Friday, June 21, 2024
Homeರಾಜ್ಯಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಕವಯಿತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಸಿಎಂ ಅಭಿನಂದನೆ

ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದ ಕವಯಿತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಸಿಎಂ ಅಭಿನಂದನೆ

ಬೆಂಗಳೂರು,ಏ.12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕವಯಿತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಇಂದು ಅಭಿನಂದನೆ ಸಲ್ಲಿಸಿದರು.

ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದು, ಇಂದು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಸಮೇತ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದರು.

ವೈವಿಧ್ಯವನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯನ್ನು ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರೆಕೊಟ್ಟ ಖ್ಯಾತ ಕವಯಿತ್ರಿ ಡಾ. ಮಮ್ತಾ ಸಾಗರ್ ಅವರಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.

ಈ ಬಾರಿಯ ಪ್ರತಿಷ್ಠಿತ ಜಾಗತಿಕ ಒಕ್ಕೂಟದ ಗೌರವ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿ ವಿಜೇತ ಬರಹಗಾರ ವೋಲೆ ಸೋಯೆಂಕಾ ಅವರಿಗೆ ಘೋಷಿಸಲಾಗಿದೆ.

RELATED ARTICLES

Latest News