Friday, April 4, 2025
Homeರಾಜ್ಯಚಂದ್ರಶೇಖರ್‌ ಗುರೂಜಿ ಹತ್ಯೆ ಆರೋಪಿ ಜಾಮೀನು ಅರ್ಜಿ ವಜಾ

ಚಂದ್ರಶೇಖರ್‌ ಗುರೂಜಿ ಹತ್ಯೆ ಆರೋಪಿ ಜಾಮೀನು ಅರ್ಜಿ ವಜಾ

ಹುಬ್ಬಳ್ಳಿ,ಆ.3– ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿಗೆ ಜಾಮೀನು ನೀಡಲು ಧಾರವಾಡ ಹೈಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿ ಎಸ್‌‍.ರಾಚಯ್ಯ ಅವರಿದ್ದ ಏಕ ಸದಸ್ಯ ಪೀಠ ದುಮವಾಡ ಗ್ರಾಮದ ನಿವಾಸಿ ಆರೋಪಿ ಮಹಾಂತೇಶ ಶಿರೂರ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಸಮಾಜದಲ್ಲಿ ಆತಂಕ ಸೃಷ್ಠಿಸಿದೆ.

ಅಷ್ಟೇ ಅಲ್ಲ ಗುರೂಜಿ ಕುಟುಂಬ ಸೇರಿದಂತೆ ಸಾಕ್ಷಿಗಳಿಗೆ ತೊಂದರೆಯಾಗುವ ಸಾದ್ಯತೆ ಇದೆ ಎಂದು ಕಾರಣ ನೀಡಿ ಜಾಮೀನು ತಿರಸ್ಕರಿಸಿದೆ.

5, 2022 ರಂದು ಹುಬ್ಬಳ್ಳಿಯ ಉಣಕಲ್‌ ಸಮೀಪದ ಪ್ರೆಸಿಡೆಂಟ್‌ ಹೊಟೇಲ್‌ನಲ್ಲಿ ಮಹಾಂತೇಶ ಮತ್ತು ಆತನ ಸಹಚರ ಚೂರಿಯಿಂದ 50ಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದರು.ಆರೋಪಿಗಳು ಸದ್ಯಕ್ಕೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದು. ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.

RELATED ARTICLES

Latest News