Saturday, December 14, 2024
Homeರಾಷ್ಟ್ರೀಯ | Nationalಪತ್ನಿ, ಮೂರು ಮಕ್ಕಳನ್ನು ಕೊಂದ ಪಿಶಾಚಿ ಪತಿ

ಪತ್ನಿ, ಮೂರು ಮಕ್ಕಳನ್ನು ಕೊಂದ ಪಿಶಾಚಿ ಪತಿ

ಬಿಲಾಸ್‍ಪುರ, ಜ 2 (ಪಿಟಿಐ) ಪತ್ನಿಯ ವಿವಾಹೇತರ ಸಂಬಂಧದ ಶಂಕೆಯಲ್ಲಿ ಅನುಮಾನ ಪಿಶಾಚಿ ಪತಿಯೊಬ್ಬ ಪತ್ನಿ ಹಾಗೂ ಮೂರು ಅಪ್ರಾಪ್ತ ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಛತ್ತೀಸ್‍ಗಢದ ಬಿಲಾಸ್‍ಪುರ ಜಿಲ್ಲೆಯಲ್ಲಿ ನಡೆದಿದೆ. 34 ವರ್ಷದ ಉಮೇಂದ್ರ ಕೇವತ್ ಎಂಬಾತ ತನ್ನ ಪತ್ನಿ ಮತ್ತು ಮೂವರು ಅಪ್ರಾಪ್ತ ಮಕ್ಕಳನ್ನು ಆಕೆಯ ವಿವಾಹೇತರ ಸಂಬಂಧದ ಶಂಕೆಯಿಂದ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರ್ರಿ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಉಮೇಂದ್ರ ಕೇವತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಬಿಲಾಸ್‍ಪುರ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದ್ದಾರೆ.

ಮಾಲ್ಡೀವ್ಸ್ ಫೋಟೋಸ್ ಹಂಚಿಕೊಂಡ ಸನಾ

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇವತ್ ತನ್ನ ಪತ್ನಿ, 4 ಮತ್ತು 5 ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು 2 ವರ್ಷದ ಮಗನನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News