Sunday, September 7, 2025
Homeಅಂತಾರಾಷ್ಟ್ರೀಯ | Internationalಅಮೆರಿಕ ರೈಲಿನಲ್ಲಿ ಉಕ್ರೇನ್‌ ಮಹಿಳೆ ಹತ್ಯೆ

ಅಮೆರಿಕ ರೈಲಿನಲ್ಲಿ ಉಕ್ರೇನ್‌ ಮಹಿಳೆ ಹತ್ಯೆ

Chilling Video Shows Ukrainian Refugee Stabbed To Death On American Train

ವಾಷಿಂಗ್ಟನ್‌‍, ಸೆ. 7- ಅಮೆರಿಕದಲ್ಲಿ ನೆಲೆಸಿದ್ದ ಉಕ್ರೇನ್‌ ಮಹಿಳೆಯನ್ನು ರೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಉಕ್ರೇನ್‌ನಲ್ಲಿ ನಡೆದ ಯುದ್ಧದ ವಿನಾಶದಿಂದಾಗಿ ಅನಿವಾರ್ಯವಾಗಿ ಅಮೆರಿಕಕ್ಕೆ ವಲಸೆ ಬಂದಿದ್ದ ಯುವತಿಯನ್ನು ಅಮೆರಿಕದ ರೈಲಿನಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ.

23 ವರ್ಷದ ಐರಿನಾ ಜರುಟ್ಸ್ಕಾಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.ಉತ್ತರ ಕೆರೊಲಿನಾದ ಷಾರ್ಲೆಟ್‌ನಲ್ಲಿ ಘಟನೆ ನಡೆದಿದೆ. ಯುವತಿ ಸಮವಸ್ತ್ರದಲ್ಲಿರುವುದನ್ನು ವಿಡಿಯೋದಲ್ಲಿ ಕಾಣಬಹುದು.ಆಕೆ ರೈಲು ಹತ್ತಿ ಖಾಲಿ ಸೀಟಿನಲ್ಲಿ ಬಂದು ಕೂರುತ್ತಾರೆ. ಅಲ್ಲೇ ಹಿಂದೆ ಹೊಂಚು ಹಾಕಿ ಕೂತಿದ್ದ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.

ಆಕೆಗೆ ಕುತ್ತಿಗೆಗೆ ಮೂರು ಬಾರಿ ಇರಿದಿದ್ದಾನೆ. ಜರುಟ್ಸ್ಕಾ ಅವರ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡರು ಮತ್ತು ನಂತರ ಅವರು ತಮ್ಮ ಸೀಟಿನಲ್ಲಿ ಕುಸಿದು ಬಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ನಿಲ್ದಾಣದಲ್ಲಿ ಆರೋಪಿ ಇಳಿದಿದ್ದಾನೆ, ಪೊಲೀಸರು ನಂತರ ಪ್ಲಾಟ್‌ಫಾರ್ಮ್‌ ಬಳಿ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News