ಚನ್ನಪಟ್ಟಣ :
ನಿಖಿಲ್ ಕುಮಾರಸ್ವಾಮಿ (ಜೆಡಿಎಸ್) : 20676 – ಮುನ್ನಡೆ
ಸಿ.ಪಿ.ಯೋಗೀಶ್ವರ್ (ಕಾಂಗ್ರೆಸ್) : 19521 – ಹಿನ್ನಡೆ
ಶಿಗ್ಗಾಂವಿ :
ಭರತ್ ಬೊಮ್ಮಾಯಿ (ಬಿಜೆಪಿ) : 21910 – ಮುನ್ನಡೆ
ಯಾಸಿರ್ ಅಹಮದ್ ಖಾನ್ ಪಠಾಣ್ (ಕಾಂಗ್ರೆಸ್) : 20343 – ಹಿನ್ನಡೆ
ಸಂಡೂರು
ಬಂಗಾರು ಹನುಮಂತು (ಬಿಜೆಪಿ ) : 28524 – ಮುನ್ನಡೆ
ಅನ್ನಪೂರ್ಣ ತುಕಾರಾಂ (ಕಾಂಗ್ರೆಸ್) : 28113 – ಹಿನ್ನಡೆ
* ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ರಾಜ್ಯದ ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯ ಒಳಗೆ ಬಹುತೇಕ ಸ್ಪಷ್ಟವಾದ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
* ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯೂ ರಾಮನಗರದ ಅರ್ಚಕರ ಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಅದೇ ರೀತಿ ಶಿಗ್ಗಾಂವಿ ಮತ ಎಣಿಕೆಯೂ ಹಾವೇರಿ ಜಿಲ್ಲೆಯ ದೇವಗಿರಿ ಸರ್ಕಾರಿ ಎಂಜನಿಯರಿಂಗ್ ಕಾಲೇಜು ಹಾಗೂ ಸಂಡೂರು ಕ್ಷೇತ್ರದ ಎಣಿಕೆಯು ಬಳ್ಳಾರಿ ಜಿಲ್ಲೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.