Wednesday, May 22, 2024
Homeಅಂತಾರಾಷ್ಟ್ರೀಯಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚಿಗೆ 112 ಮಂದಿ ಸಾವು

ಮಧ್ಯ ಚಿಲಿಯಲ್ಲಿ ಕಾಡ್ಗಿಚ್ಚಿಗೆ 112 ಮಂದಿ ಸಾವು

ಸ್ಯಾಂಟಿಯಾಗೊ,ಫೆ. 5- ಮಧ್ಯ ಚಿಲಿಯಲ್ಲಿ ಸಂಭವಿಸಿರುವ ಭಾರೀ ಕಾಡ್ಗಿಚ್ಚಿನೊಂದಿಗೆ ಅಗ್ನಿಶಾಮಕ ದಳದವರು ಸೆಣಸಾಡುತ್ತಿದ್ದು ಇದರ ನಡುವೆ ಕನಿಷ್ಠ 112 ಜನರು ಸಾವನ್ನಪ್ಪಿದ್ದಾರೆ. ಹೆಚ್ಚು ಹಾನಿಗೊಳಗಾದ ನಗರಗಳಲ್ಲಿ ಕರ್ಫ್ಯೂ ವಿಧಿದಿಸಲಾಗಿದ್ದು ಜನರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ ಇದರ ನಡುವೆ 1931ರಲ್ಲಿ ಸ್ಥಾಪಿಸಲಾದ ಪ್ರಸಿದ್ಧ ಸಸ್ಯೋಉದ್ಯಾನವು ಬೆಂಕಿ ಜ್ವಾಲೆಯಿಂದ ಸಂಪೂರ್ಣ ನಾಶವಾದೆ.

ವಿನಾ ಡೆಲ್ ಮಾರ್ ನಗರದ ಸುತ್ತಲೂ ಬೆಂಕಿ ಸುಮಾರು 1,600 ಮನೆಗಳಿಲ್ಲದೆ ಸಸ್ಯ ಸಂಪತ್ತು ಸುಟ್ಟುಬೂದಿಯಾಗಿದೆ. ಈ ಭಾಗದ ನೆರೆಹೊರೆ ನಗರಗಳಲ್ಲಿ ಹೊಗೆಯಿಂದ ಜನರು ಹೊರಬರಲಾದರೆ ತಮ್ಮ ಮನೆಗಳಲ್ಲಿ ಸಿಕ್ಕಿಹಾಕಿಕೊಂಡರು. ವಿನಾ ಡೆಲ್ ಮಾರ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ 200 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ್ವೇಷ ಭಾಷಣ ಮಾಡಿದ್ದ ಮುಫ್ತಿ ಸಲ್ಮಾನ್ ಅರೆಸ್ಟ್, ಬೆಂಬಲಿಗರ ಹೈಡ್ರಾಮಾ

ಜನಪ್ರಿಯ ಬೀಚ್ ರೆಸಾರ್ಟ್‍ಗಲು ಬೆಂಕಿಯಿಂದ ಹೆಚ್ಚು ಪರಿಣಾಮ ಬೀರಿದ್ದು ಅಲ್ಲೇ ಸುಮಾರು 64 ಜನರು ಸಾವನ್ನಪ್ಪಿದ್ದಾರೆ .ಚಿಲಿಯ ಪೋರೆನ್ಸಿಕ್ ಮೆಡಿಸಿನ್ ಸೇವೆಯ ಪ್ರಕಾರ ಒಟ್ಟಾರೆ ಸಾವಿನ ಸಂಖ್ಯೆಯನ್ನು 112 ಜನರಿಗೆ ಏರಿದೆ.

ಕುಸಿದು ಬಿದ್ದಿರುವ ಮನೆಗಳಲ್ಲಿ ರಕ್ಷಣಾ ಕಾರ್ಯಕರ್ತರು ಹುಡುಕಾಟ ನಡೆಸುತ್ತಿರುವಾಗ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಆಸ್ಪತ್ರೆಗಳಿಗೆ ಬಂದವರಲ್ಲಿ ಕೆಲವರ ಸ್ಥಿತಿಯೂ ಗಂಭೀರವಾಗಿದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಸದ್ಯ ದೇಶದಲ್ಲಿ ತುರ್ತ ಪರಿಸ್ಥತಿ ಘೋಷಿಸಲಾಗಿದೆ.

RELATED ARTICLES

Latest News