Sunday, September 15, 2024
Homeರಾಷ್ಟ್ರೀಯ | Nationalತೆಲಂಗಾಣದಿಂದ ಕಾಂಗ್ರೆಸ್‌‍ ನಾಯಕ ಅಭಿಷೇಕ್‌ ಸಿಂಘ್ವಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ತೆಲಂಗಾಣದಿಂದ ಕಾಂಗ್ರೆಸ್‌‍ ನಾಯಕ ಅಭಿಷೇಕ್‌ ಸಿಂಘ್ವಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

Congress' Abhishek Singhvi Elected Unopposed To Rajya Sabha From Telangana

ಹೈದರಾಬಾದ್‌, ಆ.28-ಕಾಂಗ್ರೆಸ್‌‍ ನಾಯಕ ಅಭಿಷೇಕ್‌ ಮನು ಸಿಂಘ್ವಿ ಅವರು ತೆಲಂಗಾಣದಿಂದ ರಾಜ್ಯಸಭೆಗೆ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತೆಲಂಗಾಣ ಪ್ರದೇಶ ಕಾಂಗ್ರೆಸ್‌‍ ಸಮಿತಿ (ಟಿಪಿಸಿಸಿ) ಹಿರಿಯ ಉಪಾಧ್ಯಕ್ಷ ಜಿ ನಿರಂಜನ್‌ ಅವರು ಚುನಾವಣಾಧಿಕಾರಿಯಿಂದ ಸಿಂಘ್ವಿ ಪರವಾಗಿ ಚುನಾವಣೆ ಪ್ರಮಾಣ ಪತ್ರ ಸ್ವೀಕರಿಸಿದರು.

ಸ್ವತಂತ್ರ ಅಭ್ಯರ್ಥಿಯೊಬ್ಬರು ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು, ಆದರೆ ಪರಿಶೀಲನೆಯ ಸಮಯದಲ್ಲಿ ಅದನ್ನು ತಿರಸ್ಕರಿಸಲಾಯಿತು ನಂತರ ಸಿಂಘ್ವಿ ಅವರು ಕಣದಲ್ಲಿದ್ದ ಏಕೈಕ ಅಭ್ಯರ್ಥಿಯಾಗಿದ್ದು, ಉಮೇದುವಾರಿಕೆಗಳನ್ನು ಹಿಂಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು ಹಾಗಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು.

ಸಿಂಘ್ವಿ ಅವರು ಆ.19 ರಂದು ಇಲ್ಲಿ ನಾಮಪತ್ರ ಸಲ್ಲಿಸಿ, ತೆಲಂಗಾಣದಲ್ಲಿ ರಾಜ್ಯಸಭಾ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಿರುವುದು ನನಗೆ ಗೌರವವಾಗಿದೆ ಎಂದು ಹಿರಿಯ ವಕೀಲರು ಹೇಳಿದ್ದಾರೆ.

ಕೆ ಕೇಶವ ರಾವ್‌ ಅವರು ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌‍) ತೊರೆದು ಕಾಂಗ್ರೆಸ್‌‍ಗೆ ಸೇರಿದಾಗ ಮೇಲನೆಗೆ ರಾಜೀನಾಮೆ ನೀಡಿದ ಕಾರಣ ರಾಜ್ಯಸಭಾ ಉಪಚುನಾವಣೆ ಅನಿವಾರ್ಯವಾಯಿತು.

ಈ ವರ್ಷದ ಆರಂಭದಲ್ಲಿ, ಕಾಂಗ್ರೆಸ್‌‍ ಆಡಳಿತವಿರುವ ಹಿಮಾಚಲ ಪ್ರದೇಶದಿಂದ ರಾಜ್ಯಸಭಾ ಚುನಾವಣೆಯಲ್ಲಿ ಸಿಂಘ್ವಿ ಸೋತಿದ್ದರು. ಬಿಜೆಪಿ ಅಭ್ಯರ್ಥಿ ಹರ್ಷ್‌ ಮಹಾಜನ್‌ ಫೆಬ್ರವರಿ 27 ರ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ತಲಾ 34 ಮತಗಳನ್ನು ಗಳಿಸಿದ ನಂತರ ಲಾಟ್‌ ಡ್ರಾ ಮೂಲಕ ಗೆಲುವು ಸಾಧಿಸಿದ್ದರು.

RELATED ARTICLES

Latest News