Monday, October 7, 2024
Homeಇದೀಗ ಬಂದ ಸುದ್ದಿರಾಜ್ಯಪಾಲರು ತಿರಸ್ಕರಿಸಿದ ಮಸೂದೆ ಮರು ಮಂಡನೆ ಮಾಡಿದ ಸ್ಟಾಲಿನ್

ರಾಜ್ಯಪಾಲರು ತಿರಸ್ಕರಿಸಿದ ಮಸೂದೆ ಮರು ಮಂಡನೆ ಮಾಡಿದ ಸ್ಟಾಲಿನ್

ಚೆನ್ನೈ, ನ.18 (ಪಿಟಿಐ) – ರಾಜ್ಯಪಾಲ ಆರ್ ಎನ್ ರವಿ ಅವರು ಹಿಂತಿರುಗಿಸಿದ್ದ 10 ಮಸೂದೆಗಳನ್ನು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಇಂದು ಮತ್ತೆ ವಿಧಾನಸಭೆಯಲ್ಲಿ ಮರುಪರಿಶೀಲನೆಗೆ ನಿರ್ಣಯವನ್ನು ಮಂಡಿಸಿದ್ದಾರೆ.

ನಿರ್ಣಯವನ್ನು ಮಂಡಿಸಿದ ಸ್ಟಾಲಿನ್, ಯಾವುದೇ ಕಾರಣಗಳನ್ನು ನೀಡದೆ, ರವಿ ಅವರು ಬಿಲ್‍ಗಳಿಗೆ ನಾನು ಒಪ್ಪಿಗೆಯನ್ನು ತಡೆಹಿಡಿಯುತ್ತೇನೆ ಎಂದು ನಮೂದಿಸಿ ಹಿಂದಿರುಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2020 ಮತ್ತು 2023ರಲ್ಲಿ ತಲಾ 2 ಮಸೂದೆಗಳನ್ನು ಸದನವು ಅಂಗೀಕರಿಸಿದ್ದರೆ, ಇತರ ಆರು ಮಸೂದೆಗಳನ್ನು ಕಳೆದ ವರ್ಷ ಅಂಗೀಕರಿಸಲಾಗಿತ್ತು.

ಭಾರತದ ಸಂವಿಧಾನದ 200 ನೇ ವಿಧಿಯ ನಿಬಂಧನೆಯ ಅಡಿಯಲ್ಲಿ, ಮೇಲಿನ ಮಸೂದೆಗಳನ್ನು ಮತ್ತೊಮ್ಮೆ ಅಂಗೀಕರಿಸಿದರೆ ಮತ್ತು ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದರೆ, ಅವರು ಅದರಿಂದ ಒಪ್ಪಿಗೆಯನ್ನು ತಡೆಹಿಡಿಯುವುದಿಲ್ಲ ಎಂದು ಸದನವು ಗಮನಿಸುತ್ತದೆ ಎಂದು ಅವರು ಹೇಳಿದರು.

ಹಿಮಾಚಲದಲ್ಲಿ ಪತ್ತೆಯಾಯ್ತು ರಷ್ಯಾ ದಂಪತಿ ಬೆತ್ತಲೆ ಶವಗಳು

ತಮಿಳುನಾಡು ವಿಧಾನಸಭೆಯ ನಿಯಮ 143 ರ ಅಡಿಯಲ್ಲಿ ಈ ಕೆಳಗಿನ ಮಸೂದೆಗಳನ್ನು ಈ ಸಭೆಯು ಮರುಪರಿಶೀಲಿಸಬಹುದು ಎಂದು ಈ ಸದನವು ನಿರ್ಧರಿಸುತ್ತದೆ ಎಂದು ಸ್ಟಾಲಿನ್ ಮಂಡಿಸಿದ ನಿರ್ಣಯವು ತಿಳಿಸಿದೆ. ರವಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಸರ್ಕಾರದ ಉಪಕ್ರಮಗಳನ್ನು ತಡೆಯಲು ರಾಜ್ಯಪಾಲರು ಉತ್ಸುಕರಾಗಿದ್ದಾರೆ ಎಂದು ಆರೋಪಿಸಿದರು.

ಅವರು ತಮ್ಮ ವೈಯಕ್ತಿಕ ಆಸೆ ಮತ್ತು ಅಭಿಮಾನದ ಕಾರಣದಿಂದ ಮಸೂದೆಗಳನ್ನು ಹಿಂದಿರುಗಿಸಿದ್ದಾರೆ…ಸಮ್ಮತಿ ನೀಡದಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಯಾಗಿದೆ ಎಂದು ಸಿಎಂ ಹೇಳಿದರು.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನು ರಾಜ್ಯಪಾಲರ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

RELATED ARTICLES

Latest News