Thursday, March 27, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | ChikkamagaluruExam Fear : ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Exam Fear : ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

Class 9 student commits suicide over fear of failing in exams

ಚಿಕ್ಕಮಗಳೂರು, ಮಾ.21 – ಜಿಲ್ಲೆಯ ಕಡೂರು ತಾಲೂಕಿನ ಡಿ. ಕಾರೇಹಳ್ಳಿಯಲ್ಲಿ 9ನೇ ತರಗತಿಯಲ್ಲಿ ಫೇಲ್ ಆಗುವ ಭಯದಿಂದ 15 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.

ಮೃತಳನ್ನು ವರ್ಷಿಣಿ(15) ಎಂದು ಗುರುತಿಸಲಾಗಿದೆ. ಬಾಣಾವರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವರ್ಷಿಣಿ, ಪರೀಕ್ಷೆಯಲ್ಲಿ ಫೇಲ್ ಆಗುವ ಆತಂಕದಿಂದ ಮನನೊಂದಿದ್ದಳು. ಶುಂಠಿಗೆ ತಂದಿದ್ದ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಯ ಮಾಹಿತಿ ಪಡೆದ ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರ ಪ್ರಕಾರ, ವಿದ್ಯಾರ್ಥಿನಿ ವರ್ಷಿಣಿ ಪಾಠದಲ್ಲಿ ಉತ್ತಮ ವಿದ್ಯಾರ್ಥಿನಿಯಾಗಿದ್ದರೂ ಪರೀಕ್ಷಾ ಫಲಿತಾಂಶದ ಭಯದಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದಳು ಎನ್ನದಾಗಿದೆ.

RELATED ARTICLES

Latest News