Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಕೋಲಾರ | Kolarಈದ್‌ ಮಿಲಾದ್‌ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ 2 ಗುಂಪುಗಳ ಮಧ್ಯೆ ಘರ್ಷಣೆ

ಈದ್‌ ಮಿಲಾದ್‌ ಮೆರವಣಿಗೆ ವೇಳೆ ಮುಸ್ಲಿಂ ಸಮುದಾಯದ 2 ಗುಂಪುಗಳ ಮಧ್ಯೆ ಘರ್ಷಣೆ

Clash between 2 groups of Muslim Community during Eid Milad procession

ಕೋಲಾರ,ಸೆ.17- ನಗರದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ವೇಳೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮುಸ್ಲಿಂ ಸಮುದಾಯದ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು 10 ಮಂದಿ ಗಾಯಗೊಂಡಿದ್ದಾರೆ.

ಕಳೆದ ರಾತ್ರಿ ನಗರದ ಕ್ಲಾಕ್‌ ಟವರ್‌ ಬಳಿ ಮೆರವಣಿಗೆ ಸಾಗುವಾಗ ಮಾತಿಗೆ ಮಾತು ಬೆಳೆದು ಮುಸ್ಲಿಂ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದ್ದು, ಒಂದು ಗುಂಪು ಮಾರಕಾಸ್ತ್ರಗಳಿಂದ ಥಳಿಸಿದೆ.

ಘಟನೆಯಲ್ಲಿ ಸೈಯದ್‌ ಸಲಾನ್‌, ಸೈಫ್‌, ಹುಸೇನ್‌, ಕಲೀಲ್‌ ಅಹದ್‌ ಸೇರಿ ಹಲವರಿಗೆ ಗಾಯವಾಗಿದ್ದು ಅವರೆಲ್ಲರೂ ಎಸ್‌‍ಎನ್‌ಆರ್‌ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ನಿನ್ನೆರಾತ್ರಿ ಮುಸ್ಲಿಂ ಸಮುದಾಯ ಮೆರವಣಿಗೆ ಕ್ಲಾಕ್‌ ಟವರ್‌ ಬಳಿ ಹೋಗುತ್ತಿದ್ದಾಗ ಸಮುದಾಯದ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡಿದ್ದು ಒಂದು ಗುಂಪು ಥಳಿಸಿ, ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಬಿ. ನಿಖಿಲ್‌ ಸ್ಥಳಕ್ಕೆ ಧಾವಿಸಿದ್ದು, ಗುಂಪುಗೂಡಿದ್ದ ಜನರನ್ನು ಚದುರಿಸಿದ ಬಳಿಕ ಮೆರವಣಿಗೆ ಮುಂದೆ ಸಾಗಿದೆ. ತಡ ರಾತ್ರಿವರೆಗೂ ಬಿಗಿ ಪೊಲೀಸ್‌‍ ಭದ್ರತೆ ಕಲ್ಪಿಸಿ ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿತ್ತು.

RELATED ARTICLES

Latest News