Sunday, September 8, 2024
Homeರಾಜ್ಯಪೌರತ್ವ ತಿದ್ದುಪಡಿ ಕಾಯ್ದೆ : ಕರ್ನಾಟಕದಲ್ಲಿ 145 ಮಂದಿಯಿಂದ ಪೌರತ್ವಕ್ಕಾಗಿ ಅರ್ಜಿ

ಪೌರತ್ವ ತಿದ್ದುಪಡಿ ಕಾಯ್ದೆ : ಕರ್ನಾಟಕದಲ್ಲಿ 145 ಮಂದಿಯಿಂದ ಪೌರತ್ವಕ್ಕಾಗಿ ಅರ್ಜಿ

ಬೆಂಗಳೂರು,ಮೇ22- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಡಿ ಕರ್ನಾಟಕದಲ್ಲಿ 145 ಮಂದಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ತಮ ಅರ್ಜಿಗಳನ್ನು ಅಂಚೆ ಇಲಾಖೆಗೆ ಕಳುಹಿಸಿದ್ದಾರೆ ಎಂದು ಅಂಚೆ ಮೂಲಗಳು ತಿಳಿಸಿವೆ. ಅಚ್ಚರಿ ಎಂದರೆ ಇವರೆಲ್ಲಾ ರಾಜ್ಯದ ಎರಡು ಜಿಲ್ಲೆಗಳವರಾಗಿದ್ದಾರೆ.

ರಾಯಚೂರಿನಿಂದ 143 ಮತ್ತು ದಕ್ಷಿಣ ಕನ್ನಡದಿಂದ ಎರಡು ಅರ್ಜಿಗಳು ಬಂದಿವೆ. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಹಿಂದೂಗಳು. ಇದು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಅರ್ಜಿಗಳನ್ನು ಕಳುಹಿಸಲು ಯಾವುದೇ ಗಡುವು ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ವ್ಯಕ್ತಿಗಳು ರಾಯಚೂರಿಗೆ ಯಾವಾಗ ಸ್ಥಳಾಂತರಗೊಂಡರು ಎಂಬುದು ನಮಗೆ ತಿಳಿದಿಲ್ಲ, ಆದರೆ ನಮ್ಮ ವಿಭಾಗೀಯ ಕಚೇರಿಗೆ 143 ಅರ್ಜಿಗಳು ಬಂದಿವೆ. ಬೆಂಗಳೂರಿನಲ್ಲಿ ನಾಲ್ಕು ವಿಭಾಗೀಯ ಕಚೇರಿಗಳಿದ್ದು, ಒಂದು ಅರ್ಜಿಯನ್ನೂ ಸ್ವೀಕರಿಸಿಲ್ಲ ಎಂದು ಮತ್ತೊಂದು ಮೂಲ ತಿಳಿಸಿದೆ.

ಡಿಸೆಂಬರ್‌ 31, 2014 ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. ಈ ವರ್ಷದ ಮಾರ್ಚ್‌ 11 ರಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಅಧಿಸೂಚನೆ ಹೊರಡಿಸಲಾಯಿತು. ಅಂಚೆ ಮತ್ತು ರೈಲ್ವೆ ನೌಕರರಿಗೆ ಪ್ರಮಾಣಪತ್ರಗಳನ್ನು ಪರಿಶೀಲಿಸಲು ಮತ್ತು ವಿತರಿಸಲು ಅಧಿಕಾರ ನೀಡಲಾಗಿದೆ.

ದೇಶಾದ್ಯಂತ ಸುಮಾರು 12,000 ಮಂದಿ ಅರ್ಜಿ ಸಲ್ಲಿಸಿದ್ದು, ಇತ್ತೀಚೆಗೆ 300 ಮಂದಿಗೆ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ. ಅರ್ಜಿದಾರರು ಎಲ್ಲಾ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌‍ ಮಾಡಬೇಕಾಗುತ್ತದೆ. ಮೊದಲ ವೈಯಕ್ತಿಕ ಮೇ 25ರಂದು ರಾಯಚೂರಿನಲ್ಲಿ ನಡೆಯುತ್ತದೆ ಮತ್ತು ಅರ್ಜಿದಾರರು ಎಲ್ಲಾ ಮೂಲ ದಾಖಲೆಗಳನ್ನು ಒದಗಿಸುವ ನಿರೀಕ್ಷೆಯಿದೆ.

ಒಂದು ದಿನದಲ್ಲಿ 28 ನೀಡಿರುವುದರಿಂದ ಎಲ್ಲಾ ಅರ್ಜಿಗಳನ್ನು ಮೇ 31ರೊಳಗೆ ಪೂರ್ಣಗೊಳಿಸಲು ಅಂಚೆ ಸಿಬ್ಬಂದಿ ಯೋಜಿಸಿದ್ದಾರೆ. ಜೂನ್‌ 5ರಂದು ಇಬ್ಬರು ಅರ್ಜಿದಾರರಿಗೆ ನೀಡಿದ್ದಾರೆ, ಜೂನ್‌ 5ರೊಳಗೆ ಅಂಚೆ ಇಲಾಖೆಯ ಕೆಲಸ ಮುಗಿಯುತ್ತದೆ. ಪ್ರಕ್ರಿಯೆ ಮುಗಿದ ನಂತರ ಅಂಚೆ ಇಲಾಖೆಯು ಅರ್ಜಿಗಳನ್ನು ರಾಜ್ಯ ಮಟ್ಟದ ಅಧಿಕಾರ ಸಮಿತಿಗೆ ಕಳುಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಅದನ್ನು ಮತ್ತೊಮೆ ಪರಿಶೀಲಿಸುತ್ತಾರೆ ಮತ್ತು ಪರಿಶೀಲನೆಯ ವಿವರಗಳು ಮತ್ತು ದಾಖಲೆಗಳನ್ನು ಸಿಎಎ ಪೋರ್ಟಲ್‌ನಲ್ಲಿ ಅಪ್‌ಲೋಡ್‌‍ ಮಾಡಲಾಗುತ್ತದೆ. ಗೃಹ ಸಚಿವಾಲಯವು ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

Latest News