Thursday, May 9, 2024
Homeರಾಜ್ಯಮತ್ತೆರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

ಮತ್ತೆರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

ಬೆಂಗಳೂರು,ಮಾ.16- ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಮತ್ತೆರಡು ಹೊಸ ಗ್ಯಾರಂಟಿಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಘೋಷಣೆ ಮಾಡಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಖಾಸಗಿ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೇದಾರ್ ನ್ಯಾಯ್ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದರು.

ಈಗಾಗಲೇ ಯುವ, ಮಹಿಳೆಯರು, ಕೃಷಿಕರ ಹೆಸರಿನಲ್ಲಿ ಮೂರು ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಇಂದು ಹೆಚ್ಚುವರಿಯಾಗಿ ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೇದಾರ್ ನ್ಯಾಯ್ ಘೋಷಣೆಗಳನ್ನು ಹೊಸದಾಗಿ ಪ್ರಕಟಿಸಿದರು.ಕಳೆದ ಹತ್ತು ವರ್ಷಗಳಿಂದಲೂ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ದಿಕ್ಕು ತಪ್ಪಿಸಿ ಶ್ರಮಿಕರಿಗೆ ಅನ್ಯಾಯ ಮಾಡಿದೆ. ಈ ಹಿಂದೆ ನಮ್ಮ ಸರ್ಕಾರ ಹಲವು ಯೋಜನೆಗಳ ಮೂಲಕ ಕಾರ್ಮಿಕರಿಗೆ, ಶ್ರಮಿಕರಿಗೆ ಸಹಾಯ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದುರ್ಬಲರ ಬಗ್ಗೆ ಆಸಕ್ತಿ ಇಲ್ಲ. ಶ್ರೀಮಂತರ ಮೇಲಷ್ಟೇ ಅವರ ಗಮನ. ಹೀಗಾಗಿ ಹಲವು ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿದ್ದಾರೆ ಎಂದು ಹೇಳಿದರು.

ದೇಶಾದ್ಯಂತ ಕಾಂಗ್ರೆಸ್ ಪಕ್ಷ ಹಲವು ಕಡೆ ಪ್ರವಾಸ ಮಾಡಿ, ಕಾರ್ಮಿಕ ಸಂಘಟನೆಗಳ ಜೊತೆ ಚರ್ಚೆ ನಡೆಸಿದ ಬಳಿಕ ಕಾರ್ಮಿಕರ ಹಿತರಕ್ಷಣೆಗೆ ಶ್ರಮಿಕ್ ನ್ಯಾಯ್ ಭರವಸೆಯನ್ನು ಘೋಷಿಸುತ್ತಿದ್ದೇವೆ. ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಕನಿಷ್ಠ ವೇತನ, ಸಾಮಾಜಿಕ ನ್ಯಾಯ, ಭವಿಷ್ಯ ನಿ, ಆರೋಗ್ಯ ಮತ್ತು ಜೀವವಿಮೆಯಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ಉದ್ಯೋಗ ಖಾತ್ರಿ ಯೋಜನೆಯನ್ನು ಈ ಮೊದಲು ಮೋದಿ ಟೀಕಿಸಿದ್ದರು. ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ಬರಪೀಡಿತ ಪ್ರದೇಶಗಳಲ್ಲಿ 150 ಉದ್ಯೋಗಗಳನ್ನು ಜಾರಿ ಮಾಡುತ್ತಿಲ್ಲ. ನಮ್ಮ ಸರ್ಕಾರ ಅಕಾರಕ್ಕೆ ಬಂದರೆ ನರೇಗಾ ಯೋಜನೆ ದಿನಗೂಲಿಯನ್ನು 400 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದರು.ಭವಿಷ್ಯ ನಿ ಬಡ್ಡಿದರವನ್ನು ನಾನು ಕಾರ್ಮಿಕ ಸಚಿವನಾಗಿದ್ದಾಗ ಶೇ.9.5 ರಷ್ಟು ನೀಡಲಾಗಿತ್ತು. ಆನಂತರ 10 ವರ್ಷದಲ್ಲಿ ಶೇ.9 ರ ಮೇಲೆ ಭವಿಷ್ಯ ನಿಗೆ ಬಡ್ಡಿಯನ್ನೇ ನೀಡಿಲ್ಲ ಎಂದು ಹೇಳಿದರು.

ಹಿಸ್ಸೇದಾರ್ ನ್ಯಾಯ್ ಭರವಸೆ ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವ ಮಹತ್ವದ ಉಪಕ್ರಮವಾಗಿದೆ. ಮೋದಿ ಅವರ ಆಡಳಿತಾವಯಲ್ಲಿ ಬಡವರು ಹೆಚ್ಚು ಬಡವರಾಗುತ್ತಿದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಸಂಪತ್ತಿನ ಸಮಾನ ಹಂಚಿಕೆಯಾಗಿಲ್ಲ, ಇದಕ್ಕಾಗಿ ಜಾತಿ ಜನಗಣತಿ ಆಗಬೇಕು. ಜಾತಿ, ಸಮುದಾಯ ಎಷ್ಟು ಸೌಲಭ್ಯ ಪಡೆದಿದೆ, ಅಭಿವೃದ್ಧಿಯಾಗಿದೆ ಎಂಬುದನ್ನು ಗುರುತಿಸಿ ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕು ಎಂದರು.

ರಾಜ್ಯದಲ್ಲಿ ನಡೆದಿರುವ ಜಾತಿ ಜನಗಣತಿಗೆ ಸ್ವಪಕ್ಷೀಯರು ವಿರೋಧ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷ ತನ್ನ ನಿರ್ಧಾರವನ್ನು ಹೇಳಿಯಾಗಿದೆ. ಅದನ್ನು ಸಿದ್ದರಾಮಯ್ಯ ಆಗಲಿ, ಡಿ.ಕೆ.ಶಿವಕುಮಾರ್ ಆಗಲೀ ಯಾರೇ ಆಗಲಿ ಅನುಸರಿಸಲೇಬೇಕು ಎಂದು ಕಟ್ಟಾದೇಶ ಹೊರಡಿಸಿದರು.

1951 ರಲ್ಲಿ ನೆಹರೂ ನೇತೃತ್ವದಲ್ಲಿ ಚುನಾವಣೆ ನಡೆಸಿದಾಗ ಬೆಂಗಳೂರಿನಲ್ಲೇ ಪ್ರಣಾಳಿಕೆಗೆ ಅಂತಿಮ ರೂಪ ನೀಡಲಾಯಿತು. ಈ ಊರು ನಮಗೆ ಅದೃಷ್ಟ ತರುತ್ತದೆ ಎಂದರು. 5 ಪ್ರಮುಖ ಆಶ್ವಾಸನೆಗಳಲ್ಲಿ ಒಟ್ಟು 25 ಭರವಸೆಗಳನ್ನು ಕಾಂಗ್ರೆಸ್ ಜನರ ಮುಂದಿಡುತ್ತಿದೆ. ಸರ್ಕಾರಿ ನೇಮಕಾತಿಗಳಿಗೆ ಒತ್ತು ನೀಡುವುದು, ಅರಕ್ಷಣಾ ಭರವಸೆಯಡಿ ಮೀಸಲಾತಿ ಮಿತಿಯನ್ನು ಶೇ.50 ಕ್ಕಿಂತಲೂ ಹೆಚ್ಚು ವಿಸ್ತರಿಸುವುದು, ರೈತರಿಗೆ ಸುಭದ್ರ ಆದಾಯದ ಭರವಸೆ, ಆದಿವಾಸಿಗಳಿಗೆ ಮರ ಕಡಿಯುವ ಅಕಾರ, ಶ್ರಮಿಕ್ ಸನ್ಮಾನ್ ಯೋಜನೆಯಡಿ ನರೇಗಾ ಯೋಜನೆಯ ಕೂಲಿ ಹೆಚ್ಚಳ, ನಗರ ಪ್ರದೇಶದವರ ಉದ್ಯೋಗ ಖಾತ್ರಿಗೆ ಶೆಹರಿ ರೋಜ್‍ಗಾರ್ ಯೋಜನೆ, ಸಾಮಾಜಿಕ ಸುರಕ್ಷಾ ಯೋಜನೆ ನಮ್ಮ ಭರವಸೆಗಳಾಗಿವೆ ಎಂದು ಹೇಳಿದರು.

ನಾವು ಕೊಟ್ಟ ಭರವಸೆಗಳನ್ನು ತಪ್ಪದೇ ಈಡೇರಿಸಿದ್ದೇವೆ. ಅದಕ್ಕೆ ಈಗಾಗಲೇ ಹಲವು ರಾಜ್ಯಗಳ ಚುನಾವಣೆಯಲ್ಲಿ ನೀಡಿದ ಭರವಸೆ ಮತ್ತು ಅನುಷ್ಠಾನಕ್ಕೆ ತಂದ ಮಾದರಿಗಳೇ ಸಾಕ್ಷಿ ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೇ. 75 ಕ್ಕಿಂತಲೂ ಹೆಚ್ಚಿನ ಸುಳ್ಳು ಹೇಳುತ್ತಾರೆ. ಆದರೆ ಮಾಧ್ಯಮದವರು ಅವರನ್ನೇ ಬೆಂಬಲಿಸುತ್ತಾರೆ. ಇದಕ್ಕೆ ಮಾಧ್ಯಮ ಸಂಸ್ಥೆಯ ಮಾಲೀಕತ್ವದ ನಿಲುವುಗಳು ಕಾರಣವಾಗಿರಬಹುದು ಎಂದು ಹೇಳಿದರು.

ಪ್ರಧಾನಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ., ರೈತರ ಆದಾಯ ತ್ರಿಗುಣ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದರು. ಯಾವುದೂ ಈಡೇರಿಲ್ಲ.ಗುಜರಾತ್‍ನಲ್ಲಿ ಬುಲೆಟ್ ಟ್ರೈನ್ ಕಾಣುತ್ತಿಲ್ಲ, ಕರ್ನಾಟಕಕ್ಕೆ ನಾನು ರೈಲ್ವೆ ಸಚಿವನಾಗಿ 9 ತಿಂಗಳು ಕೆಲಸ ಮಾಡಿದಾಗ 21 ಹೊಸ ರೈಲುಗಳನ್ನು ನೀಡಿದ್ದೆ. 10 ವರ್ಷದಲ್ಲಿ 1 ಹೊಸ ರೈಲು ಬಂದಿಲ್ಲ. ಬಣ್ಣ ಬಳಿದು, ಹೆಸರು ಬದಲಾಯಿಸಿ, ವಂದೇ ಭಾರತ್ ಎಂದು ಹೇಳುವ ಮೂಲಕ ಮೋದಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು ನನ್ನ ಕ್ಷೇತ್ರ ಕಲಬುರಗಿಗೆ ಪ್ರಧಾನಿ ಬರುತ್ತಿದ್ದಾರೆ. ಬರಲಿ, ಸಂತೋಷ. ಆದರೆ ಅವರ ಕೊಡುಗೇ ಏನೆಂದು ತಿಳಿಸಲಿ, ಏಮ್ಸ್ ಆಸ್ಪತ್ರೆ ಮಂಜೂರು ಮಾಡುವಂತೆ ನಾನು ಮನವಿ ಮಾಡಿದ್ದೆ. ಸಿದ್ದರಾಮಯ್ಯ ಜಮೀನು ನೀಡುತ್ತಿಲ್ಲ ಎಂದು ಸುಳ್ಳು ಹೇಳಿದರು. ಸಿದ್ದರಾಮಯ್ಯ ಅಕಾರಕ್ಕೆ ಬರುವ ಮುನ್ನವೇ ಕಲಬುರಗಿಯಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 4 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೆ ಜಾಗವೂ ಇತ್ತು. ಆದರೆ ಮೋದಿ ಏಮ್ಸ್ ಮಂಜೂರು ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.ರಾಜ್ಯಗಳಿಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲಿನಲ್ಲಿಯೂ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

RELATED ARTICLES

Latest News