Monday, May 6, 2024
Homeರಾಜ್ಯ'ಕನ್ನಡದ ಕಟ್ಟಾಳು' ಸಿದ್ದರಾಮಯ್ಯ ಕಾಲದಲ್ಲೇ ಜೈಲು ಸೇರಿದ ಕನ್ನಡ ಹೋರಾಟಗಾರರು

‘ಕನ್ನಡದ ಕಟ್ಟಾಳು’ ಸಿದ್ದರಾಮಯ್ಯ ಕಾಲದಲ್ಲೇ ಜೈಲು ಸೇರಿದ ಕನ್ನಡ ಹೋರಾಟಗಾರರು

ಬೆಂಗಳೂರು,ಡಿ.28- ಕನ್ನಡ ಭಾಷೆಯ ಅಸ್ಮಿತೆಯ ವಿಷಯ ಬಂದಾಗ ಇಡೀ ಸರ್ಕಾರವೇ ಬಂಡವಾಳಶಾಹಿಯ ಪಾದದ ಬುಡದಲ್ಲಿ ತಲೆಯಿಟ್ಟು ಮಲಗಿದಂತಹ ಅಸಹನೀಯ ಸ್ಥಿತಿ ಕಂಡುಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಅವರ ರಾಜಕೀಯ ಜೀವನದ ಪ್ರಬುದ್ಧಮಾನ ಆರಂಭಗೊಂಡಿದ್ದೇ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನದಿಂದ. ಈಗಲೂ ಸಿದ್ದರಾಮಯ್ಯ ಅವರ ಭಾಷಾಭಿಮಾನ ಬದ್ಧತೆ ಪ್ರಶ್ನಾತೀತ. ಆದರೆ ಕನ್ನಡ ಅನುಷ್ಠಾನದ ವಿಷಯ ಬಂದಾಗ ನೀನು ಒಡೆದಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ ಎಂಬ ಬೂಟಾಟಿಕೆ ಧೋರಣೆ ಸರ್ಕಾರದಲ್ಲಿ ಕಂಡುಬರುತ್ತಿದೆ.

ಬೆಂಗಳೂರನ್ನು ಅಘೋಷಿತವಾಗಿ ಸಿಲಿಕಾನ್ ಸಿಟಿ ಎಂದು ಬೆನ್ನು ತಟ್ಟಿಕೊಳ್ಳುವ ಸರ್ಕಾರದ ಪ್ರತಿನಿಗಳು ಕನ್ನಡದ ವಿಷಯ ಬಂದಾಗ ದೊಡ್ಡ ದೊಡ್ಡ ಮಾತುಗಳು ಹೇಳುತ್ತಾರೆಯೇ ಹೊರತು, ಅಕ್ಷರಶಃ ಪಾಲನೆಯಾಗುವುದಿಲ್ಲ. ಬೆಂಗಳೂರಷ್ಟೇ ಅಲ್ಲ, ರಾಜ್ಯದಲ್ಲಿ ಕನ್ನಡಿಗರು ಅನಾಥರು ಎಂಬ ವಾತಾವರಣ ನಿರ್ಮಾಣವಾಗಿದೆ. ಶಿವಾಜಿನಗರದ ಭಾಗದಲ್ಲಿ ಒಂದು ಭಾಷೆಯಾದರೆ, ಸಿಟಿ ಮಾರುಕಟ್ಟೆಯಲ್ಲಿ ಮತ್ತೊಂದು ಭಾಷೆ. ಚಿಕ್ಕಪೇಟೆಯಲ್ಲಿ ಇನ್ನೊಂದು ಭಾಷಾ ಹಾವಳಿ. ಪೂರ್ವ ಭಾಗದಲ್ಲಿ ನೆರೆ ರಾಜ್ಯದವರ ಅಪತ್ಯಗಳು ಮಿತಿಮೀರಿವೆ.

ಕನ್ನಡಿಗರು ಭಾಷಾ ಅಲ್ಪಸಂಖ್ಯಾತರಷ್ಟೇ ಅಲ್ಲ. ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳಲ್ಲೂ ವಂಚನೆಗೊಳಗಾಗುತ್ತಿದ್ದಾರೆ. ಸರ್ಕಾರದ ಗುತ್ತಿಗೆಯಲ್ಲಂತೂ ನೆರೆಯ ಆಂಧ್ರ ಪ್ರದೇಶದವರ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಆಗಿಲ್ಲ. ಅದರಲ್ಲೂ ಅನ್ಯ ಭಾಷಿಗ ಐಎಎಸ್ ಅಕಾರಿಗಳು ಸರ್ಕಾರದ ಸೇವೆ, ಗುತ್ತಿಗೆ ವಿಷಯ ಬಂದಾಗ ಕನ್ನಡಿಗರನ್ನು ನಿರ್ಲಕ್ಷ್ಯ ಧೋರಣೆಯಿಂದ ಕಾಣುತ್ತಿರುವುದು ಸ್ಪಷ್ಟವಾಗುತ್ತಿದೆ.

ಐಟಿ-ಬಿಟಿ ಹೆಚ್ಚಾದ ಕಾಲಘಟ್ಟದಲ್ಲೇ ಕನ್ನಡ ಎರಡನೇ ದರ್ಜೆ ಭಾಷೆಯಾಗಿ ಪರಿಗಣಿಸಲ್ಪಡುತ್ತಿತ್ತು. ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗುತ್ತಿದ್ದಂತೆ ಕನ್ನಡ ಎನ್ನಡ ಎಂಬಂತಾಗಿದೆ. ಅದರಲ್ಲೂ ಮಾಲ್‍ಗಳಲ್ಲಂತೂ ಕನ್ನಡ ಸಂಪೂರ್ಣ ಕಾಣೆಯಾಗಿ ಹೋಗಿದೆ.

ರೆಸ್ಟೊರೆಂಟ್, ಹೋಟೆಲ್‍ಗಳು, ಮಾಲ್‍ಗಳಲ್ಲಿ ಉತ್ತರ ಭಾರತೀಯರೇ ಹೆಚ್ಚು ಕಾಣಸಿಗುತ್ತಿದ್ದಾರೆ. ಕನ್ನಡಿಗರು ಮೈಬಗ್ಗಿಸಿ ಕೆಲಸ ಮಾಡುವುದಿಲ್ಲ. ಸ್ಥಳೀಯವಾಗಿ ರಾಜಕೀಯ ಮಾಡುತ್ತಾರೆಂಬ ಅಪವಾದವನ್ನು ಕನ್ನಡ ಉದ್ಯಮಿಗಳೇ ಮುಂದಿಡುವ ಮೂಲಕ ಕಡಿಮೆ ವೇತನಕ್ಕೆ ದೊರೆಯುವ ಅನ್ಯಭಾಷಿಗರನ್ನು ಕರೆತಂದು ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿದ್ದಾರೆ. ಕಳೆದ ಆಗಸ್ಟ್‍ನಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡರು ಕನ್ನಡಕ್ಕೆ ಅಪಾಯವಿದೆ. ಇದನ್ನು ಸರಿಪಡಿಸಲು ಡಿಸೆಂಬರ್‍ವರೆಗೂ ಕಾಲಾವಕಾಶ ನೀಡುತ್ತೇವೆ. ಅನಂತರವೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದರು.

4 ತಿಂಗಳು ಕಳೆದರೂ ಸರ್ಕಾರ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲೇ ಇಲ್ಲ. ಸೂಕ್ಷ್ಮಮತಿಯಾಗಿ ವರ್ತಿಸಲಿಲ್ಲ. ಕಳೆದ ವಾರದಿಂದ ಕರವೇಯ ಬಣ ಬೀದಿಗಿಳಿದು ಪ್ರತಿಭಟಿಸಲಾರಂಭಿಸಿತು. ಅಲ್ಲಲ್ಲಿ ಬಲಪ್ರಯೋಗಗಳಾಗಿರುವ ಘಟನೆಗಳೂ ವರದಿಯಾಗಿವೆ.

ಆಗಲೂ ಸರ್ಕಾರ ಕುಂಭಕರ್ಣ ನಿದ್ದೆಯಿಂದ ಬಿಟ್ಟೇಳಲಿಲ್ಲ. ಪ್ರತಿಭಟನೆ ವಿಪರೀತಗೊಳ್ಳುತ್ತಿದ್ದಂತೆ ಬಿಬಿಎಂಪಿ ಆಯುಕ್ತರು ಒಂದು ಸುತ್ತೋಲೆ ಹೊರಡಿಸಿ ಫೆ.28 ರೊಳಗೆ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆಯನ್ನು ಅನುಷ್ಠಾನಕ್ಕೆ ತರಬೇಕು. ಇಲ್ಲವಾದರೆ ಕ್ರಮ ಜರುಗಿಸುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಕಳೆದ ನಾಲ್ಕು ತಿಂಗಳಿನಿಂದಲೂ ಮೈಮರೆತಿದ್ದ ಸರ್ಕಾರ ಪ್ರತಿಭಟನೆ ಬೇರೆ ಸ್ವರೂಪಕ್ಕೆ ತಿರುಗುವವರೆಗೂ ಸುಮ್ಮನಿದ್ದಿದ್ದು ಏಕೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಕಾನೂನು ಕೈಗೆತ್ತಿಕೊಂಡರೆ ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ : ಡಿಸಿಎಂ

ನಾರಾಯಣಗೌಡರು ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸಿದ್ಧಾಂತಗಳನ್ನು ಬೆಂಬಲಿಸಿದ್ದರು. ಕೋಮುವಾದ ನಾಡಿಗೆ ಅಪಾಯಕಾರಿ ಎಂಬರ್ಥದಲ್ಲಿ ಹಲವು ಬಾರಿ ಮಾತನಾಡಿದ್ದರು. ಈಗ ಅದೇ ಕಾಂಗ್ರೆಸ್ ಸರ್ಕಾರ ನಾರಾಯಣಗೌಡರನ್ನು ಬಂಧಿಸಿ ಜೈಲಿಗಟ್ಟಿದೆ.

ಕನ್ನಡ ಹೋರಾಟಕ್ಕಾಗಿ ಕರವೇಯ ಕಾರ್ಯಕರ್ತರು ರಾಜ್ಯಾದ್ಯಂತ 1,500 ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕನ್ನಡ ಸಂಘಟನೆಗಳೇ ಇಲ್ಲದಿದ್ದರೆ, ನಾಡು-ನುಡಿ, ನೆಲ-ಜಲ, ಭಾಷೆ ಕೇಳುವವರೇ ಇಲ್ಲ ಹಾಗೂ ರಕ್ಷಿಸುವವರಿಲ್ಲ ಎಂಬಂತಾಗುವುದಂತೂ ಅಕ್ಷರಶಃ ಸತ್ಯ. ಕರವೇಯ ಪ್ರತಿಭಟನೆಗಳನ್ನು ಹಿಂಸಾತ್ಮಕ ಎಂದು ವಾದಿಸುತ್ತಾ ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಇದರಿಂದ ಬಂಡವಾಳ ಹೂಡಿಕೆಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಿರುವ ಸರ್ಕಾರ, ಕನ್ನಡದ ಅಸ್ಮಿತೆಯ ಬಗ್ಗೆ ಬೂಟಾಟಿಕೆಯ ಮಾತು ಗಳನ್ನಾಡುವುದನ್ನು ನಿಲ್ಲಿಸಬೇಕು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆಯೇ ಹೊರತು ಬೇರೆ ಪ್ರಯೋಜನಗಳಾಗುತ್ತಿರುವುದು ಕಂಡುಬರುತ್ತಿಲ್ಲ. ಕರವೇಯ ಪ್ರತಿಭಟನೆಗಳ ಬಗ್ಗೆ ಮುನ್ಸೂಚನೆ ನೀಡುವಲ್ಲಿ ರಾಜ್ಯದ ಗುಪ್ತಚರ ಇಲಾಖೆ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯಲ್ಲಿ ಎಡವಿದ್ದಲ್ಲದೆ, ಅಧಿಕಾರದ ದರ್ಪ ಮೆರೆದು ಹೋರಾಟಗಾರರನ್ನೇ ಜೈಲಿಗಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪದೇ ಪದೇ ಪಕ್ಷಕ್ಕೆಮುಜುಗರ, ಯತ್ನಾಳ್ ಅಮಾನತಿಗೆ ಸಿದ್ಧತೆ

ಪೊಲೀಸರಿಗೆ ತಿಳಿ ಹೇಳಬೇಕಾದ ಸರ್ಕಾರದ ಪ್ರತಿನಿಧಿಗಳು ನಾರಾಯಣಗೌಡರ ಬಂಧನವನ್ನು ಸಮರ್ಥಿಸಿಕೊಳ್ಳುತ್ತಿರುವುದು ಮತ್ತೊಂದು ಕನ್ನಡ ವಿರೋಧಿ ಧೋರಣೆಯಾಗಿದೆ.

RELATED ARTICLES

Latest News