Friday, May 3, 2024
Homeರಾಷ್ಟ್ರೀಯಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ಮಹಿಳಾ ಮೀಸಲಾತಿ ಲೋಪದ ವಿರುದ್ಧ ಕಾಂಗ್ರೆಸ್‍ನಿಂದ ಸರಣಿ ಪತ್ರಿಕಾಗೋಷ್ಠಿ

ನವದೆಹಲಿ, ಸೆ 25 (ಪಿಟಿಐ)- ಮಹಿಳಾ ಮೀಸಲಾತಿ ಹೆಸರಿನಲ್ಲಿ ಮೋದಿ ಸರ್ಕಾರ ವಿಶ್ವಾಸಘಾತುಕತನ ತೋರುತ್ತಿದೆ ಎಂಬ ಬಗ್ಗೆ ಜನರ ಗಮನ ಸೆಳೆಯಲು ಕಾಂಗ್ರೆಸ್ ಇಂದಿನಿಂದ ದೇಶದ 21 ನಗರಗಳಲ್ಲಿ 21 ಮಹಿಳಾ ನಾಯಕರು ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದೆ.

ಇಂದಿನಿಂದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಇದರಲ್ಲಿ 21 ಮಹಿಳಾ ನಾಯಕರು ಮಹಿಳಾ ಮೀಸಲಾತಿ ವಿಷಯದ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಿದ್ದಾರೆ. ಸಂಸದೆ ರಜನಿ ಪಾಟೀಲ್ ಅಹಮದಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿದರೆ, ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಹೈದರಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕೆನಡಾ ಬಿಟ್ಟು ಬೇರೆ ದೇಶಗಳತ್ತ ಮುಖಮಾಡಿದ ಭಾರತೀಯ ವಿದ್ಯಾರ್ಥಿಗಳು

ಭುವನೇಶ್ವರದಲ್ಲಿ ರಂಜೀತ್ ರಂಜನ್, ಜೈಪುರದಲ್ಲಿ ಅಲ್ಕಾ ಲಂಬಾ, ಮುಂಬೈನಲ್ಲಿ ಅಮೀ ಯಾಗ್ನಿಕ್ , ರಾಂಚಿಯಲ್ಲಿ ರಾಗಿಣಿ ನಾಯಕ್ ಮತ್ತು ಶ್ರೀನಗರದಲ್ಲಿ ಶಾಮಾ ಮೊಹಮದ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

ಕಾಂಗ್ರೆಸ್‍ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು 21 ನಗರಗಳಲ್ಲಿ 21 ಮಹಿಳಾ ನಾಯಕರಿಂದ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

RELATED ARTICLES

Latest News