Friday, October 11, 2024
Homeರಾಷ್ಟ್ರೀಯ | Nationalಮೇಘಸ್ಫೋಟ ; ಶ್ರೀನಗರ-ಲೇಹ್‌ ಹೆದ್ದಾರಿ ಬಂದ್‌

ಮೇಘಸ್ಫೋಟ ; ಶ್ರೀನಗರ-ಲೇಹ್‌ ಹೆದ್ದಾರಿ ಬಂದ್‌

ಶ್ರೀನಗರ, ಆ.4 – ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್‌‍ ಜಿಲ್ಲೆಯಲ್ಲಿ ಮೇಘಸ್ಫೋಟದಿಂದಾಗಿ ರಸ್ತೆಗೆ ಹಾನಿಯಾಗಿದ್ದು, ಶ್ರೀನಗರ-ಲೇಹ್‌ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂದರ್ಬಾಲ್‌ ಜಿಲ್ಲೆಯ ಕಚೆರ್ವಾನ್‌ನಲ್ಲಿ ರಸ್ತೆ ಹಾನಿಗೊಳಗಾದ ಕಾರಣ ಶ್ರೀನಗರ-ಲೇಹ್‌ ರಸ್ತೆಯಲ್ಲಿ ಸಂಚಾರವನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ಸಂಚಾರ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಘಸ್ಫೋಟದಿಂದ ಉಂಟಾದ ಹಠಾತ್‌ ಪ್ರವಾಹದಿಂದಾಗಿ ವಸತಿ ಗೃಹಗಳು ಸೇರಿದಂತೆ ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ ,ಅಗತ್ಯವಿರುವವರಿಗೆ ಸಹಾಯ ಮತ್ತು ನೆರವು ನೀಡಲು ಅಧಿಕಾರಿಗಳು ಮಂದಾಗಿದ್ದಾರೆ.

ಹೆದ್ದಾರಿಯ ಮುಚ್ಚಿರುವುದರಿಂದ ಲಡಾಖ್‌ ಕೇಂದ್ರಾಡಳಿತ ಪ್ರದೇಶದಿಂದ ಕಾಶ್ಮೀರ ಕಣಿವೆಯನ್ನು ಕಡಿತಗೊಳಿಸಿದೆ ಮತ್ತು ಅಮರನಾಥ ಯಾತ್ರೆಗಾಗಿ ಬಾಲ್ಟಾಲ್‌ ಬೇಸ್‌‍ ಕ್ಯಾಂಪ್‌ ಪ್ರವೇಶಿಸಲಾಗುವುದಿಲ್ಲ ಎಂದು ಹೇಳಿದರು.

RELATED ARTICLES

Latest News