Friday, April 4, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಬಳ್ಳಾಪುರ : ಪೊಲೀಸ್ ಠಾಣೆ ಸಮೀಪದಲ್ಲೇ ಮರ್ಡರ್

ಚಿಕ್ಕಬಳ್ಳಾಪುರ : ಪೊಲೀಸ್ ಠಾಣೆ ಸಮೀಪದಲ್ಲೇ ಮರ್ಡರ್

ಚಿಕ್ಕಬಳ್ಳಾಪುರ, ಜೂ.16- ನಗರ ಠಾಣೆಯ ಕೂಗಳತೆಯ ದೂರದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ತಡರಾತ್ರಿ ನಡೆದಿದೆ.ಕೊರಚಪೇಟೆಯ ನಿವಾಸಿ ಶೇಖರ್‌ (40) ಕೊಲೆಯಾದ ವ್ಯಕ್ತಿ.

ನಗರದಲ್ಲಿ ವಿವಾಹಿತ ಮಹಿಳೆಯರ ಜೊತೆ ಶೇಖರ್‌ ಅನೈತಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಈ ಸಂಬಂಧ ಶಿವಕುಮಾರ್‌ ಹಾಗೂ ಶೇಖರ್‌ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.ಈ ವಿಚಾರದಿಂದ ಸಿಟ್ಟಿಗೆದ್ದ ಶಿವಕುಮಾರ್‌, ಶೇಖರ್‌ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಕೂಡಲೇ ಚಿಕ್ಕಬಳ್ಳಾಪುರ ಠಾಣೆಯ ಸಬ್‌ ಇನ್ಸ್ ಪೆಕ್ಟರ್‌ ನಂಜುಂಡಯ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

RELATED ARTICLES

Latest News