Thursday, December 5, 2024
Homeರಾಜ್ಯರಾಜ್ಯದೆಲ್ಲೆಡೆ ಕೈಗಾರಿಕೆಗಳಿಗೆ ಉತ್ತೇಜನ : ಸಿಎಂ ಸಿದ್ದರಾಮಯ್ಯ

ರಾಜ್ಯದೆಲ್ಲೆಡೆ ಕೈಗಾರಿಕೆಗಳಿಗೆ ಉತ್ತೇಜನ : ಸಿಎಂ ಸಿದ್ದರಾಮಯ್ಯ

Chief Minister Siddaramaiah launches GCC policy at Bengaluru Tech Summit 2024

ಬೆಂಗಳೂರು,ನ.19- ಬೆಂಗಳೂರು ಹಾಗೂ ರಾಜ್ಯದ ಇತರ ಎಲ್ಲಾ ಕಡೆಗಳಲ್ಲೂ ಐಟಿ ಹಾಗೂ ಇತರ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಜಾಗತಿಕ ಸೆಮಿ ಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕದ ಪಾತ್ರವನ್ನು ಸದೃಢಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಬೆಂಗಳೂರು ಟೆಕ್ ಸಮೇಳನವನ್ನು ಉದ್ಘಾಟಿಸಿ ಹಲವು ಸಾಧಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ನಾವಿನ್ಯತೆ, ತಂತ್ರಜ್ಞಾನದ ಪ್ರಗತಿ ಮತ್ತು ಜಾಗತಿಕ ಸಹಯೋಗಕ್ಕೆ ಈ ಸಮೇಳನ ವಿಶಿಷ್ಟ ವೇದಿಕೆ ಎಂದರು ಹೇಳಿದರು.

20ನೇ ಶತಮಾನದಲ್ಲಿ ಬೆಂಗಳೂರು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಕೇಂದ್ರವಾಗಿ ಬೆಳೆದಿದ್ದು, ತನೂಲಕ ಕೈಗಾರಿಕಾ ಬೆಳವಣಿಗೆಗೆ ಇಂಬು ನೀಡಿದೆ. 2000 ದಲ್ಲಿ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ನಾಯಕತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ ಪಾರ್ಕ್ಗಳು ಸ್ಥಾಪನೆಯಾದವು. ಈ ಮೂಲಕ ಬೆಂಗಳೂರು ಪರಿವರ್ತನೆಯತ್ತ ಹೆಜ್ಜೆ ಹಾಕಿದ್ದು, ಸಿಲಿಕಾನ್ ವ್ಯಾಲಿಯಲ್ಲಿ ಪ್ರಖ್ಯಾತಿ ಪಡೆಯಲು ಸಾಧ್ಯವಾಯಿತು ಎಂದರು.

ಸಾಫ್ಟ್ ವೇರ್, ಬಯೋಟೆಕ್ನಾಲಜಿ, ಏರೋಸ್ಪೇಸ್ ಹಾಗೂ ಅಭಿವೃದ್ಧಿಗೊಂಡ ಉತ್ಪಾದನೆಯಲ್ಲಿ ತನ್ನ ಪ್ರಭಾವಕ್ಕಾಗಿ ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಐಟಿ, ಡೀಪ್ ಟೆಕ್, ಬಯೋ ಟೆಕ್ನಾಲಜಿ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿ ರಾಜ್ಯ ವ್ಯಾಪಕ ಪ್ರತಿಭೆ ಪ್ರವರ್ಧಮಾನಕ್ಕೆ ಬರುತ್ತಿದ್ದು, ನವೋದ್ಯಮದ ಪರಿಸರವನ್ನು ರೂಪಿಸಿದೆ. ಸದೃಢವಾದ ಮೂಲಸೌಕರ್ಯ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದರು.

ನಾವಿನ್ಯತೆ, ಸುಸ್ಥಿರತೆ ಮತ್ತು ಸಮಗ್ರತೆಯ ಬೆಳವಣಿಗೆಗೆ ನಮ ಬದ್ಧತೆ ಅಚಲವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಯನ್ನು ರೂಪಿಸಲಾಗಿದೆ. ಮುಂದುವರೆದ ಭಾಗವಾಗಿ ಬೆಂಗಳೂರು, ರಾಯಚೂರು, ಬೆಳಗಾವಿ ಈ ಮೂರೂ ಜಿಲ್ಲೆಗಳನ್ನು ಜಾಗತಿಕ ನಾವಿನ್ಯತಾ ಜಿಲ್ಲೆಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು.ರಾಜ್ಯದಲ್ಲಿ ಜಿಸಿಸಿಗಳನ್ನು ಸ್ಥಾಪಿಸಲು ಈ ಪಾರ್ಕ್ಗಳು ಮೀಸಲಾಗಿರಲಿವೆ. ಜ್ಞಾನ, ಆರೋಗ್ಯ ಮತ್ತು ನಾವಿನ್ಯತೆಗಾಗಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಜುಬಾಜಿನಲ್ಲಿ ಕ್ವೀನ್ ಸಿಟಿಯನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಎಂಜಿನಿಯರಿಂಗ್ ಪ್ರತಿಭೆ ಮತ್ತು ಜಾಗತಿಕವಾಗಿ ಅತ್ಯಧಿಕ ಎಐ ವೃತ್ತಿಪರರನ್ನು ಕರ್ನಾಟಕ ಹೊಂದಿದೆ. ಎನ್ಐಪಿಯುಎನ್ಎ ಕರ್ನಾಟಕದಲ್ಲಿ ಕೈಗಾರಿಕೆಗಳು ಕಾರ್ಯ ನಿರ್ವಹಿಸಲು ಸಿದ್ಧವಿರುವ ಮಾನವ ಸಂಪನೂಲಗಳನ್ನು ತಯಾರು ಮಾಡಲು ಸರ್ಕಾರ ಕೈಗೊಂಡ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಿದೆ.

ಈ ನಿಟ್ಟಿನಲ್ಲಿ ಇಂದು ಮೈಕ್ರೋಸಾಫ್ಟ್ , ಇಂಟೆಲ್, ಆಕ್ಸೆಂಜರ್, ಐಬಿಎಂ, ಬಿಎಫ್ಎಸ್, ಕಾಂಸಾರ್ಟಿಯಂ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ 5 ಒಪ್ಪಂದಗಳಿಂದ ಸುಮಾರು 1 ಲಕ್ಷ ಮಂದಿಗೆ ಕೌಶಲ್ಯಾಭಿವೃದ್ಧಿಯಾಗಲಿದೆ ಎಂದರು.

ಮಂಗಳೂರಿನ ಫಿನ್ಟೇಕ್ ಲೀಡರ್ಶಿಪ್ನಿಂದ ಹುಬ್ಬಳ್ಳಿ-ಧಾರವಾಡದ ಇ.ವಿ.ಪ್ರಗತಿ, ಡ್ರೋನ್ಗಳ ಉದ್ಯಮ, ಮೈಸೂರಿನ ಪಿಸಿಡಿ ಕ್ಲಸ್ಟರ್ವರೆಗೂ ಸಮತೋಲಿತ ಬೆಳವಣಿಗೆಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಟೆಕ್ ಆಧಾರಿತ ವಲಯಗಳನ್ನು ಉತ್ತೇಜಿಸಲು ಭೌತಿಕ ಮತ್ತು ಡಿಜಿಟಲ್ ಮೂಲ ಸೌಕರ್ಯದ ಮೇಲೆ ನಮ ಸರ್ಕಾರ ಗಮನ ಕೇಂದ್ರೀಕರಿಸಿದೆ ಎಂದು ಹೇಳಿದರು.
ಗ್ರಾಮೀಣ ಸಂಪರ್ಕಕ್ಕಾಗಿ ನಮ ಗ್ರಾಮ, ನಮ ಯೋಜನೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬೆಂಗಳೂರಿನಾಚೆಗೂ ಉದ್ಯಮಸ್ನೇಹಿ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.

2022 ರಿಂದ 2023 ರವರೆಗೆ ನವೋದ್ಯಮದ ಪರಿಸರ ಶೇ.18.2 ರಷ್ಟು ಏರಿಕೆ ಕಂಡಿದೆ.3036 ನವೋದ್ಯಮಗಳ ಮೂಲಕ ದೇಶದಲ್ಲಿ ಶೇ.8.7 ರಷ್ಟು ಪಾಲು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ನವೋದ್ಯಮಗಳು ಯಶಸ್ಸು ಸಾಧಿಸಿವೆ.ಇಂಡಿಯನ್ ವೆಂಚರ್ ಮತ್ತು ಆಲ್ಟ್ರನೇಟ್ ಕ್ಯಾಪಿಟಲ್ ಅಸೋಸಿಯೇಷನ್ ಸಹಯೋಗ ಒದಗಿಸಿ 200 ಕ್ಕೂ ಹೆಚ್ಚು ನವೋದ್ಯಮಗಳನ್ನು ಉತ್ತೇಜಿಸಲಾಗಿದೆ.

ಕೋಚನಹಳ್ಳಿಯಲ್ಲಿ ಎಲೆಕ್ಟ್ರಾನಿಕ್ ಮ್ಯಾನಿಫ್ಯಾಕ್ಚರಿಂಗ್ ಕ್ಲಸ್ಟರಿಯನ್ನು ಸ್ಥಾಪಿಸಲಾಗುತ್ತಿದೆ. ಇದು ಜಾಗತಿಕವಾಗಿ ಸೆಮಿ ಕಂಡೆಕ್ಟರ್ ಉದ್ಯಮದಲ್ಲಿ ಕರ್ನಾಟಕಕ್ಕೆ ಮುಂಚೂಣಿ ಸ್ಥಾನವನ್ನು ದೊರಕಿಸಲಿದೆ ಎಂದು ಹೇಳಿದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಾಡಿನ ಔದ್ಯೋಗಿಕ ವಲಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಶಾಸಕರಾದ ರಿಜ್ವಾನ್ ಹರ್ಷದ್, ಶರತ್ ಬಚ್ಚೇಗೌಡ, ಜರ್ಮನ್ ಸೇರಿದಂತೆ ವಿವಿಧ ದೇಶದ ಪ್ರತಿನಿಧಿಗಳು, ಟೊಯೋಟ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂಧಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ನಾನಾ ರೀತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉದ್ಯಮಿಗಳನ್ನು ಹಾಗೂ ಪ್ರತಿಭಾವಂತರನ್ನು ಸನಾನಿಸಲಾಯಿತು.

ಹಲವು ಮಳಿಗೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಯವರು ತಾಂತ್ರಿಕ ಮಾಹಿತಿಗಳನ್ನು ಖುದ್ದು ಪಡೆದುಕೊಂಡರು. ಹಲವು ಪ್ರಾತಿಕ್ಷಿಕೆಗಳನ್ನು ಪರಿಶೀಲಿಸಿದರು.

RELATED ARTICLES

Latest News