Friday, October 11, 2024
Homeರಾಷ್ಟ್ರೀಯ | Nationalಕಂಗನಾಗೆ 'ಎಮರ್ಜೇನ್ಸಿ'ಗೆ ಚಂಡೀಗಢ ಕೋರ್ಟ್ ನೋಟೀಸ್‌‍

ಕಂಗನಾಗೆ ‘ಎಮರ್ಜೇನ್ಸಿ’ಗೆ ಚಂಡೀಗಢ ಕೋರ್ಟ್ ನೋಟೀಸ್‌‍

Chandigarh court issues notice to Kangana Ranaut over movie 'Emergency'

ಮುಂಬೈ,ಸೆ.18- ವಿವಾದಾತಕ ಚಿತ್ರ ಎಮರ್ಜೆನ್ಸಿಗೆ ಸಂಬಂಧಿಸಿದಂತೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಚಂಡೀಗಢದ ಜಿಲ್ಲಾ ನ್ಯಾಯಾಲಯ ನೋಟಿಸ್‌‍ ಜಾರಿ ಮಾಡಿದೆ.

ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಕೀಲ ರವೀಂದರ್‌ ಸಿಂಗ್‌ ಬಸ್ಸಿ ಅವರು ತಮ ಚಿತ್ರದಲ್ಲಿ ಸಿಖ್ಖರ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ. ಸಿಖ್ಖರ ತಪ್ಪು ಚಿತ್ರಣವನ್ನು ಪ್ರದರ್ಶಿಸುವುದರ ಜೊತೆಗೆ, ಚಲನಚಿತ್ರವು ಸಮುದಾಯದ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಒಳಗೊಂಡಿದೆ ಎಂದು ವಕೀಲರು ಹೇಳಿ ರಣಾವತ್‌ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದಾರೆ.

ನ್ಯಾಯಾಲಯವು ಡಿಸೆಂಬರ್‌ 5 ರಂದು ಮತ್ತೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. ಕಂಗನಾ ಅವರ ನಿರ್ದೇಶನದ ತುರ್ತು ಪರಿಸ್ಥಿತಿ ಕುರಿತ ಚಿತ್ರಕ್ಕೆ ಶಿರೋಮಣಿ ಅಕಾಲಿ ದಳ ಸೇರಿದಂತೆ ಸಿಖ್‌ ಸಂಘಟನೆಗಳು ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತಿದೆ ಮತ್ತು ಐತಿಹಾಸಿಕ ಸತ್ಯಗಳನ್ನು ತಿರುಚಿದೆ ಎಂದು ಆರೋಪಿಸಿದೆ.

ಸೆನ್ಸಾರ್‌ ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬವಾದ ಕಾರಣ ಚಿತ್ರದ ಬಿಡುಗಡೆಯನ್ನು ಮುಂದೂಡಿದ ನಂತರ ಮುಂಬೈನಲ್ಲಿರುವ ತನ್ನ ಆಸ್ತಿಯನ್ನು ಮಾರಾಟ ಮಾಡಲು ಒತ್ತಾಯಿಸಲಾಯಿತು ಎಂದು ಅವರು ಇತ್ತೀಚೆಗೆ ಹೇಳಿದರು. ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ತಮ ಬಂಗಲೆಯನ್ನು ನಟ 32 ಕೋಟಿಗೆ ಮಾರಾಟ ಮಾಡಿದ್ದಾರೆ ಎಂಬ ವರದಿಗಳಿವೆ.

ಥಿಯೇಟರ್‌ಗಳಲ್ಲಿ ಬರಬೇಕಿದ್ದ ಈ ಚಿತ್ರಕ್ಕೆ ನನ್ನ ವೈಯಕ್ತಿಕ ಆಸ್ತಿಯನ್ನು ಪಣಕ್ಕಿಟ್ಟ್ದೆಿ. ಈಗ ಅದು ಬಿಡುಗಡೆಯಾಗುತ್ತಿಲ್ಲ, ಹಾಗಾಗಿ ಆಸ್ತಿ ಇದೆ, ಕಷ್ಟದ ಸಮಯದಲ್ಲಿ ಮಾರಾಟ ಮಾಡಿದ್ದೇನೆ ಎಂದಿದ್ದಾರೆ.

RELATED ARTICLES

Latest News