Friday, May 24, 2024
Homeರಾಜ್ಯನಾಮಪತ್ರ ವಾಪಸ್‍ಗೆ ನಾಳೆ ಕಡೆ ದಿನ

ನಾಮಪತ್ರ ವಾಪಸ್‍ಗೆ ನಾಳೆ ಕಡೆ ದಿನ

ಬೆಂಗಳೂರು,ಏ.7- ಬಾಕಿ ಉಳಿದಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ನಾಮಪತ್ರ ಪರಿಶೀಲನೆ ನಿನ್ನೆ ಪೂರ್ಣಗೊಂಡಿದ್ದು, 14 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 74 ನಾಮಪತ್ರಗಳು ತಿರಸ್ಕøತಗೊಂಡಿವೆ.
ನಾಮಪತ್ರ ವಾಪಸ್ ಪಡೆಯಲು ನಾಳೆ ಕಡೆಯ ದಿನವಾಗಿದ್ದು, ಚುನಾವಣೆಯ ಅಂತಿಮ ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ ನಾಳೆ ಸಂಜೆ ವೇಳೆಗೆ ಪ್ರಕಟವಾಗಲಿದೆ.

14 ಲೋಕಸಭಾ ಕ್ಷೇತ್ರಗಳಲ್ಲಿ 300 ಅಭ್ಯರ್ಥಿಗಳ 419 ನಾಮಪತ್ರಗಳು ಮಾನ್ಯವಾಗಿದ್ದು, 74 ತಿರಸ್ಕøತಗೊಂಡಿವೆ. ಬಾಕಿ ಉಳಿದಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 32 ಅಭ್ಯರ್ಥಿಗಳ 40 ನಾಮಪತ್ರಗಳ ಪೈಕಿ 4 ನಾಮಪತ್ರಗಳು ತಿರಸ್ಕøತಗೊಂಡಿವೆ. 36 ನಾಮಪತ್ರಗಳು ಪುರಸ್ಕøತವಾಗಿದ್ದು, 28 ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯವಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಯುಗಾದಿ ಹಬ್ಬದ ಜೊತೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯ ಅಖಾಡ ರಂಗೇರಲಿದೆ. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರವನ್ನು ಆರಂಭಿಸಿವೆ. ರೋಡ್ ಶೋ, ಬಹಿರಂಗ ಸಮಾವೇಶದ ಮೂಲಕ ಪ್ರಚಾರ ಕೈಗೊಂಡು ತಮ್ಮತಮ್ಮ ಆಡಳಿತಾವಯಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದಾರೆ.

ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಎನ್‍ಡಿಎ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದರೆ, ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ನಾಳೆಯ ನಂತರ ಲೋಕಸಭಾ ಚುನಾವಣೆ ಅಖಾಡ ಕಾವೇರಲಿದೆ.

RELATED ARTICLES

Latest News