ನೆವಾಡ (ಬಿಹಾರ),ಏ.7- ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ತುಷ್ಟೀಕರಣ ರಾಜಕೀಯ ನೀತಿ'ಯಾಗಿದೆ ಎಂದು ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ನೆವಾಡ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಟಿಕಲ್ 370 ರ ರದ್ದತಿಯನ್ನು ಪ್ರಸ್ತಾಪಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರು ಸಣ್ಣ ಹುದ್ದೆ ಹೊಂದಿಲ್ಲ.
ರಾಜಸ್ಥಾನಕ್ಕೂ 370 ನೇ ವಿಧಿಗೂ ಏನು ಸಂಬಂಧ ಎಂದು ಅವರು ಹೇಳುತ್ತಾರೆ. ಇದು
ತುಕ್ಡೆ ತುಕ್ಡೆ ಗ್ಯಾಂಗ್’ ನ ಮನಃಸ್ಥಿತಿ. ಅವರ ನಿಲುವುಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿಗಳೊಂದಿಗೆ ಹೋರಾಡುತ್ತ ಪ್ರಾಣಾರ್ಪಣೆ ಮಾಡಿದ ರಾಜಸ್ಥಾನದ ಮತ್ತು ಬಿಹಾರದ ಭದ್ರತಾ ಸಿಬ್ಬಂದಿಗೆ ಮಾಡಿದ ಅಪಮಾನ ಎಂದು ಪ್ರಧಾನಿ ಟೀಕಿಸಿದ್ದಾರೆ.
ಕಾಂಗ್ರೆಸ್, ಅವರ ಬಿಹಾರದ ಮಿತ್ರಪಕ್ಷ ಆರ್‍ಜೆಡಿ ಮತ್ತು ಇಂಡಿಯಾ ಒಕ್ಕೂಟದ ಪಕ್ಷಗಳು ಸಂವಿಧಾನದ ಬಗ್ಗೆ ಅಗಾಧವಾಗಿ ಮಾತನಾಡುತ್ತಾರೆ. ಆದರೆ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಏಕೆ ಜಾರಿಗೊಳಿಸಲಿಲ್ಲ? ಇದು ಮೋದಿಯಿಂದ ಮಾತ್ರ ಸಾಧ್ಯವಾಯಿತು ಎಂದು ಅವರು ಪ್ರತಿಪಾದಿಸಿದರು.