Tuesday, July 23, 2024
Homeರಾಜ್ಯಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ : ಸಿ.ಎಂ.ಇಬ್ರಾಹಿಂ

ಜಾತ್ಯತೀತ ಸಿದ್ಧಾಂತ ಬಿಟ್ಟುಕೊಡಲು ಸಾಧ್ಯವಾಗುತ್ತಿಲ್ಲ : ಸಿ.ಎಂ.ಇಬ್ರಾಹಿಂ

ಬೆಂಗಳೂರು,ಅ.4-ಬಿಜೆಪಿ ಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ನಮ್ಮ ಪಕ್ಷದ ಚಿಹ್ನೆ ಉಳಿಯಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೂ ನಾವು ಜಾತ್ಯತೀತ ಸಿದ್ದಾಂತ ಬಿಟ್ಟುಕೊಡಲು ಆಗುವುದಿಲ್ಲ ಎಂದರು.

ಜೆಡಿಎಸ್ ಸಿದ್ದಾಂತವನ್ನು ಮೆಚ್ಚಿ ಬಿಜೆಪಿಯವರು ಬಂದಿದ್ದಾರೆಯೇ ಅಥವಾ ಬಿಜೆಪಿ ಸಿದ್ದಾಂತವನ್ನು ಮೆಚ್ಚಿ ಜೆಡಿಎಸ್‍ನವರು ಹೋಗಿದ್ದಾರಾ? ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಎಲ್ಲ ಕಡೆ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಅಕ್ಟೋಬರ್ 16ರಂದು ಮೈತ್ರಿ ಕುರಿತಂತೆ ಸವಿಸ್ತಾರವಾಗಿ ಚರ್ಚೆ ಮಾಡುತ್ತೇವೆ. ಎಲ್ಲರೂ ಸಲಹೆ ಕೊಡಲು ಕಾತುರದಿಂದ ಕಾಯುತ್ತಿದ್ದಾರೆ. ಆ ಸಭೆಯ ನಂತರ ಅಭಿಪ್ರಾಯವನ್ನು ಸಂಗ್ರಹಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸುವುದಾಗಿ ಹೇಳಿದರು.

ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಪ್ರತಿಪಕ್ಷದ ಹಾಲಿ, ಮಾಜಿ ಶಾಸಕರು

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಾದ ಬಳಿಕ ನಾನು ಪಕ್ಷದಲ್ಲಿ ಕಾಣಿಸುತ್ತಿಲ್ಲ ಎಂಬುದು ತಪ್ಪು. ಎಲ್ಲ ಜಿಲ್ಲೆಯವರು ನಮ್ಮ ಸಂಪರ್ಕದಲ್ಲಿದ್ದಾರೆ. ನಾನು ಕೂಡ ಎಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಈ ಮೈತ್ರಿ ಕಾಂಗ್ರೆಸಿಗೆ ಬೇಕು, ಬಿಜೆಪಿಗೆ ಬೇಕೊ ಎಂಬುದು ಗೊತ್ತಿಲ್ಲ ಎಂದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಶೇ.20ರಷ್ಟು ಮತಗಳು ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಬಂದಿದೆ. ಇದನ್ನು ಶಾಸಕರು ಒಪ್ಪಿದ್ದಾರೆ. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚು ಮತಗಳು ಬರಲಿಲ್ಲ, ಏಕೆ ಬರಲಿಲ್ಲ ಎಂಬುದರ ಕಾರಣ ಹುಡುಕಬೇಕಿದೆ ಎಂದರು.

ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿ ಏನು ಅಡುಗೆ ಮಾಡಬೇಕೊ ಅದನ್ನು ಮಾಡಿದ್ದೇನೆ. ಬಿರಿಯಾನಿಯನ್ನೇ ಯಾಕೆ ಮಾಡಿಲ್ಲ ಎಂದರೆ ಅದು ನನಗೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಕೆಲವರಿಗೆ ಅಸಮಾಧಾನವಿದೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.

ಮೈಸೂರು ದಸರಾ : ಅ.6ರಿಂದ 13ರವರೆಗೆ ಯುವ ಸಂಭ್ರಮ

ವಿಧಾನಪರಿಷತ್ ಸದಸ್ಯ ಸ್ಥಾನವನ್ನೇ ಬಿಟ್ಟು ಬಂದಿದ್ದೇನೆ. ನಾನು ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವನಲ್ಲ ನಾಡಿನ ಜನರ ಹೃದಯದಲ್ಲಿದ್ದೇನೆ ಎಂದು ರಾಯಭಾರ ಹುದ್ದೆಯ ಬೇಡಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ರಾಜ್ಯ ಸರ್ಕಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ನೀಡಿದ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಶಿವಾಜಿ, ಮಹಾತ್ಮ ಗಾಂೀಧಿಜಿ, ಟಿಪ್ಪು ಸುಲ್ತಾನ್ ಕಟೌಟ್‍ಗಳನ್ನು ಹಾಕಿದರೆ ತಪ್ಪೇ? ಟಿಪ್ಪು, ಔರಂಗಜೇಬ್ ಯಾರು ಎಂದು ಗೊತ್ತೆ? ಔರಂಗಜೇಬ್ ಹಿಂದೂಸ್ಥಾನದ ದೊರೆಯಾಗಿದ್ದರು. ಅವರ ಕಟೌಟ್ ಹಾಕಿದರೆ ತಪ್ಪೇನು ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

RELATED ARTICLES

Latest News