Wednesday, November 13, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2024)

ನಿತ್ಯ ನೀತಿ :
ಅಳತೆ ಮೀರಿ ಕಟ್ಟಿದ ಮನೆ, ಅಳತೆ ಮೀರಿ ಮಾಡಿದ ಸಾಲ, ಅದ್ಧೂರಿಯಾಗಿ ಮಾಡಿದ ಮದುವೆ, ಸರಳತೆ ಮೀರಿ ತೋರಿಕೆಯ ಬದುಕು, ಅತಿಯಾಗಿ ಒಬ್ಬರ ಮೇಲಿರುವ ನಂಬಿಕೆ, ಅಪಾರವಾದ ಪ್ರೀತಿ ಹಾಗೂ ವಿಶ್ವಾಸ ಇವುಗಳು ಯಾವತ್ತೂ ಒಳ್ಳೆಯದಲ್ಲ.

ಪಂಚಾಂಗ : ಶನಿವಾರ , 03-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಪುನರ್ವಸು / ಯೋಗ: ವಜ್ರ /ಕರಣ: ಚತುಷ್ಪಾದ

ಸೂರ್ಯೋದಯ – ಬೆ.06.06
ಸೂರ್ಯಾಸ್ತ – 06.46
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ನಿಮ್ಮ ಸಮಾಜ ಸೇವೆಯ ಕಾರಣದಿಂದ ಜನಪ್ರಿಯತೆ ಹೆಚ್ಚಾಗುವುದು. ಗೃಹಿಣಿಯರು, ಮಕ್ಕಳ ಆರೋಗ್ಯ ಉತ್ತಮವಾಗಿರುವುದು.
ವೃಷಭ: ಅಧ್ಯಯನ ಮಾಡುವಾಗ ಕೆಲವು ಸವಾಲು ಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ.

ಕಟಕ: ರಕ್ತ ಸಂಬಂಧಿ ಗಳ ಕಾಟ ಹೆಚ್ಚಾಗುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ಉದ್ಯೋಗ ಅರಸುತ್ತಿ ರುವವರಿಗೆ ಶುಭ ಸೂಚನೆ.

ತುಲಾ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆ ಎದುರಿಸಬೇಕಾಗುತ್ತದೆ.
ವೃಶ್ಚಿಕ: ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ಧನುಸ್ಸು: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.

ಮಕರ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಮೀನ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.

RELATED ARTICLES

Latest News