Friday, November 22, 2024
Homeರಾಷ್ಟ್ರೀಯ | Nationalಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆದ ರಾಹುಲ್ ಗಾಂಧಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಲ್ ಆದ ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಮಾಜಿ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಮಾಡಿರುವ ಟ್ವೀಟ್ ಇದೀಗರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ . ಕಾಸ್ಪರೋ ವ್ ನನ್ನ ನೆಚ್ಚಿನ ಚೆಸ್ ಆಟಗಾರ ಎಂದು ರಾಹುಲ್ ಗಾಂಧಿ ಹೇಳಿದ್ದರು ಇದೀಗ ಅವರಿಂದಲೇ ಟೀಕೆಗೆ ಗುರಿಯಾಗಿರುವುದು ಕಾಂಗ್ರೆಸ್​​ “ಶಹಜಾದೆ”ಗೆ ಜಾಗತಿಕ ಮಟ್ಟದಲ್ಲಿ ಮಖಭಂಗವಾದಂತಾಗಿದೆ.

ಪ್ರಧಾನಿ ಸ್ಥಾನಕ್ಕೆ ಸವಾಲು ಹಾಕುವ ಮೊದಲು ರಾಯ್‌ಬರೇಲಿಯಲ್ಲಿ ಗೆಲ್ಲಿ,ಎಂದು ರಾಹುಲ್​​​ಗೆ ರಷ್ಯಾ ರಾಜಕೀಯ ವಿಮರ್ಶಕ ಗ್ಯಾರಿ ಕ್ಯಾಸ್ಪರೋವ್ ಸಲಹೆ ನೀಡಿದ್ದಾರೆ. ರಷ್ಯಾ ರಾಜಕೀಯ ವಿಮರ್ಶಕ ಗ್ಯಾರಿ ಕಾಸ್ಪರೋವ್ ಅವರು ತಮ್ಮ ಎಕ್ಸ್​​​ ಖಾತೆಯಲ್ಲಿ ರಾಹುಲ್​​​ ಗಾಂಧಿ ಅವರ ಬಗ್ಗೆ ಒಂದು ಪೋಸ್ಟ್​​​ನ್ನು ಹಾಕಿಕೊಂಡಿದ್ದಾರೆ. ರಾಹುಲ್​​ ಗಾಂಧಿ ಅವರೇ ನೀವು ಪ್ರಧಾನಿ ಆಗುವ ಕನಸು ಕಾಣುವ ಮೊದಲು ಹೆಚ್ಚಿನ ಸ್ಥಾನದಲ್ಲಿ ರಾಯ್ ಬರೇಲಿಯಿಂದ ಗೆಲ್ಲಬೇಕು ಎಂದು ಗ್ಯಾರಿ ಅವರು ಎಕ್ಸ್​​​​​​ ವ್ಯಂಗ್ಯವಾಗಿ ಟ್ವೀಟ್​​​​​ ಮಾಡಿದ್ದಾರೆ.

ಕಾಂಗ್ರೆಸ್​​ “ಶಹಜಾದೆ” ರಾಹುಲ್​​ ಗಾಂಧಿ ಅವರು ಅಮೇಥಿ ಬದಲಿಗೆ ರಾಯ್ ಬರೇಲಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಇದೀಗ ಅದರಂತೆ ನೆನ್ನೆ (ಮೇ3) ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್​​​ ರಾಜಕೀಯದಲ್ಲಿ ರಾಹುಲ್​​ ಇಟ್ಟಿರುವ ಬಹುದೊಡ್ಡ ಹೆಜ್ಜೆಯಾಗಿದೆ ಎಂದು ಹೇಳಲಾಗಿತ್ತು. ಇವರ ಈ ನಡೆಯಿಂದ ಬಿಜೆಪಿಯನ್ನು ಅಲ್ಲಿ ಸೋಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಅವರ ಈ ನಿರ್ಧಾರಕ್ಕೆ ರಷ್ಯಾ ಚೆಸ್ ಚಾಂಪಿಯನ್ ಆಗಿರುವ ಗ್ಯಾರಿ ಕ್ಯಾಸ್ಪರೋವ್ ಅವರು ಸಲಹೆ ನೀಡಿದ್ದಾರೆ.

ಮಾಜಿ ವಿಶ್ವ ಚೆಸ್ ಚಾಂಪಿಯನ್, ಬರಹಗಾರ, ರಾಜಕೀಯ ತಜ್ಞ, ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಕೀಯ ವಿಮರ್ಶಕರು. ಇವರು ಒಂದು ಸಂಧರ್ಭದಲ್ಲಿ ಪುಟಿನ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಕರೆದಿದ್ದರು. ಇದೀಗ ರಾಹುಲ್​​ ಗಾಂಧಿ ರಾಜಕೀಯ ಭವಿಷ್ಯದ ಬಗ್ಗೆ ಹೇಳಿದ್ದಾರೆ.

ರಾಹುಲ್​​​ ಗಾಂಧಿ ಅವರ ಬಗ್ಗೆ ವ್ಯಂಗ್ಯವಾಗಿ ಎಕ್ಸ್​​ನಲ್ಲಿ ಟ್ವೀಟ್​​​ ಮಾಡಿದ ನಂತರ ಗ್ಯಾರಿ ಕಾಸ್ಪರೋವ್ ಅವರು ತಮ್ಮ ಪೋಸ್ಟ್​​​ಗೆ ಸ್ಪಷ್ಟನೆ ನೀಡಿದ್ದಾರೆ. ಭಾರತೀಯ ರಾಜಕೀಯದ ಕುರಿತಾದ ತಮ್ಮ “ಚಿಕ್ಕ ಜೋಕ್” ಇದಾಗಿದ್ದು, ನಾನು ರಾಜಕೀಯ ಪಂಡಿತನಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಹೇಳಿದ ಹೇಳಿಕೆಯನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

2004 ರಲ್ಲಿ, ರಾಹುಲ್ ಗಾಂಧಿ ಅವರು ಅಮೇಥಿಯಿಂದ ಸ್ಪರ್ಧಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬಂದರು. ಇಲ್ಲಿ ರಾಹುಲ್​​ ಅವರು 10 ವರ್ಷಗಳ ಕಾಲ ಕಾಂಗ್ರಸ್​​​​ ಅಧಿಕಾರದಲ್ಲಿ ಇದ್ದ ಕಾರಣ ಇಲ್ಲಿ ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಕಳೆದ 10 ವರ್ಷಗಳು ಅವರಿಗೆ ಈ ಕ್ಷೇತ್ರ ತುಂಬಾ ಸವಾಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ನಂತರ 2019ರಲ್ಲಿ ಸ್ಮೃತಿ ಕಾಂಗ್ರೆಸ್​​ನ ಭದ್ರಕೋಟೆಯಲ್ಲಿ 55,000 ಮತಗಳಿಂದ ಗೆಲುವು ಸಾಧಿಸಿದರು.

RELATED ARTICLES

Latest News