Wednesday, September 11, 2024
Homeಮನರಂಜನೆಪಾನ್‌ ಮಸಾಲಾ ಪ್ರಚಾರ ಮಾಡಿದ ಸ್ಟಾರ್‌ಗಳಿಗೆ ಕ್ಯಾಕರಿಸಿ ಉಗಿದ 'ಶಕ್ತಿಮಾನ್'

ಪಾನ್‌ ಮಸಾಲಾ ಪ್ರಚಾರ ಮಾಡಿದ ಸ್ಟಾರ್‌ಗಳಿಗೆ ಕ್ಯಾಕರಿಸಿ ಉಗಿದ ‘ಶಕ್ತಿಮಾನ್’

ಮುಂಬೈ,ಆ.12- ಮಹಾಭಾರತ ಖ್ಯಾತಿಯ ಭೀಷ್ಮ ಪಾತ್ರಧಾರಿ ಮುಖೇಶ್‌ ಖನ್ನಾ ಪಾನ್‌ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಸೂಪರ್‌ಸ್ಟಾರ್‌ಗಳಾದ ಶಾರುಖ್‌ ಖಾನ್‌ ಮತ್ತು ಅಜಯ್‌ ದೇವಗನ್‌ ಅವರನ್ನು ದೂಷಿಸಿದ್ದಾರೆ.

ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌ ಮತ್ತು ಅಜಯ್‌ ದೇವಗನ್‌ ಅವರು ಪಾನ್‌ ಮಸಾಲಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಟೀಕೆಗೊಳಗಾಗಿದ್ದಾರೆ. ಮುಖೇಶ್‌ ಖನ್ನಾ ಅವರು ಇಂಥವರಿಗೆ ಹೊಡೆಯಬೇಕು ಎಂದು ಅವರು ಸಖತ್‌ ಖಾರವಾಗಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮುಖೇಶ್‌ ಖನ್ನಾ ಮಾತನಾಡಿ, ನೀವು ನನ್ನನ್ನು ಈ ಪಾನ್‌ ಮಸಾಲಾ ಜಾಹೀರಾತು ಬಗ್ಗೆ ಕೇಳಿದರೆ, ಈ ರೀತಿ ಜಾಹೀರಾತು ಮಾಡವರಿಗೆ ಹೊಡೆಯಬೇಕು ಎಂದು ಹೇಳುತ್ತೇನೆ.

ನಾನು ಅಕ್ಷಯ್‌ ಕುಮಾರ್‌ ಅವರನ್ನು ನಿಂದಿಸಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್‌ ಖಾನ್‌, ಅಜಯ್‌‍ ದೇವಗನ್‌ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ ನೀವು ಏನು ಕಲಿಸುತ್ತಿದ್ದೀರಿ? ತಾವು ಪಾನ್‌ ಮಸಾಲಾ ಮಾಡುತ್ತಿಲ್ಲ, ಅಡಿಕೆ ಪುಡಿ ಮಾರುತ್ತೇವೆ ಎನ್ನುತ್ತಾರೆ. ಆದರೆ ತಾವು ಮಾಡುತ್ತಿರುವುದು ಏನು ಅಂತ ಅವರಿಗೂ ಗೊತ್ತಿದೆ ಎಂದು ಮುಖೇಶ್‌ ಖನ್ನಾ ಹೇಳಿದ್ದಾರೆ.

ನೀವು ಕಿಂಗಿಫಿಶರ್‌ ಜಾಹೀರಾತನ್ನು ಮಾಡಿದರೆ, ನೀವು ಕಿಂಗಿಫಿಶರ್‌ ಬಿಯರ್‌ ಅನ್ನು ಮಾರಾಟ ಮಾಡುತ್ತಿದ್ದೀರಿ ಎಂದರ್ಥ. ಎಲ್ಲರಿಗೂ ತಿಳಿದಿದೆ, ಇದನ್ನು ಮೋಸಗೊಳಿಸುವ ಜಾಹೀರಾತು ಎಂದು ಕರೆಯಲಾಗುತ್ತದೆ. ಅವರು ಈ ಜಾಹೀರಾತುಗಳನ್ನು ಏಕೆ ಮಾಡುತ್ತಾರೆ? ಅವರ ಬಳಿ ಹಣವಿಲ್ಲವೇ? ನಾನು ಅವರಿಗೆ ಇದನ್ನು ಹೇಳಿದ್ದೇನೆ, ಈ ಕೆಲಸಗಳನ್ನು ಮಾಡಬೇಡಿ, ನಿಮ ಬಳಿ ಸಾಕಷ್ಟು ಹಣವಿದೆ. ಕೆಲವು ನಟರು ಅದನ್ನು ಹಿಂಪಡೆದಿದ್ದಾರೆ, ಅವರಲ್ಲಿ ಅಕ್ಷಯ್‌ ಒಬ್ಬರು.

ಅಮಿತಾಬ್‌ ಬಚ್ಚನ್‌ ಕೂಡ ಅದರಿಂದ ದೂರ ಸರಿದಿದ್ದಾರೆ. ಆದರೆ, ಇಲ್ಲಿಯವರೆಗೆ, ಈ ಜಾಹೀರಾತುಗಳನ್ನು ಮಾಡಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ನೀವು ಜನರಿಗೆ ಗುಟ್ಕಾ ಸೇವಿಸಲು ಕಲಿಸುತ್ತಿದ್ದೀರಿ! ಅದನ್ನು ಮಾಡಬೇಡಿ ಎಂದು ನಟ ಹೇಳಿಕೆ ನೀಡಿದ್ದಾರೆ.

ಈ ಹಿಂದೆ ಈ ವಿಚಾರದ ಬಗ್ಗೆ ಜಾನ್‌ ಅಬ್ರಹಾಂ ಟೀಕಿಸಿದ್ದರು. ಜನರು ಫಿಟ್ನೆಸ್‌‍ ಬಗ್ಗೆ ಮಾತನಾಡುತ್ತಾರೆ. ಆ ಬಳಿಕ ಅದೇ ವ್ಯಕ್ತಿಗಳು ಪಾನ್‌ ಮಸಾಲ ಪ್ರಚಾರ ಮಾಡುತ್ತಾರೆ. ನಾನು ಇಂಡಸ್ಟ್ರಿಯ ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಅವರನ್ನು ಅಗೌರವಿಸುತ್ತಿಲ್ಲ. ಒಂದು ವಿಚಾರವನ್ನು ನಾನು ಸ್ಪಷ್ಟಪಡಿಸಬೇಕು. ನಾನು ನನ್ನ ಬಗ್ಗೆ ಮಾತನಾಡುತ್ತೇನೆ. ನಾನು ಸಾವನ್ನು ಮಾರಾಟ ಮಾಡಲ್ಲ. ಇದಕ್ಕೆ ನಾನು ಹಾಕಿಕೊಂಡ ಪ್ರಿನ್ಸಿಪಲ್‌ ಕಾರಣ. ನಾನು ನನ್ನ ಜೀವನವನ್ನು ಪ್ರಾಮಾಣಿಕತೆಯಿಂದ ಜೀವಿಸಿದರೆ ಮತ್ತು ನಾನು ಬೋಧಿಸುವದನ್ನು ನಾನು ಅಭ್ಯಾಸ ಮಾಡಿದರೆ, ಆಗ ನಾನೇ ರೋಲ್‌ ಮಾಡೆಲ್‌ ಎಂದಿದ್ದರು.

RELATED ARTICLES

Latest News