Monday, May 27, 2024
Homeರಾಷ್ಟ್ರೀಯರಾಹುಲ್‌ ಬಣದಿಂದ ಪ್ರಿಯಾಂಕಾ, ರಾಬರ್ಟ್‌ ವಾದ್ರಾ ಕಡೆಗಣನೆ ; ಬಿಜೆಪಿ ಆರೋಪ

ರಾಹುಲ್‌ ಬಣದಿಂದ ಪ್ರಿಯಾಂಕಾ, ರಾಬರ್ಟ್‌ ವಾದ್ರಾ ಕಡೆಗಣನೆ ; ಬಿಜೆಪಿ ಆರೋಪ

ನವದೆಹಲಿ,ಮೇ.4- ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್‌ ವಾದ್ರಾ ಅವರನ್ನು ರಾಹುಲ್‌ಗಾಂಧಿ ಬಣ ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ರಾಬರ್ಟ್‌ ವಾದ್ರಾ ಅವರು ಉತ್ತರಪ್ರದೇಶದಲ್ಲಿ ಜನಪ್ರಿಯತೆ ಗಳಿಸಿದ ನಂತರವೂ ಅಮೇಥಿ ಸ್ಥಾನಕ್ಕಾಗಿ ರಾಹುಲ್‌ ಗಾಂಧಿ ಶಿಬಿರ ಅವರನ್ನು ಕಡೆಗಣಿಸಿದೆ ಎಂದು ಬಿಜೆಪಿ ನಾಯಕ ಅಮಿತ್‌ ಮಾಳವಿಯಾ ಹೇಳಿದ್ದಾರೆ.

ಕಿಶೋರಿ ಲಾಲ್‌ ಶರ್ಮಾ ಅಮೇಥಿಯಿಂದ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ, ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿದೆ. ರಾಹುಲ್‌ ಗಾಂಧಿ ಬಣದ ನಿರ್ಧಾರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಶೀಘ್ರದಲ್ಲೇ ಕಾಂಗ್ರೆಸ್‌‍ ನಾಯಕತ್ವದ ವಿರುದ್ಧ ದಂಗೆ ಏಳಬಹುದು ಎಂದು ಅಮಿತ್‌ ಮಾಳವೀಯ ಹೇಳಿದ್ದಾರೆ.

ಅಮೇಥಿಯಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರೂ, ಸ್ಥಾನಕ್ಕಾಗಿ ಕಡೆಗಣಿಸಲ್ಪಟ್ಟಿರುವ ರಾಬರ್ಟ್‌ ವಾದ್ರಾಗೆ ಸ್ವಲ್ಪ ಸಮಯ ನೀಡಿ. ರಾಹುಲ್‌ ಗಾಂಧಿ ಪಾಳಯವು ಕಾಂಗ್ರೆಸ್‌‍ನಲ್ಲಿ ಪ್ರಿಯಾಂಕಾ ವಾದ್ರಾ ಮತ್ತು ಅವರ ಪತಿ ಇಬ್ಬರನ್ನೂ ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತಿರುವುದು ಸ್ಪಷ್ಟವಾಗಿದೆ ಎಂದು ಮಾಳವೀಯ ಎಕ್‌್ಸ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ರಾಬರ್ಟ್‌ ವಾದ್ರಾ ತಾನು ಅಮೇಥಿಯಲ್ಲಿ ಜನಪ್ರಿಯನಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ಅವರು ಸಕ್ರಿಯ ರಾಜಕಾರಣದಲ್ಲಿ ಇರಬೇಕೆಂದು ರಾಷ್ಟ್ರ ಬಯಸಿದೆ ಎಂದು ಹೇಳಿಕೊಂಡಿದ್ದರು ಅವರಿಗೆ ಟಿಕೆಟ್‌ ನೀಡದಿರುವುದನ್ನು ಉಲ್ಲೇಖಿಸಿ ಬಿಜೆಪಿ ಈ ದಾಳಿ ನಡೆಸಿದೆ.

RELATED ARTICLES

Latest News