ಬೆಂಗಳೂರು,ಆ.28– ಡಿವೈಎಸ್ಪಿ ಗಣಪತಿ ಆತಹತ್ಯೆ ಪ್ರಕರಣದಲ್ಲಿ ಜೆಡಿಎಸ್-ಬಿಜೆಪಿ ಪಕ್ಷಗಳಿಗೆ ತಮ್ಮ ತಪ್ಪಿನ ಅರಿವಾಗಿದ್ದರೆ ಸಚಿವ ಕೆ.ಜೆ.ಜಾರ್ಜ್ ಅವರ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಗಣಪತಿ ಅವರ ಆತಹತ್ಯೆ ಪ್ರಕರಣ ಮರುತನಿಖೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಹೂಡಿದ್ದ ದಾವೆ ವಜಾ ಆಗಿರುವ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ಸಚಿವ ಕೆ.ಜೆ.ಜಾರ್ಜ್ ಅವರ ವ್ಯಕ್ತಿತ್ವಕ್ಕೆ ಮತ್ತು ನಾಯಕತ್ವಕ್ಕೆ ಮಸಿ ಬಳೆಯಲು ಪ್ರಯತ್ನಿಸಿದ ಬಿಜೆಪಿ-ಜೆಡಿಎಸ್ ಪಕ್ಷಗಳು ಕೆ.ಜೆ.ಜಾರ್ಜ್ ಅವರ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಇನ್ನೊಬ್ಬರ ಚಾರಿತ್ರ್ಯವಧೆ ಮಾಡುವ ಕಾರ್ಯ ಒಳ್ಳೆಯ ಸಂಪ್ರದಾಯವಲ್ಲ. ಕರ್ನಾಟಕದಲ್ಲಿ ಸಭ್ಯ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಸುಳ್ಳು ಕೇಸುಗಳನ್ನು ಸೃಷ್ಟಿಸಿದ ಖ್ಯಾತಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಸಲ್ಲುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ಎಂದು ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರನ್ನು ಡಿವೈಎಸ್ಪಿ ಗಣಪತಿ ಆತಹತ್ಯೆ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ವೈಯಕ್ತಿಕ ಕಾರಣಕ್ಕೆ ಆತಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರವರನ್ನು ಸಿಲುಕಿಸಲು ಅನೇಕ ತಂತ್ರಗಳನ್ನು ಹೆಣೆದ ವಿರೋಧ ಪಕ್ಷಗಳು, ಗಣಪತಿ ಅವರ ಪತ್ನಿ ಹೆಸರಿನಲ್ಲಿ ಪ್ರಕರಣದ ಮರುತನಿಖೆ ಕೋರಿ ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿದ್ದರು.
ಪ್ರಕರಣದ ಮರುತನಿಖೆಗೆ ಆಧಾರ ಇಲ್ಲದ ಕಾರಣ ಸುಪ್ರೀಂಕೋರ್ಟ್ ಆ ಪ್ರಕರಣವನ್ನು ವಜಾಗೊಳಿಸಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್ ಚಿಟ್ ಅನ್ನು ಎತ್ತಿ ಹಿಡಿದಿದೆ ಎಂದು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದೆ ಕೆ.ಜೆ.ಜಾರ್ಜ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಹಲವಾರು ಸಂದರ್ಭಗಳಲ್ಲಿ ಅವರ ಮೇಲೆ ಸುಳ್ಳು ಆರೋಪ ಮಾಡಿಕೊಂಡು ಬಂದಿದೆ. ತಮ ಮೇಲಿನ ಆರೋಪ ಸುಳ್ಳು ಎಂದು ದಾಖಲೆ ಸಮೇತ ಕೆ.ಜೆ.ಜಾರ್ಜ್ ಉತ್ತರ ನೀಡಿದರೂ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒತ್ತಾಯಪೂರ್ವಕಾಗಿ ಪಾರದರ್ಶಕ ತನಿಖೆಯ ಹೆಸರಿನಲ್ಲಿ ಅವರ ರಾಜೀನಾಮೆ ಕೊಡಿಸಿದ್ದರು ಎಂದು ದೂರಿದ್ದಾರೆ.
ತದನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ದಿವಂಗತ ಗಣಪತಿ ಅವರ ಮನೆಗೆ ಹೋಗಿ ಒತ್ತಾಯಪೂರ್ವಕವಾಗಿ ಅವರ ಹೆಂಡತಿಯ ಮೂಲಕ ಪ್ರಕರಣದ ಮರುತನಿಖೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿಸಿದ್ದರು. ಕೆಲವು ಸಂದರ್ಭಗಳಲ್ಲಿ ಕುಮಾರಸ್ವಾಮಿ ಅವರು ಮಾತಿನಂತೆ ಪ್ರಕರಣ ನಡೆಸಲು ತಮಗೆ ಸಹಾಯ ಮಾಡಲಿಲ್ಲವೆಂದು ಡಿವೈಎಸ್ಪಿ ಗಣಪತಿ ಅವರ ಹೆಂಡತಿ ಹೇಳಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿದೆ ಎಂದು ತಿಳಿಸಿದ್ದಾರೆ.
ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಚಿವ ಜಾರ್ಜ್ ಅವರ ಮೇಲೆ ಕೊಲೆ ಆರೋಪ ಹೊರಿಸಿ ಸದನದ ಒಳಗೆ ಮತ್ತು ಹೊರಗೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ರಾಜೀನಾಮೆ ನೀಡುವಂತೆ ಮಾಡಿದ್ದರು. ತನಿಖೆಯ ಮುಖಾಂತರ ಆರೋಪ ಮುಕ್ತಾರಾದ ಕೆ.ಜೆ.ಜಾರ್ಜ್ ಸಿದ್ದರಾಮಯ್ಯ ನವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಸೇರ್ಪಡೆಗೊಂಡಿದ್ದರು ಎಂದು ಸರಿಸಿದರು.