿ ಬಳಿ ಟೀ ಅಂಗಡಿಯೊಂದನ್ನು ಇಟ್ಟುಕೊಂಡು ಅಲ್ಲೇ ಪುಟ್ಟದೊಂದು ಬಾಡಿಗೆ ಮನೆ ಮಾಡಿಕೊಂಡು ,ನೆಮ್ಮದಿಯ ಜೀವನ ನೆಡೆಸುತ್ತಿದ್ದರು.

ಜೀವನ ತಕ್ಕಮಟ್ಟಿಗೆ ನಡೆದುಕೊಂಡು ಹೋಗುತ್ತಿತ್ತು, ಆದರೆ ಕೆಲವು ವರ್ಷಗಳ ಹಿಂದೆ ಅಲ್ಲೇ ಡ್ರೈವರ್ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಎಂಬಾತ ಶಂಕರ್‍ರೆಡ್ಡಿ ವಾಸವಿದ್ದ ಮನೆಯ ಬಳಿ ಬಾಡಿಗೆಗೆ ಬಂದಿದ್ದ, ವೆಂಕಟೇಶ್‍ಗೆ ಶಂಕರ್‍ರೆಡ್ಡಿ ಕುಟುಂಬದೊಂದಿಗೆ ಪರಿಚಯವಾಗಿತ್ತು ಅದೇ ಪರಿಚಯ ಸಲುಗೆಯಾಗಿ ಬೆಳೆದಿತ್ತು, ಸುನಂದಾ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ಕೋಟ್ಯಂತರ ಹಿಂದೂಗಳ ಭಾವನೆಗೆ ಕಾಂಗ್ರೆಸ್ ಧಕ್ಕೆ ತಂದಿದೆ : ಬಿಎಸ್‌ವೈ

ಆ ವಿಷಯ ಶಂಕರ್‍ರೆಡ್ಡಿಗೆ ತಿಳಿದು ಬೇಸರಗೊಂಡು ಅಂಗಡಿ ಮುಚ್ಚಿ ಮನೆ ಖಾಲಿ ಮಾಡಿ ಬೆಂಗಳೂರು ಬಿಟ್ಟು ಮತ್ತೆ ಕೋಗಿಲಹಳ್ಳಿ ಗ್ರಾಮಕ್ಕೆ ಇತ್ತೀಚೆಗೆ ವಾಪಸ್ಸಾಗಿದ್ದರು. ಆದರೆ ಇದು ಸುನಂದಾಗೆ ಇಷ್ಟವಿರಲಿಲ್ಲ. ಕಳೆದ ಡಿ.27 ರಂದು ಶಂಕರ್‍ರೆಡ್ಡಿಯನ್ನು ಕರೆಸಿಕೊಂಡು ಕಾರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚಾರ್ಲಹಳ್ಳಿ ಬಳಿ ಜಾಕ್ ರಾಡ್‍ನಿಂದ ಹೊಡೆದು ಕೊಲೆ ಮಾಡಿ ನಂತರ ಶವವನ್ನು ಬೆಂಗಳೂರಿನ ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂಹಳ್ಳಿ ಬಳಿಯ ದೊಡ್ಡ ಚರಂಡಿಯೊಂದಕ್ಕೆ ಬಿಸಾಡಿ ನಂತರ ತಲೆ ಮರೆಸಿಕೊಂಡಿದ್ದ.

2 ದಿನದ ನಂತರ ಬೇತಮಂಗಲ ಪೊಲೀಸ್ ಠಾಣೆಗೆ ಬಂದ ಸುನಂದ ತನ್ನ ಪತಿ ಶಂಕರ್‍ರೆಡ್ಡಿ ಕಾಣೆಯಾಗಿದ್ದಾರೆಂದು ದೂರು ನೀಡಿದ್ದರು. ದೂರಿನ ಹಿನ್ನೆಲೆ ಬೇತಮಂಗಲ ಪೊಲೀಸರು ನಾಪತ್ತೆ ಪ್ರಕರಣ ದಾಖಲು ಮಾಡಿಕೊಂಡಿದ್ದರು ಇದಾದ ಕೆಲವೇ ಗಂಟೆಯಲ್ಲಿ ಶಂಕರ್ ರೆಡ್ಡಿಯ ಸಂಬಂಧಿಕ ಬಾಬು ರೆಡ್ಡಿ ಎಂಬಾತ ಮತ್ತೊಂದು ದೂರು ನೀಡಿ ಸುನಂದ ಕೊಲೆ ಮಾಡಿಸಿದ್ದಾಳೆ ಎಂದು ಆರೋಪಿಸಿದ್ದರು.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಈ ಎರಡು ದೂರನ್ನು ಸ್ವೀಕರಿಸಿದ್ದ ಕಳೆದ ಹತ್ತು ದಿನಗಳಿಂದ ಕಾಣೆಯಾದವನು ಜೀವಂತವಾಗಿದ್ದಾನಾ, ಇಲ್ವಾ? ಒಂದು ವೇಳೆ ಅವನು ಕೊಲೆಯಾಗಿದ್ದರೆ ಆತನ ಶವ ಎಲ್ಲಿದೆ ಅನ್ನೋದನ್ನು ಪೊಲೀಸರು ಹುಡುಕಾಡಿದರು.ಆದರೆ ಯಾವುದೇ ಮಾಹಿತಿ ಸಿಗಲಿಲ್ಲ. ಅಷ್ಟೇ ಅಲ್ಲದೆ ಸುನಂದ ಪ್ರಿಯಕರ ವೆಂಕಟೇಶ್ ಕೂಡಾ ನಾಪತ್ತೆಯಾಗಿದ್ದ. ಹಾಗಾಗಿ ಪೊಲೀಸರಿಗೆ ಇದೊಂದು ಪ್ರಕರಣ ಗೊಂದಲದ ಗೂಡಾಗಿತ್ತು.

ಈ ವೇಳೆ ಇದ್ದಕ್ಕಿದಂತೆ ವೆಂಕಟೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆತನ ವಿಚಾರಣೆ ಮಾಡಿದ ಪೊಲೀಸರಿಗೆ ಅಸಲಿಯತ್ತು ಒಂದೊಂದಾಗಿ ಗೊತ್ತಾಗಿ ಕೊಲೆ ರಹಸ್ಯ ಬಯಲಿಗೆ ಬಂದಿದೆ. ನಾಪತ್ತೆಯಾಗಿದ್ದ ಸುನಂದಾ ಕೂಡ ಬಲೆಗೆ ಬಿದ್ದಿದ್ದು ಇಬ್ಬರನ್ನು ಬಂಧಿಸಲಾಗಿದೆ ಒಟ್ಟಾರೆ ಚಪಲಕ್ಕೆ ಬಿದ್ದ ಹೆಣ್ಣು ಸುಂದರವಾಗಿದ್ದ ಸಂಸಾರವನ್ನು ಹೇಗೆ ಹಾಳು ಮಾಡಬಹುದು ಅನ್ನೋದಕ್ಕೆ ಇದೊಂದು ಜೀವಂತ ಸಾಕ್ಷಿ,

RELATED ARTICLES

Latest News