Friday, November 22, 2024
Homeರಾಜ್ಯರಾಹುಲ್ ಗಾಂಧಿ ಕೈಗೆ ಈ ದೇಶದ ಅಧಿಕಾರ ಸಿಗಬೇಕು : ಸಿಎಂ ಸಿದ್ದು

ರಾಹುಲ್ ಗಾಂಧಿ ಕೈಗೆ ಈ ದೇಶದ ಅಧಿಕಾರ ಸಿಗಬೇಕು : ಸಿಎಂ ಸಿದ್ದು

ಬೆಂಗಳೂರು,ಡಿ.28- ನಮ್ಮಲ್ಲಿರುವ ಭಿನ್ನಮತಗಳನ್ನು ಬದಿಗಿಟ್ಟು ರಾಹುಲ್‍ಗಾಂಧಿಯವರನ್ನು ಮುಂದಿನ ಪ್ರಧಾನಿ ಮಾಡಲು ನಾವೆಲ್ಲಾ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ 139 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜನಪರವಾಗಿ ಯೋಚಿಸುವ ರಾಹುಲ್‍ಗಾಂಧಿ ಪ್ರಧಾನಿಯಾಗಬೇಕೆ ಅಥವಾ ಸುಳ್ಳು ಹೇಳಿ ಭಾವನಾತ್ಮಕವಾಗಿ ಜನರನ್ನು ದಾರಿ ತಪ್ಪಿಸುವ ನರೇಂದ್ರ ಮೋದಿ ಪ್ರಧಾನಿಯಾಗಬೇಕೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಭಾರತ್ ಜೋಡೊದಂತಹ ಯಾತ್ರೆಯನ್ನು ಬೇರೆ ಯಾವ ನಾಯಕರೂ ನಡೆಸಿರಲಿಲ್ಲ. ಈಗ ಎರಡನೇ ಹಂತದಲ್ಲಿ ಭಾರತ ನ್ಯಾಯ ಯಾತ್ರೆಯನ್ನು ರಾಹುಲ್‍ಗಾಂಧಿ ಕೈಗೊಂಡಿದ್ದಾರೆ. ದೇಶದ ಎಲ್ಲಾ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಅದಕ್ಕಾಗಿ ರಾಹುಲ್‍ಗಾಂಧಿ ಈ ದೇಶದ ಪ್ರಧಾನಿಯಾಗಬೇಕೆಂದು ಪ್ರತಿಪಾದಿಸಿದರು.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಇಂಡಿಯಾ ರಾಜಕೀಯ ಮೈತ್ರಿಕೂಟದಲ್ಲಿ ಪ್ರಧಾನಿ ಹುದ್ದೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದರು. ಅದರ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‍ನ ಪ್ರಧಾನಿ ಅಭ್ಯರ್ಥಿ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ರಾಹುಲ್‍ಗಾಂಧಿ ದೇಶದ ಪ್ರಧಾನಿಯಾಗಬೇಕೆಂದು ಹೇಳಿದ್ದಾರೆ.

ಜನಪರ ಕಾಳಜಿಯಿರುವ ರಾಹುಲ್‍ಗಾಂಧಿಯವರ ಕೈಗೆ ಅಧಿಕಾರ ಹೋಗಬೇಕು. ದೇಶದ ಸಂವಿಧಾನ ರಕ್ಷಣೆ, ಸಾರ್ವಭೌಮತ್ವ ಎತ್ತಿಹಿಡಿಯಲು ಸಂವಿಧಾನವನ್ನು ರಕ್ಷಿಸಲು ನಾವೆಲ್ಲ ಹೋರಾಟ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಪ್ರಧಾನಮಂತ್ರಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಸಬ್ ಕಾ ಸಾಥ್ ಎಂದರೆ ಏನು, ಅದರಂತೆ ನಡೆದುಕೊಳ್ಳುತ್ತಿದ್ದಾರೆಯೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುತ್ತಾರೆ. ಬಿಜೆಪಿಯವರ ಡೋಂಗಿತನವನ್ನು ಜನರ ಮುಂದೆ ಬಯಲು ಮಾಡುವುದು ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯ ಎಂದರು.

ಪಂಚಖಾತ್ರಿಗಳನ್ನು ಜಾರಿಗೆ ತಂದರೆ ಸರ್ಕಾರ ದಿವಾಳಿಯಾಗುತ್ತದೆ ಎಂದು 12 ವರ್ಷ ಮುಖ್ಯಮಂತ್ರಿಯಾಗಿ, 10 ವರ್ಷ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಹೇಳುತ್ತಿದ್ದರು. ನಾವು 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ. ಅದರ ಬಳಿಕವೂ ನಮ್ಮ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು. ಮೃದು ಹಿಂದುತ್ವದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇರಬೇಕು. ಜಾತ್ಯಾತೀತತೆ, ಸಂವಿಧಾನದ ಬಗ್ಗೆ ನಂಬಿಕೆ ಇರಬೇಕು. ಹಿಂದುತ್ವ ಎಂದರೆ ಹಿಂದುತ್ವವೇ. ಮೃದು ಹಿಂದುತ್ವ, ಕಠಿಣ ಹಿಂದುತ್ವ ಎಂಬುದಿಲ್ಲ. ಹಿಂದುತ್ವ ಬೇರೆ, ಹಿಂದು ಎಂಬುದೇ ಬೇರೆ. ನಾನು ಹಿಂದೂ ಎಂದು ಹೇಳಿದರು.

ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾದ ಹೆಬ್ಬಾರ್ ಮತ್ತು ಸೋಮಶೇಖರ್

ನಾವು ಶ್ರೀರಾಮನ ಪೂಜೆ ಮಾಡುತ್ತೇವೆ. ಅವರೊಬ್ಬರೇ ಪೂಜೆ ಮಾಡುವುದಿಲ್ಲ. ನಮ್ಮೂರಲ್ಲೆಲ್ಲಾ ರಾಮಮಂದಿರ ಕಟ್ಟಿಕೊಂಡಿದ್ದೇವೆ. ರಾಮನ ಭಜನೆ ಮಾಡುತ್ತೇವೆ. ಡಿಸೆಂಬರ್ ಕೊನೆ ವಾರದ ಧನುರ್ ಮಾಸದಲ್ಲಿ ಊರಿನಲ್ಲೆಲ್ಲಾ ರಾಮನ ಭಜನೆ ಮಾಡಿಕೊಂಡು ನಾವು ಓಡಾಡುತ್ತಿದ್ದೆವು ಎಂದು ಹೇಳಿದರು.ಆದರೆ ಎಲ್ಲರೂ ಮನುಷ್ಯರಾಗಿ ಸಮಾನವಾಗಿ ಬಾಳಬೇಕು. ಇದು ಕಾಂಗ್ರೆಸ್‍ನ ಸಿದ್ಧಾಂತ. ಇದಕ್ಕೆ ಬದ್ಧರಾಗಿದ್ದೇವೆ. ಇದರ ಆಧಾರದ ಮೇಲೆ ಮುನ್ನುಗ್ಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಕಾರಕ್ಕೆ ತಂದು ರಾಹುಲ್‍ಗಾಂಯವರನ್ನು ಪ್ರಧಾನಿಯನ್ನಾಗಿ ಮಾಡಲು ಪ್ರಯತ್ನಿಸೋಣ ಎಂದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಘ ಪರಿವಾರ ಅಥವಾ ಬಿಜೆಪಿಯ ಯಾರೊಬ್ಬರೂ ಬಲಿದಾನ ಮಾಡಿಲ್ಲ. 1925 ರಲ್ಲಿ ಆರ್‍ಎಸ್‍ಎಸ್ ರಚನೆಯಾಯಿತು. 1950 ರಲ್ಲಿ ಜನಸಂಘ ಸ್ಥಾಪನೆಗೊಂಡಿತು. 1980 ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬಂದಿದೆ. ಸ್ವತಂತ್ರ್ಯ ಪೂರ್ವದಲ್ಲೇ ರಚನೆಯಾಗಿದ್ದ ಆರ್‍ಎಸ್‍ಎಸ್‍ನ ಒಬ್ಬನೇ ಒಬ್ಬ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಬಲಿದಾನವಾಗಿದ್ದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ಕನ್ನಡ ಸಂಘಟನೆಗಳಿಗೆ ಗೃಹಸಚಿವ ಪರಮೇಶ್ವರ್ ಎಚ್ಚರಿಕೆ

ಕಾಂಗ್ರೆಸ್ ಅಕಾರಕ್ಕಾಗಿ ರಚನೆಯಾಗಿದ್ದಲ್ಲ. ಜನರ ಜೀವನ ಮಟ್ಟ ಸುಧಾರಣೆಯಾಗಿ ಅಸ್ತಿತ್ವಕ್ಕೆ ಬಂದಿತು. ಅದು ರಾಜಕೀಯ ಪಕ್ಷ ಅಲ್ಲ , ಒಂದು ಚಳವಳಿ ಮತ್ತು ಸಿದ್ಧಾಂತ. ಅದರಲ್ಲಿರುವುದೇ ನಮಗೆ ಹೆಮ್ಮೆ ಎಂದರು. ಇಂದಿನ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದವರು ರಾಜೀವ್‍ಗಾಂ. ಮೊದಲ ಪ್ರಧಾನಿ ನೆಹರು. ಆಧುನಿಕ ಭಾರತದ ಶಿಲ್ಪಿ. ಇಂದಿರಾಗಾಂ ಬಡವರ ಪರ ಕಾರ್ಯಕ್ರಮಗಳನ್ನು ರೂಪಿಸಿದರು. ವಾಜಪೇಯಿ ಅವಯಲ್ಲಿ 5 ವರ್ಷ, ಮೋದಿಯವರ ಕಾಲದಲ್ಲಿ 10 ವರ್ಷ ಆಡಳಿತ ನಡೆಸಿದ ಬಿಜೆಪಿಯವರ ಕೊಡುಗೆ ಏನು? ದೇಶದಲ್ಲಿ ಒಂದಾದರೂ ಅಣೆಕಟ್ಟೆ ನಿರ್ಮಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ಬಹುಸಂಸ್ಕøತಿಯಲ್ಲಿ ಏಕತೆಯನ್ನು ನಂಬಿಕೊಂಡಿರುವುದು ಕಾಂಗ್ರೆಸ್ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ಆರೋಗ್ಯ ಸಚಿವರಾದ ದಿನೇಶ್‍ಗುಂಡೂರಾವ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ರಾಣಿ ಸತೀಶ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

Latest News