Friday, November 22, 2024
Homeರಾಜ್ಯಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗಳಿಗೆ ಹೈಕೋರ್ಟ್‌ ತಡೆ : ರಾಜ್ಯಸರ್ಕಾರಕ್ಕೆ ಹಿನ್ನಡೆ

ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗಳಿಗೆ ಹೈಕೋರ್ಟ್‌ ತಡೆ : ರಾಜ್ಯಸರ್ಕಾರಕ್ಕೆ ಹಿನ್ನಡೆ

ಬೆಂಗಳೂರು,ಆ.12- ಇತಿಹಾಸ ಪ್ರಸಿದ್ಧ ನಾಡದೇವತೆ ಮೈಸೂರಿನ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದ ರಾಜ್ಯಸರ್ಕಾರಕ್ಕೆ ನ್ಯಾಯಾಲಯದಲ್ಲಿ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ.ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಮೈಸೂರಿನ ಅರಮನೆಯ ಪ್ರಮೋದಾ ದೇವಿ ಒಡೆಯರ್‌ ಅವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್‌ನ ಏಕಸದಸ್ಯ ಪೀಠ ಮುಂದಿನ ಆದೇಶದವರೆಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಚಟುವಟಿಕೆಗಳಿಗೆ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್‌‍.ಆರ್‌.ಕೃಷ್ಣಕುಮಾರ್‌ರವರು ತಡೆಯಾಜ್ಞೆ ನೀಡಿದ್ದು, ಮುಂದಿನ ಅರ್ಜಿ ವಿಚಾರಣೆಯನ್ನು ಇದೇ ತಿಂಗಳ 22 ಕ್ಕೆ ಮುಂದೂಡಿದ್ದಾರೆ.

ಅರ್ಜಿದಾರರ ಪರವಾಗಿ ವಕೀಲರಾದ ಮಾನಸಿ ಕುಮಾರ್‌ ಅವರು ವಾದ ಮಂಡಿಸಿದ್ದರು.ಕಳೆದ ಅಧಿವೇಶನದ ವೇಳೆ ವಿಧಾನಮಂಡಲದ ಉಭಯಸದನಗಳಲ್ಲಿ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆಯನ್ನು ಮಂಡಿಸಿ ಅಂಗೀಕರಿಸಲಾಗಿತ್ತು. ಆದರೆ ಈ ಕಾಯ್ದೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಾಜಮನೆತನವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಹೊಸ ಕಾಯ್ದೆಯ ಮೂಲಕ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ದೇವಸ್ಥಾನ ಕಟ್ಟಿ ತಲೆ ತಲಾಂತರಗಳಿಂದ ಪೂಜಿಸಿಕೊಂಡು ಬಂದ ಒಡೆಯರ ರಾಜಮನೆತನಕ್ಕೆ ಅನ್ಯಾಯ ಮಾಡಲಾಗಿದೆ.

ಈ ಮೂಲಕ ಚಾಮುಂಡೇಶ್ವರಿ ದೇವಾಲಯಕ್ಕೂ ಹಾಗೂ ರಾಜಮನೆತನಕ್ಕೂ ಇರುವ ಸಂಬಂಧ ಕಡಿತಗೊಳಿಸಿ ಎಲ್ಲ ಆಸ್ತಿ, ಪೂಜೆ, ವಿಧಿ ವಿಧಾನ, ಕಾಯ್ದೆ ರಚನೆ ಎಲ್ಲವೂ ಪ್ರಾಧಿಕಾರದ ಪಾಲಾಗಲಿದೆ. ಇದನ್ನು ಮಹಾರಾಣಿ ಪ್ರಮೋದಾದೇವಿ ಅವರು ಹೈಕೋರ್ಟ್‌ ಮೂಲಕ ಪ್ರಶ್ನೆ ಮಾಡಿದ್ದರು.

ಸೆಕ್ಷನ್‌ 2(ಎ) : ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಬೆಟ್ಟದ ಸಂಪೂರ್ಣ ಸೌಕರ್ಯಗಳ ಬಗ್ಗೆ ಸರ್ಕಾರದಿಂದ ತೀರ್ಮಾನ ರಸ್ತೆ, ಲೈಟ್ಸ್‌‍, ಕ್ಲೀನ್‌, ಅಂಗಡಿ, ಮಾರ್ಕೆಟ್‌, ಚರಂಡಿ, ಪೊಲೀಸ್‌‍, ಹಾಲಿನ ಅಂಗಡಿ, ಮನೋರಂಜನೆ ಕಾರ್ಯಕ್ರಮಗಳು ಸೇರಿ ಎಲ್ಲಾ ರಾಜ್ಯ ಸರ್ಕಾರದ ಅಧಿಸೂಚನೆ ಮೇಲೆ ನಡೆಸಲು ಅಧಿಕಾರ. (ಇದರಲ್ಲಿ ರಾಜಮನೆತನದ ಎಲ್ಲ ಅಧಿಕಾರ, ಮಧ್ಯಸ್ಥಿಕೆ ತೆರವು ಆಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು)

ಸೆಕ್ಷನ್‌ 3 ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ರಚನೆಯ ಅಧಿಕಾರ ಸರ್ಕಾರಕ್ಕೆ ಸೇರಿದ್ದು, ಅದರ ಅಧ್ಯಕ್ಷ ಸ್ಥಾನ ಸಿಎಂ ಎಂದು ಸರ್ಕಾರದ ಕಾಯ್ದೆಯಲ್ಲಿದೆ. ಪ್ರಾಧಿಕಾರದ ಪದಾಧಿಕಾರಿಗಳಲ್ಲಿ ರಾಜಮನೆತನವೇ ಇಲ್ಲ. ಬದಲಾಗಿ ಸ್ಥಳೀಯ, ಮಿನಿಸ್ಟರ್‌, ಶಾಸಕ, ಎಂಪಿ ಅಧಿಕಾರಿಗಳು ಆಗಿರುತ್ತಾರೆ. (ಇಲ್ಲಿ ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಮಾಡಲಾಗಿದೆ).

ಸೆಕ್ಷನ್‌ 12(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ನೌಕರರ ನೇಮಕ ಮಾಡುವ ವಿಚಾರ ಅರ್ಚಕರು ಸೇರಿ ನೌಕರರನ್ನು ನೇಮಿಸುವ ಅಧಿಕಾರ ಸರ್ಕಾರಕ್ಕೆ ನೀಡಲಾಗಿದೆ. (ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಆಗಿದೆ)

ಸೆಕ್ಷನ್‌ 14(3) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ಸಭೆಯ ತೀರ್ಮಾನಗಳ ಬಗ್ಗೆ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ. ಯಾವುದೇ ತಿರ್ಮಾನ ಇದ್ದರೂ ಅದು ಸರ್ಕಾರದ ನಿರ್ಣಯ ಮಾತ್ರ ಆಗಿರುತ್ತದೆ. (ರಾಜಮನೆತನದ ಸಂಪೂರ್ಣ ಅಧಿಕಾರವನ್ನೇ ಮೊಟಕು ಆಗಿದೆ)

ಸೆಕ್ಷನ್‌ 14(4) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಪ್ರಾಧಿಕಾರದ ತೀರ್ಮಾನಗಳನ್ನು ಜಾರಿ ಮಾಡುವಲ್ಲಿ ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ. ಪ್ರಾಧಿಕಾರದ ಬಗ್ಗೆ ರಾಜ್ಯ ಸರ್ಕಾರದ ಆದೇಶಗಳನ್ನು ಜಾರಿ ಮಾಡುವ ಅಧಿಕಾರ ಹೊಂದಿದೆ.

(ರಾಜಮನೆತನದ ಸಂಪೂರ್ಣ ಅಧಿಕಾರವೇ ಮೊಟಕು ಆಗಿದೆ)
ಸೆಕ್ಷನ್‌ 16(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ಪ್ರಾಧಿಕಾರದ ತಿರ್ಮಾನದ ಸುತ್ತೋಲೆಯೂ ಮುಖ್ಯಮಂತ್ರಿ ಅವರ ಸಹಿಯ ನಂತರವೇ ಬಿಡುಗಡೆ ಆಗಲಿದೆ. (ರಾಜಮನೆತನಕ್ಕೆ ಪ್ರಾಧಿಕಾರದ ಮಾಹಿತಿಯನ್ನು ನೀಡುವ ಅವಕಾಶದಿಂದ ವಂಚನೆ ಮಾಡಲಾಗಿದೆ)

ಸೆಕ್ಷನ್‌ 17(1) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024 ರ ಅನ್ವಯ ಮುಖ್ಯಮಂತ್ರಿಗೆ ತುರ್ತು ಯಾವುದೇ ನಿರ್ದಾರ ತೆಗದುಕೊಳ್ಳುವ ಅಧಿಕಾರ ನೀಡಲಾಗಿದೆ. ಜೊತೆಗೆ, ಸಿಎಂ ಪ್ರಾಧಿಕಾರದ ಅಧ್ಯಕ್ಷರಾಗಿರಲಿದ್ದು, ತಾವು ಭಾವಿಸಿದ ತಿರ್ಮಾನ ಮಾಡುವ ಅಧಿಕಾರ ಹೊಂದಿರುತ್ತಾರೆ. (ರಾಜಮನೆತನಕ್ಕೂ ದೇವಾಲಯದ ಪ್ರಾಧಿಕಾರಕ್ಕೆ ಅಧಿಕಾರವೇ ಕಡಿತ ಮಾಡಲಾಗಿದೆ)

ಸೆಕ್ಷನ್‌ 20(1)(ಒ) ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ 2024ರ ಅನ್ವಯ ಚಾಮುಂಡಿ ಪ್ರಾಧಿಕಾರದ ಸ್ವತ್ತಿನ ಮಾರಾಟದ ಅಧಿಕಾರ ನಿಗಮಕ್ಕೆ ಸೇರಿದೆ. ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಅಧಿಕಾರ, ಯಾವುದೇ ಆಸ್ತಿಯನ್ನು ಬಾಡಿಗೆಗೆ ನೀಡುವ ಅಧಿಕಾರ ಬೇಕಾದರೆ ಎಕ್‌್ಸಚೇಂಜ್‌ ಮಾಡಿಕೊಳ್ಳುವ ಅಧಿಕಾರ ನಿಗಮಕ್ಕೆ ನೀಡಲಾಗಿದೆ. ಅದರಲ್ಲಿಯೂ ನಿಗಮದ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಅವರೇ ಹೊಂದಿರುತ್ತಾರೆ (ರಾಜಮನೆತನದ ಚಾಮುಂಡಿ ಬೆಟ್ಟವನ್ನು ಕಸಿದುಕೊಂಡಿರುವ ಆರೋಪ) ಎಂದು ಅರ್ಜಿದಾರರು ವಾದ ಮಾಡಿದ್ದರು.

RELATED ARTICLES

Latest News