ಛತ್ತೀಸ್‌ಗಡ,ಜು.17- ಲೋಕೋಪಯೋಗಿ ಇಲಾಖೆಯ ಸಬ್ ಎಂಜಿನಿಯರ್ ನೇಮಕಾತಿ ಪರೀಕ್ಷೆಯಲ್ಲಿ ಹೈಟೆಕ್ ನಕಲು ಬಯಲಾಗಿದೆ. ಬಿಲಾಸ್ಪುರದ ರಾಮದುಲಾರೆ ಸರ್ಕಾರಿ ಸ್ವಾಮಿ ಆತಾನಂದ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗೆ ಹೊರಗೆ ಆಟೋದಲ್ಲಿ ಬುರ್ಖಾತೊಟ್ಟು ಕೂತಿದ್ದ ಯುವತಿ ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಾನಿಕ್ ಸಾಧನ ಮೂಲಕ ಉತ್ತರಗಳನ್ನು ಹೇಳುತ್ತಿರುವುದು ಬಹಿರಂಗಗೊಂಡಿದೆ.
ರಾಜ್ಯದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ನೇಮಕಾತಿ ಪರೀಕ್ಷೆಯಲ್ಲಿ ಇಬ್ಬರು ಯುವತಿಯರು ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಒಬ್ಬರಿಗೆ ಆಟೋದಲ್ಲಿ ವಾಯ್‌್ಸ ಕಾಲ್ ಮೂಲಕ ಉತ್ತರ ಕಳುಹಿಸಿದರೆ ಮತ್ತೊಬ್ಬರಿಗೆ ಎಲೆಕ್ಟ್ರಾನಿಕ್ ಸಾಧನ ಮೂಲಕ ವಾಕಿಟಾಕಿ ಬಳಸಿಕೊಂಡು ಉತ್ತರಗಳನ್ನು ಕಳುಹಿಸುತ್ತಿದ್ದಿದ್ದು ಗೊತ್ತಾಗಿದೆ.
ಸ್ಥಳೀಯ ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆ ಈ ಅಕ್ರಮವನ್ನು ಬೆಳಕಿಗೆ ತಂದಿದ್ದು, ಪ್ರಸ್ತುತ ಅಕ್ರಮಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಹೈಟೆಕ್ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.ಛತ್ತೀಸ್‌ಗಡದ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರ ತವರು ಜಿಲ್ಲೆಯಲ್ಲಿ ಈ ಅಕ್ರಮ ಬಯಲಿಗೆ ಬಂದಿದ್ದು ಭಾರಿ ಸಂಚಲನ ಮೂಡಿಸಿದೆ.
- ರೌಡಿ ಬಿಕ್ಲುಶಿವ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
- ನೈರುತ್ಯ ವಿಭಾಗದ ಡಿಸಿಪಿ ಕಚೇರಿ ಕಾರ್ಯಾರಂಭ
- ವೈಭವದಿಂದ ಜರುಗಿದ ಚಾಮುಂಡೇಶ್ವರಿ ವರ್ಧಂತಿ ಉತ್ಸವ
- ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಶಾಲೆಗಳಿಗೆ ರಜೆ
- ಛತ್ತೀಸ್‌ಗಡ : ಹೈಟೆಕ್ ಸಾಧನಗಳನ್ನು ಬಳಸಿ ಸರ್ಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಕಲು