ನಂಜನಗೂಡು,ಆ.7– ದಕ್ಷಿಣಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಾಲಯದ ಸುತ್ತಮುತ್ತ ಅನೈರ್ಮಲ್ಯ ಹೆಚ್ಚಾಗಿದ್ದು, ಕಪಿಲೆ ನದಿ ಮಲಿನವಾಗಿದ್ದಾಳೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕೂಡ ಪರಿಹರಿಸಲು ಮುಂದಾಗಿಲ್ಲ. ಹೀಗಾಗಿ ಒಂದಿಷ್ಟು ಮಂದಿ ಭಕ್ತಾದಿಗಳು ನೇರವಾಗಿ ನಂಜುಂಡಪ್ಪನಿಗೆ ದೂರು ನೀಡುವ ಮೂಲಕ ದೂರು ನೀಡಿದ್ದಾರೆ.
ಪ್ರತಿ ತಿಂಗಳಿಗೊಮೆ ದೇವಾಲಯದ ಹುಂಡಿ ಎಣಿಕೆ ನಡೆಯಲಿದ್ದು, ಅದರಂತೆ ನಿನ್ನೆ ಕೂಡ ಹುಂಡಿಯನ್ನು ಎಣಿಕೆ ಮಾಡುವ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಪತ್ರಗಳು ದೇವಸ್ಥಾನದ ಅವ್ಯವಸ್ಥೆ ಬಗ್ಗೆ ಬರೆದಿರುವುದು ಕಂಡುಬಂದಿದೆ. ಇಲ್ಲಿನ ಜನಪ್ರತಿನಿಽ ಗಳು ಹಾಗೂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಮೂಲ ಸೌಕರ್ಯಗಳನ್ನು ಭಕ್ತರಿಗೆ ನೀಡುವುದಲ್ಲದೆ ಕಪಿಲಾ ನದಿಯನ್ನು ಸ್ವಚ್ಚಗೊಳಿಸುವುದು ಮುಂತಾದ ಕಾರ್ಯಕ್ರಮಗಳತ್ತ ಗಮನ ಹರಿಸಲು ಭಕ್ತರ ಒತ್ತಾಸೆಯಾಗಿದೆ.
ಈ ಹಿಂದೆ ಮಾಜಿ ಸಚಿವ ಬೆಂಕಿ ಮಹದೇವಪ್ಪನವರು ಸುಮಾರು 10 ಕೋಟಿಗೂ ಹೆಚ್ಚು ಅನುದಾನದಿಂದ ದೇವಸ್ಥಾನದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದರು. ತದನಂತರ ದಿನಗಳಲ್ಲಿ ದೇವಸ್ಥಾನದ ಅಭಿವೃದ್ದಿ ಪಥದಲ್ಲಿ ಸಾಗಲೇ ಇಲ್ಲ.
ನನ್ನ ತಾತ, ನನ್ನ ತಂದೆ, ನಾನು, ಇವಾಗ ನನ್ನ ಮಗ ಎಲ್ಲರೂ ನಿನ್ನ ಭಕ್ತರೆ. ದೂರದ ಊರಿನಿಂದ ಪ್ರತಿ ಹುಣ್ಣಿಮೆ, ವಿಶೇಷ ದಿನಗಳಲ್ಲಿ ನಿನ್ನನ್ನು ಕಾಣಲು ಬರುತ್ತಿದ್ದೇವೆ, ತಂದೆ ನಿನ್ನ ದರುಶನದಿಂದ ನಮ ಕಷ್ಟವೆಲ್ಲ ದೂರಾಗಿದೆ, ನನ್ನ ಒಡೆಯ ಆದರೆ ಪ್ರತಿಭಾರಿ ನಿನ್ನ ನೋಡಲು ಬರುವಾಗ ತುಂಬಾನೇ ಕಷ್ಟವಾಗುವುದು.
ನಮ ಕುಟುಂಬದವರೆಲ್ಲಾ ಬಂದಾಗಲೆಲ್ಲ ರಾತ್ರಿ ಮಲುಗುವುದಕ್ಕೆ ಒಂದು ಚಿಕ್ಕ ಜಾಗವೂ ಇರುವುದಿಲ್ಲ, ಬೆಳಿಗ್ಗೆ ಸ್ನಾನಕ್ಕೆ ಕಪಿಲಾ ನದಿಗೆ ಹೋದರೆ ಎಲ್ಲಿ ನೋಡಿದರೂ ಕಸ ಕಸ ಕಸ, ಉರುಳುಸೇವೆ ಮಾಡಲು ವ್ಯವಸ್ಥೆ ಸರಿಯಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ.
ಈ ಎಲ್ಲಾ ಸಮಸ್ಯೆಗಳನ್ನು ರಾಜಕಾರಣಿಗಳಿಗೆ, ಅಽ ಕಾರಿಗಳಿಗೆ ಪತ್ರ ಬರೆದು ಬರೆದು ಸಾಕಾಗಿದೆ. ಕೊನೆಯದಾಗಿ ನಿನಗೆ ಪತ್ರ ಬರೆದು ನಮ ಕಷ್ಟಗಳನ್ನು ಪತ್ರದ ಮೂಲಕ ನಿವೇದನೆ ಮಾಡುತ್ತಿದ್ದೇವೆ. ನಮಂತೆಯೇ ಲಕ್ಷಾಂತರ ಭಕ್ತರ ಕೋರಿಕೆಯು ಕೂಡ ಇದೇ ಆಗಿರುತ್ತದೆ. ಇಂತಹ ಕೆಟ್ಟ ವ್ಯವಸ್ಥೆಗೆ ಪರಿಹಾರ ಕೊಡು ತಂದೆ ಎಂದು ನೊಂದ ಭಕ್ತರೊಬ್ಬರು ಪತ್ರ ಬರೆದು ಹುಂಡಿಗೆ ಹಾಕಿದ್ದಾರೆ.
ಮತ್ತೊಬ್ಬ ಅಭಿ ಎಂಬ ಭಕ್ತ ನನ್ನನ್ನು ಕಾಪಾಡು ಎಂದು ಬೇಡಲು ಬಹುದೂರದಿಂದ ನಿನ್ನ ಬಳಿಗೆ ಬಂದೆ ಆದರೆ ಇಲ್ಲಿರುವ ಅವ್ಯವಸ್ಥೆಯನ್ನು ನೋಡಿ ನಿನ್ನ ದೇವಾಲಯವನ್ನು ನೀನೇ ಕಾಪಾಡಿಕೋ ಎಂದು ಬೇಡಿ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ.
ಈ ಬಾರಿಯ ಹುಂಡಿ ಎಣಿಕೆಯಲ್ಲಿ ಒಟ್ಟು ಮೊತ್ತ 1 ಕೋಟಿ 12 ಲಕ್ಷದ 92 ಸಾವಿರದ 56 ರೂಪಾಯಿಗಳು ನಗದು, ಇದರಲ್ಲಿ ಚಿನ್ನ 51 ಗ್ರಾಂ 380 ಮಿಲಿ ಗ್ರಾಂ, ಬೆಳ್ಳಿ 1 ಕೆ.ಜಿ. 800 ಗ್ರಾಂ, 46 ವಿದೇಶಿ ಕರೆನ್ಸಿಗಳು ಲಭ್ಯವಾಗಿದೆ.