Sunday, April 28, 2024
Homeರಾಷ್ಟ್ರೀಯಮಹಿಳೆಯರ ಕುರಿತು ಹೊಲಸು ನಾಲಿಗೆ ಹರಿಬಿಟ್ಟಿದ್ದ ನಿತೀಶ್ ಕುಮಾರ್ ಕ್ಷಮೆಯಾಚನೆ

ಮಹಿಳೆಯರ ಕುರಿತು ಹೊಲಸು ನಾಲಿಗೆ ಹರಿಬಿಟ್ಟಿದ್ದ ನಿತೀಶ್ ಕುಮಾರ್ ಕ್ಷಮೆಯಾಚನೆ

ಪಾಟ್ನಾ, ನ.8- ಮಹಿಳೆಯರು ಕುರಿತು ವಿವಾದತ್ಮಾಕ ಹೇಳಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೊನೆಗೂ ತಮ್ಮ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದು, ಕ್ಷಮೆಯಾಚಿಸಿದ್ದಾರೆ. ನಾನು ಯಾರ ಮನಸ್ಸುನ್ನು ನೋಯಿಸಬೇಕೆಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿರಲಿಲ್ಲ. ಒಂದು ವೇಳೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಈ ಕೂಡಲೇ ಜನಸಂಖ್ಯೆ ನಿಯಂತ್ರಣದ ಬಗ್ಗೆ ತಪ್ಪು ಸಂದೇಶವನ್ನು ನೀಡಿದ್ದರೆ ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.

ಮಹಿಳಾ ಅಭಿವೃದ್ಧಿಯಲ್ಲಿ ರಾಜ್ಯವು ಮುಂದಿದೆ. ನನ್ನ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ, ನನ್ನ ಹೇಳಿಕೆಯು ತಪ್ಪು ಸಂದೇಶವನ್ನು ಕಳುಹಿಸಿದ್ದರೆ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದು ಹೇಳಿದರು. ನಿನ್ನೆ ವಿಧಾನಸಭೆಯಲ್ಲಿ ಜನಸಂಖ್ಯಾ ನಿಯಂತ್ರಣದ ವಿಷಯದಲ್ಲಿ ಮಹಿಳೆಯರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುವ ಬಿಹಾರ ಸಿಎಂ ನಿತೀಶ್ ಕುಮಾರ್, ವಿದ್ಯಾವಂತ ಮಹಿಳೆ ತನ್ನ ಪತಿ ಸಂಭೋಗದ ಸಮಯದಲ್ಲಿ ಸಂಯಮದಿಂದ ವರ್ತಿಸುವುದನ್ನು ಹೇಗೆ ತಡೆಯಬಹುದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು.

ಮಾನವ ಕಳ್ಳ ಸಾಗಣೆ ಮಾಡುತ್ತಿದ್ದ ರೋಹಿಂಗ್ಯಾ ನಾಯಕನ ಬಂಧನ

ನಿತೀಶ್ ಕುಮಾರ್ ಹೇಳಿಕೆಗೆ ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕರು, ನಿತೀಶ್ ಕುಮಾರ್ ಅವರ ಕ್ಷಮೆಯಾಚನೆಯನ್ನು ಬಯಸುವುದಿಲ್ಲ, ಬದಲಿಗೆ ಅವರ ರಾಜೀನಾಮೆ ಎಂದು ಒತ್ತಾಯಿಸಿದ್ದರು. ಇದರ ನಡುವೆಯೇ ರಾಷ್ಟ್ರೀಯ ಮಹಿಳಾ ಆಯೋಗ ತಮ್ಮ ಹೇಳಿಕೆ ಕುರಿತು ವಿವರಣೆ ನೀಡುವಂತೆ ನೋಟೀಸ್ ಜಾರಿ ಮಾಡಿತ್ತು.

ಮಹಿಳೆಯರ ಬಗ್ಗೆ ನಿತೀಶ್ ಕುಮಾರ್ ಹೇಳಿಕೆಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‍ಸಿಡಬ್ಲ್ಯೂ) ಆಕ್ರೋಶ ವ್ಯಕ್ತಪಡಿಸಿ ನಿತೀಶ್ ಕುಮಾರ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎನ್‍ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ಒತ್ತಾಯಿಸಿದ್ದರು.

ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಆಡಿರುವ ಅಸಭ್ಯ ಮಾತುಗಳಿಂದ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗಿದೆ. ಅವರ ಭಾಷಣದಲ್ಲಿ ಬಳಸಲಾದ ಭಾಷೆಯು ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ನಾವು ಅಂತಹ ನಡವಳಿಕೆ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರೇಖಾ ತಿಳಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿಯನ್ನು ಟೀಕಿಸಿರುವ ಬಿಜೆಪಿಯ ಬಿಹಾರ ಘಟಕವು ನಿತೀಶ್ ಕುಮಾರ್ ಅವರನ್ನು ಭಾರತದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅಸಭ್ಯ ರಾಜಕಾರಣಿ ಎಂದು ಟೀಕಾ ಪ್ರಹಾರ ನಡೆಸಿತ್ತು. ಮುಖ್ಯಮಂತ್ರಿ ಇನ್ನು ಮುಂದೆ ಸುಸಂಸ್ಕೃತ ಸಮಾಜವನ್ನು ಪ್ರತಿನಿಸಲು ಯೋಗ್ಯರಲ್ಲ ಎಂದು ಹೇಳಿದರು. ನಿತೀಶ್ ಕುಮಾರ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದ್ದರು.

ಮೋದಿ ವಿರುದ್ಧ ಹರಿಹಾಯ್ದ ಅಸಾದುದ್ದೀನ್ ಓವೈಸಿ
ಏನಿದು ವಿವಾದ:
ಮದುವೆಯ ನಂತರ ಪುರುಷರು ತಮ್ಮ ಪತ್ನಿಯರನ್ನು ಸಂಭೋಗಿಸಲು ಕೇಳುತ್ತಾರೆ, ಆದರೆ ಬಿಹಾರದಲ್ಲಿ ವಿದ್ಯಾವಂತ ಮಹಿಳೆಯರು ತಮ್ಮ ಗಂಡಂದಿರನ್ನು ಸರಿಯಾದ ಸಮಯದಲ್ಲಿ ಹಾಗೆ ಮಾಡುವುದನ್ನು ನಿಲ್ಲಿಸುವಂತೆ ಕೇಳುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದ್ದರು. ಇದರಿಂದಾಗಿ ಬಿಹಾರದ ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದಾಗ ಹಿಂದೆ ಕುಳಿತಿದ್ದ ಕೆಲ ಶಾಸಕರು ನಗುತ್ತಿದ್ದರು.

ಕಳೆದ ವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ನಿತೀಶ್ ಕುಮಾರ್ ಅವರು 1987ರಲ್ಲಿ ಸ್ರ್ಪಧಿಸಿದ್ದ ಚುನಾವಣೆಯಲ್ಲಿ ಸಿಪಿಐ ಮತ್ತು ಸಿಪಿಐ-ಎಂ ತನಗೆ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ, ಆ ವರ್ಷ ಯಾವುದೇ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗಷ್ಟೇ ಜನತಾ ದರ್ಬಾರ್‍ನಲ್ಲಿ ಗೃಹ ಸಚಿವರನ್ನು ಕರೆಸುವಂತೆ ಅಲ್ಲಿನ ಅಧಿಕಾರಿಗಳನ್ನು ಕೇಳಿಕೊಂಡಿದ್ದು, ಈ ಹುದ್ದೆಯನ್ನು ತಾವೇ ನಿರ್ವಹಿಸಿದ್ದರಿಂದ ಎಡವಟ್ಟು ಎದುರಿಸಬೇಕಾಯಿತು.

ಸಿಎಂ ಹೇಳಿಕೆ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ್ದು. ಲೈಂಗಿಕ ಶಿಕ್ಷಣದ ವಿಷಯ ಚರ್ಚೆಯಾದಾಗಲೆಲ್ಲಾ ಜನರು ಹಿಂಜರಿಯುತ್ತಾರೆ. ಇದನ್ನು ಈಗ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಶಾಲೆಗಳಲ್ಲಿ ವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಕಲಿಸಲಾಗುತ್ತದೆ. ಮಕ್ಕಳು ಅದನ್ನು ಕಲಿಯುತ್ತಾರೆ. ಜನಸಂಖ್ಯೆಯ ಹೆಚ್ಚಳವನ್ನು ತಡೆಯಲು ಪ್ರಾಯೋಗಿಕವಾಗಿ ಏನು ಮಾಡಬೇಕು ಎಂಬುದನ್ನು ಹೇಳಿದ್ದಾರೆ ಎಂದು ತೇಜಸ್ವಿ ಯಾದವ್ ಸಮರ್ಥಿಸಿಕೊಂಡಿದ್ದರು.

RELATED ARTICLES

Latest News