Tuesday, December 3, 2024
Homeರಾಜ್ಯಸಿಎಂ ಜನತಾದರ್ಶನ ಮುಂದೂಡಿಕೆ

ಸಿಎಂ ಜನತಾದರ್ಶನ ಮುಂದೂಡಿಕೆ

ಬೆಂಗಳೂರು,ಅ.5- ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಜನತಾದರ್ಶನ ಮುಂದೂಡಿಕೆಯಾಗಿದೆ. ಅ.9 ರಂದು ಗೃಹಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 10.30ರಿಂದ ಜನತಾದರ್ಶನ ನಡೆಸಲು ನಿರ್ಧರಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು.

ಆದರೆ ಅದೇ ದಿನ ದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‍ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ಮುಖ್ಯಮಂತ್ರಿಯವರು ದೆಹಲಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನತಾದರ್ಶನವನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಮೊದಲ ಅವಯ ಮುಖ್ಯಮಂತ್ರಿಯಾಗಿದಾಗಲೇ ಸಿದ್ದರಾಮಯ್ಯ ಜನತಾದರ್ಶನಕ್ಕೆ ಒತ್ತು ನೀಡಿದ್ದರು. ಎರಡನೇ ಅವಯಲ್ಲಿ ಜಿಲ್ಲಾ ಹಾಗೂ ಇಲಾಖಾವಾರು ಜನತಾದರ್ಶನಗಳಿಗೆ ಸೂಚನೆ ನೀಡಿದ್ದರು. ಅದರಂತೆ ಕಳೆದ ತಿಂಗಳು 25 ರಿಂದ 2 ದಿನಗಳ ಕಾಲ ನಡೆದ ಜಿಲ್ಲಾ ಜನತಾದರ್ಶನದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿತ್ತು. ಅವುಗಳನ್ನು ಬಹುತೇಕ ಇತ್ಯರ್ಥಗೊಂಡಿದ್ದು, ಬಾಕಿ ಅರ್ಜಿಗಳನ್ನು ಇಲಾಖಾವಾರು ಪರಿಶೀಲನೆ ನಡೆಸಲಾಗುತ್ತಿದೆ.

ವಿಶ್ವವಿಖ್ಯಾತ ದಸರಾಕ್ಕೆ ಬರದ ಸಿದ್ಧತೆ, ವೇಳಾಪಟ್ಟಿ ಬಿಡುಗಡೆ

ಈ ಮೊದಲು ಮುಖ್ಯಮಂತ್ರಿಯವರ ನೇರ ಜನತಾದರ್ಶನದಲ್ಲಿ ಸಾವಿರಾರು ಅರ್ಜಿಗಳು ಬರುತ್ತಿದ್ದವು. ಸಿದ್ದರಾಮಯ್ಯನವರ ಬಳಿಕ ಈ ರೀತಿಯ ಜನತಾದರ್ಶನಗಳು ಸ್ಥಗಿತಗೊಂಡಿದ್ದವು. ಅದಕ್ಕೆ ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಜನತಾದರ್ಶನದ ದಿನಾಂಕವನ್ನು ಪ್ರಕಟಿಸುವುದಾಗಿ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

RELATED ARTICLES

Latest News