Thursday, September 19, 2024
Homeಇದೀಗ ಬಂದ ಸುದ್ದಿಸಿಎಂ ಹುದ್ದೆ ಖಾಲಿ ಇಲ್ಲ : ಡಿಸಿಎಂ ಡಿಕೆಶಿ

ಸಿಎಂ ಹುದ್ದೆ ಖಾಲಿ ಇಲ್ಲ : ಡಿಸಿಎಂ ಡಿಕೆಶಿ

CM post is not vacant : DCM DK

ಬೆಂಗಳೂರು,ಸೆ.2- ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಸರ್ಕಾರ ಮುಂದುವರೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಲಿದೆ ಎಂಬ ಊಹಾತ್ಮಕ ಅಂದಾಜುಗಳು ಸರಿಯಲ್ಲ ಎಂದರು.

ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ನಡೆಯುತ್ತದೆ ಹಾಗೂ ಮುಂದುವರೆಯುತ್ತದೆ. ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದರೆ ಈ ಬಗ್ಗೆ ಮಾತನಾಡಲು ಅವಕಾಶವಿತ್ತು, ಆದರೆ ಸದ್ಯಕ್ಕಿಲ್ಲ. ಯಾರಿಗೇ ಆಸೆ ಆಕಾಂಕ್ಷೆಗಳಿದ್ದರೂ ಮಾಧ್ಯಮಗಳ ಮುಂದೆ ಚರ್ಚೆ ಮಾಡಬಾರದು ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಕೋವಿಡ್ ಹಗರಣದ ಕುರಿತು ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸುಧಾಕರ್ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು.

ರಕ್ತದ ನರನಾಡಿಗಳಲ್ಲೂ ಅವರಿಗೆ ಕಾಂಗ್ರೆಸ್ ತುಂಬಿತ್ತು. ಹೀಗಾಗಿ ನಮ ಪಕ್ಷದ ಬಗ್ಗೆ ಪ್ರಮಾಣಪತ್ರ ನೀಡುವ ಮುನ್ನ ಅವರು ಆತವಿಮರ್ಶೆ ಮಾಡಿಕೊಳ್ಳಲಿ. ಐದಾರು ವರ್ಷಗಳಿಂದಷ್ಟೇ ಅವರು ಪಕ್ಷ ಬಿಟ್ಟು ಹೋಗಿದ್ದಾರೆ ಎಂದರು.

RELATED ARTICLES

Latest News