Sunday, September 15, 2024
Homeಕ್ರೀಡಾ ಸುದ್ದಿ | Sportsಇಂಗ್ಲೆಂಡ್‌ ಕೌಂಟಿಯಿಂದ ಚೇತೇಶ್ವರ ಪೂಜಾರ ಔಟ್

ಇಂಗ್ಲೆಂಡ್‌ ಕೌಂಟಿಯಿಂದ ಚೇತೇಶ್ವರ ಪೂಜಾರ ಔಟ್

Cheteshwar Pujara to not play for Sussex in 2025 County Championship

ಲಂಡನ್‌, ಆ.22 (ಪಿಟಿಐ) ಆಸ್ಟ್ರೇಲಿಯಾದ ಡೇನಿಯಲ್‌ ಹ್ಯೂಸ್‌‍ ಅವರ ಸೇವೆಯನ್ನು ಉಳಿಸಿಕೊಳ್ಳಲು ಇಂಗ್ಲಿಷ್‌ ಕ್ಲಬ್‌ ತಂಡವು ಭಾರತದ ಟೆಸ್ಟ್‌ ಸ್ಪಷಲಿಸ್‌‍ ಚೇತೇಶ್ವರ ಪೂಜಾರ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

ಎಡಗೈ ಆಟಗಾರ ಹ್ಯೂಸ್‌‍ ಮುಂದಿನ ಋತುವಿನಲ್ಲಿ ಎಲ್ಲಾ ಚಾಂಪಿಯನ್‌ಶಿಪ್‌ ಮತ್ತು ಟಿ20 ವಿಟಾಲಿಟಿ ಬ್ಲಾಸ್ಟ್‌ ಪಂದ್ಯಗಳಿಗೆ ಲಭ್ಯವಿರುತ್ತಾರೆ. ವೆಸ್ಟ್‌ ಇಂಡೀಸ್‌‍ ಬಲಗೈ ವೇಗದ ಬೌಲರ್‌ ಜೇಡನ್‌ ಸೇಲ್ಸ್‌‍ ಚಾಂಪಿಯನ್‌ಶಿಪ್‌ ಪಂದ್ಯಗಳ ಮೊದಲ ಬ್ಲಾಕ್‌ ಅನ್ನು ಆಡಲಿದ್ದಾರೆ ಎಂದು ಕ್ಲಬ್‌ ಘೋಷಿಸಿದೆ.

ಪೂಜಾರ 2024 ರಲ್ಲಿ ಸತತ ಮೂರನೇ ಬಾರಿಗೆ ಸಸೆಕ್ಸ್ ಗೆ ಮರಳಿದರು. ಅವರು ಹ್ಯೂಸ್‌‍ ಆಗಮನದ ಮೊದಲು ಮೊದಲ ಏಳು ಚಾಂಪಿಯನ್‌ಶಿಪ್‌ ಪಂದ್ಯಗಳನ್ನು ಆಡಿದರು. ಹ್ಯೂಸ್‌‍ ಈ ವರ್ಷದ ಬ್ಲಾಸ್ಟ್‌ನ ಗುಂಪು ಹಂತಗಳಲ್ಲಿ ಐದು ಅರ್ಧಶತಕಗಳು ಮತ್ತು ಔಟಾಗದೆ 96 ಸ್ಕೋರ್‌ ಸೇರಿದಂತೆ 43.07 ಸರಾಸರಿಯಲ್ಲಿ 560 ರನ್‌ ಗಳಿಸಿದ ಪ್ರಮುಖ ರನ್‌ ಸ್ಕೋರರ್‌ ಆಗಿದ್ದರು.

ಸೆಪ್ಟೆಂಬರ್‌ 4 ರಂದು ತವರಿನಲ್ಲಿ ಲ್ಯಾಂಕಾಶೈರ್‌ ಲೈಟ್ನಿಂಗ್‌ ವಿರುದ್ಧ ಕ್ವಾರ್ಟರ್‌-ಫೈನಲ್‌ ಸಾಧಿಸಲು ಆಸೀಸ್‌‍ ಸಸೆಕ್ಸ್ ಗೆ ಸಹಾಯ ಮಾಡಿದರು. ಅವರು ಈ ಋತುವಿನಲ್ಲಿ ಸಸೆಕ್‌್ಸನ ಅಂತಿಮ ಐದು ಚಾಂಪಿಯನ್‌ಶಿಪ್‌ ಪಂದ್ಯಗಳಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.
ಡಾನ್‌ ಮೈದಾನದಲ್ಲಿ ಮತ್ತು ಹೊರಗೆ ನಮಗೆ ಉನ್ನತ ದರ್ಜೆಯವರಾಗಿದ್ದಾರೆ.

ಅವರು ಡ್ರೆಸ್ಸಿಂಗ್‌ ಕೋಣೆಗೆ ಅನುಭವದ ಸಂಪತ್ತನ್ನು ತಂದಿದ್ದಾರೆ ಮತ್ತು ನಮ ಕೆಲವು ಯುವ ಬ್ಯಾಟರ್‌ಗಳಿಗೆ ಅವರ ಆಟಗಳ ಅಭಿವದ್ಧಿಗೆ ಗಂಭೀರವಾಗಿ ಸಹಾಯ ಮಾಡಿದ್ದಾರೆ ಎಂದು ಫ್ಯಾಬ್ರೇಸ್‌‍ ಹೇಳಿದರು.

RELATED ARTICLES

Latest News