Thursday, June 20, 2024
Homeರಾಷ್ಟ್ರೀಯ3ನೇ ಬಾರಿಗೆ ಪ್ರಧಾನಿಯಾಗಿ ಮೋದಿ, ಚಂದ್ರಬಾಬು ನಾಯ್ಡು ಅಭಿನಂದನೆ

3ನೇ ಬಾರಿಗೆ ಪ್ರಧಾನಿಯಾಗಿ ಮೋದಿ, ಚಂದ್ರಬಾಬು ನಾಯ್ಡು ಅಭಿನಂದನೆ

ನವದೆಹಲಿ/ಅಮರಾವತಿ, ಜೂನ್‌ 9 (ಪಿಟಿಐ) ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಮತ್ತು ಟಿಡಿಪಿ ನಾಯಕ ಎನ್‌ ಚಂದ್ರಬಾಬು ನಾಯ್ಡು ಅವರು ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ.

ವಿಕ್ಷಿತ್‌ ಭಾರತ್‌ (ಅಭಿವೃದ್ಧಿ ಹೊಂದಿದ ಭಾರತ) ದ ಅವರ ದೃಷ್ಟಿಗೆ ಮೀಸಲಾಗಿರುವ ಅವರು ಯಶಸ್ವಿಯಾಗಿ ಅಧಿಕಾರಾವಧಿ ಪೂರೈಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಂಧ್ರಪ್ರದೇಶದ ಜನರ ಪರವಾಗಿ ನಾನು ಅಭಿನಂದಿಸುತ್ತೇನೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಎಲ್ಲಾ ಸಂಪುಟ ಮಂತ್ರಿಗಳು ಮತ್ತು ರಾಜ್ಯ ಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ತಮ್ಮ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.ಪ್ರಮಾಣ ವಚನ ಸ್ವೀಕರ ಸಮಾರಂಭವು ನಮ್ಮ ರಾಷ್ಟ್ರದ ಬೆಳವಣಿಗೆ, ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಯುಗಕ್ಕೆ ನಾಂದಿಯಾಗಲಿ ಎಂದು ನಾಯ್ಡು ಹೇಳಿದರು.

ಹೊಸದಾಗಿ ಟಿಡಿಪಿಯ ಮೂವರು ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ ಇದರಲ್ಲಿ ಒಂದು ಕ್ಯಾಬಿನೆಟ್‌ ಮತ್ತು ಎರಡು ರಾಜ್ಯಸಚಿವರು . ಟಿಡಿಪಿಯ ಶ್ರೀಕಾಕುಳಂ ಸಂಸದ ಕೆ ರಾಮ್‌ ಮೋಹನ್‌ ನಾಯ್ಡು ಅವರು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರೆ, ನರಸಪುರಂ ಸಂಸದ ಬಿ ಶ್ರೀನಿವಾಸ ವರ್ಮಾ ಮತ್ತು ಗುಂಟೂರು ಸಂಸದ ಪಿ ಚಂದ್ರಶೇಖರ್‌ ಅವರನ್ನು ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

ಆಂಧ್ರ ಪ್ರದೇಶದ ರಾಜ್ಯದಲ್ಲಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜನಸೇನೆಯ ಎನ್‌ಡಿಎ ಮೈತ್ರಿಕೂಟದಲ್ಲಿ 164 ವಿಧಾನಸಭೆ ಮತ್ತು 21 ಲೋಕಸಭಾ ಸ್ಥಾನಗಳಲ್ಲಿ ಜಯಬೇರಿ ಭಾರಿಸಿದೆ.

ನನಗೆ ಕೇಂದ್ರ ಸಚಿವ ಜವಾಬ್ದಾರಿಯನ್ನು ವಹಿಸಿದ್ದಕ್ಕಾಗಿ ಭಾರತದ ಜನರಿಗೆ ಮತ್ತು ಎನ್‌ಡಿಎ ನಾಯಕತ್ವಕ್ಕೆ ನನ್ನ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಚಂದ್ರಶೇಖರ್‌ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

RELATED ARTICLES

Latest News