ಪಾವಗಡ, ಏ.3- ಖಾಸಗಿ ಬಸ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ಬೆಳಗ್ಗೆ ತಾಲೂಕಿನ ಕೋಟಗುಡ್ಡ ಗ್ರಾಮದಲ್ಲಿ ನಡೆದಿದ್ದು, ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ.
ಪಟ್ಟಣದ ಕಡೆಯಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಮಾಧವಿ ಖಾಸಗಿ ಬಸ್ ಹಾಗೂ ಚಳ್ಳಕೆರೆಯಿಂದ ಪಾವಗಡದ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕೊಟ್ಟಗುಟ್ಟ ಗ್ರಾಮದ ಎಸ್‍ಬಿಐ ಬ್ಯಾಂಕ್ ಬಳಿ ಎರಡು ಬಸ್‍ಗಳು ಒಮ್ಮೆಲೇ ಬಂದದ್ದರಿಂದ ನಿಯಂತ್ರಿಸಲಾಗದೇ ಡಿಕ್ಕಿಯಾಗಿದೆ.
ಎರಡು ಬಸ್‍ಗಳು ಮುಂಭಾಗದಲ್ಲಿರುವ ಗಾಜು ಪುಡಿಪುಡಿಯಾಗಿದ್ದು, ಕೆಎಸ್‍ಆರ್‍ಟಿಸಿ ಚಾಲಕನ ಸ್ಥತಿ ಗಂಭೀರವಾಗಿದ್ದು, ಅದೇ ಬಸ್‍ನಲ್ಲಿದ್ದ ಒಂದಷ್ಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆ್ಯಂಬುಲೆನ್ಸ್ ಗಾಗಿ ಪರದಾಟ:
ಅಪಘಾತ ಸಂಭವಿಸಿ ಸುಮಾರು 30 ನಿಮಿಷವಾದರೂ ಸ್ಥಳಕ್ಕೆ ಆ್ಯಂಬುಲೆನ್ಸ್ ಬಾರದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು. ಕೋಟಗುಡ್ಡ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಇಲ್ಲಿನ ಆ್ಯಂಬುಲೆನ್ಸ್ ಬೇರೊಂದು ಕಡೆಗೆ ತೆರಳಿದ ಇಂತಹ ತುರ್ತು ಪರಿಸ್ಥಿತಿಗಳಲ್ಲಿ ಆ್ಯಂಬುಲೆನ್ಸ್ ಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಮತ್ತಷ್ಟು ಆ್ಯಂಬುಲೆನ್ಸ್ ಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದರು.