Sunday, June 30, 2024
Homeರಾಷ್ಟ್ರೀಯಆಂಧ್ರ ಸಿಎಂ ಆಗಿ ನಾಯ್ಡು ಪ್ರಮಾಣ ವಚನ ಕಾರ್ಯಕ್ರಮ ಜೂ.12ಕ್ಕೆ ಮುಂದೂಡಿಕೆ

ಆಂಧ್ರ ಸಿಎಂ ಆಗಿ ನಾಯ್ಡು ಪ್ರಮಾಣ ವಚನ ಕಾರ್ಯಕ್ರಮ ಜೂ.12ಕ್ಕೆ ಮುಂದೂಡಿಕೆ

ನವದೆಹಲಿ, ಜೂ.6- ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಪ್ರಮಾಣ ವಚನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜೂನ್‌ 12 ರಂದು ಅಮರಾವತಿಯಲ್ಲಿ ಆಂಧ್ರದ ನೂತನ ಸಿಎಂ ಆಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ನಿಗದಿಯಾಗಿದೆ ಎಂದು ವರದಿಯಾಗಿದೆ.

ಚಂದ್ರಬಾಬು ಅವರು ಜೂನ್‌ 9 ರಂದು ಅಮರಾವತಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ, ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವುದರಿಂದ ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಕೊಂಚ ತಡವಾಗಿದೆ. ಚಂದ್ರಬಾಬು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಇದರೊಂದಿಗೆ ಚಂದ್ರಬಾಬು ನಾಯ್ಡು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಅವರು ಮೊದಲ ಬಾರಿಗೆ 1995 ರಿಂದ 1999 ರವರೆಗೆ ಮತ್ತು ನಂತರ 1999 ರಿಂದ 2004ರ ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಅವರ ಮೂರನೇ ಅವಧಿ ಪೂರೈಸಿದ್ದರು.

ಆಂಧ್ರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಆಂಧ್ರಪ್ರದೇಶ ವಿಧಾನಸಭಾ ಕ್ಷೇತ್ರದಲ್ಲಿ 175 ಸ್ಥಾನಗಳಿವೆ. ಅತಿದೊಡ್ಡ ಪಕ್ಷವಾದ ಟಿಡಿಪಿ 135 ಸ್ಥಾನಗಳನ್ನು ಪಡೆದುಕೊಂಡಿತು ಮತ್ತು 21 ಸ್ಥಾನಗಳನ್ನು ಗೆದ್ದ ಜನಸೇನೆ ಎರಡನೇ ದೊಡ್ಡ ಪಕ್ಷವಾಯಿತು. ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ವೈಎಸ್‌ಆರ್ಸಿಪಿ ಕೇವಲ 8 ಸ್ಥಾನಗಳಿಗೆ ಸೀಮಿತವಾಗಿದ್ದರೆ, ಬಿಜೆಪಿಯಿಂದ 8 ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಒಟ್ಟಿನಲ್ಲಿ 164 ಸ್ಥಾನಗಳಲ್ಲಿ ಟಿಡಿಪಿ, ಜನಸೇನೆ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಜನ ಅಧಿ ಕಾರ ಹಸ್ತಾಂತರಿಸಿದ್ದಾರೆ.

RELATED ARTICLES

Latest News