Tuesday, May 7, 2024
Homeರಾಷ್ಟ್ರೀಯ8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ

8 ರಾಜ್ಯಗಳಿಗೆ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ

ನವದೆಹಲಿ, ಜ.7- ಮುಂದಿನ ಲೋಕಸಭೆ ಮಹಾಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಛತ್ತೀಸ್‍ಗಢ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ 8 ರಾಜ್ಯಗಳಿಗೆ ಚುನಾವಣಾ ಸಮಿತಿಗಳನ್ನು ರಚಿಸಿದೆ. ಇದರ ಜೊತೆಗೆ ಮಧ್ಯಪ್ರದೇಶಕ್ಕೆ ರಾಜಕೀಯ ವ್ಯವಹಾರಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಪಕ್ಷದ ಅಧಿಕೃತ ಘೋಷಣಾ ಪಟ್ಟಿಯಲ್ಲಿ ತಿಳಿಸಲಾಗಿದೆ.ರಾಜಸ್ಥಾನ, ಕೇರಳ, ತೆಲಂಗಾಣ, ಛತ್ತೀಸ್‍ಗಢ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ತ್ರಿಪುರಾ, ಪ್ರದೇಶ ಚುನಾವಣಾ ಸಮಿತಿಗಳು ಮತ್ತು ಮಧ್ಯಪ್ರದೇಶದ ಪ್ರದೇಶ ಚುನಾವಣಾ ಸಮಿತಿ ಮತ್ತು ರಾಜಕೀಯ ವ್ಯವಹಾರಗಳ ಸಮಿತಿಯ ಸಂವಿಧಾನದ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ತಕ್ಷಣದಿಂದ ಜಾರಿಗೆ ಬರುವಂತೆ ಹೇಳಿದ್ದಾರೆ.

ರಾಜಸ್ಥಾನ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಅವರನ್ನು ರಾಜ್ಯದಲ್ಲಿ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್,ಮಹೇಂದ್ರಜೀತ್ ಸಿಂಗ್ ಮಾಳವೀಯ, ಮೋಹನ್ ಪ್ರಕಾಶ್, ಸಿಪಿ ಜೋಶಿ, ಹರೀಶ್ ಚೌಧರಿ, ರಾಮಲಾಲ್ ಜಾಟ್, ಪ್ರಮೋದ್ ಜೈನ್ ಭಯ, ಪ್ರತಾಪ್ ಸಿಂಗ್ ಖಚರಿಯಾವಾಸ್, ಮಮತಾ ಭೂಪೇಶ್, ಭಜನ್ ಲಾಲ್ ಜಾತವ್, ಮುರಾರಿ ಲಾಲ್ ಮೀನಾ, ಅಶೋಕ್ ಚಂದನಾ, ನೀರಜ್ ಡಾಂಗಿ, ಜುಬೇರ್ ಖಾನ್, „ೀರಜ್ ಶರ್ಜಾರ್, ರೋಹಿತ್ ಬೋಹ್ರಾ, ಇಂದ್ರ ಮೀನಾ, ಡುಂಗರ್ ರಾಮ್ ಗೆದರ್, ಶಿಮ್ಲಾ ದೇವಿ ನಾಯಕ್ ಮತ್ತು ಲಲಿತ್ ಯಾದವ್‍ನ ಸದಸ್ಯರಾ ಗಿದ್ದಾರೆ.ಅವರಲ್ಲದೆ, ಯುವ ಕಾಂಗ್ರೆಸ್ ಅಧ್ಯಕ್ಷರು, ಎನ್‍ಎಸ್‍ಯುಐ ಅಧ್ಯಕ್ಷರು, ಸೇವಾದಳದ ಮುಖ್ಯ ಸಂಘಟಕರು ಮತ್ತು ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸಮಿತಿಯ ಸದಸ್ಯರಾಗಿದ್ದಾರೆ.
ಕೆ ಸುಧಾಕರ್ ಅವರನ್ನು ಕೇರಳ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಮುಸಲ್ಮಾನ ಗೂಂಡಾಗಳಿಂದ ನೈತಿಕ ಪೋಲೀಸ್‍ಗಿರಿ : ಈಶ್ವರಪ್ಪ ಆಕ್ರೋಶ

ಸಮಿತಿಯಲ್ಲಿ ಎ ಕೆ ಆಂಟನಿ, ಕೆ ಸಿ ವೇಣುಗೋಪಾಲ್, ರಮೇಶ್ ಚೆನ್ನಿತ್ತಲ, ವಯಲಾರ್ ರವಿ, ವಿ ಡಿ ಸತೀಶನ್, ಕೆ ಸುರೇಶ್, ಶಶಿ ತರೂರ್, ಮತ್ತು ಮುಲ್ಲಪಲ್ಲಿ ರಾಮಚಂದ್ರನ್ ಸೇರಿದಂತೆ ಹಿರಿಯ ನಾಯಕರು ಇದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ನೇತೃತ್ವದ ರಾಜ್ಯ ಪ್ರದೇಶ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಘೋಷಿಸಲಾಯಿತು.

ಸಮಿತಿಯಲ್ಲಿ ಉಪಮುಖ್ಯಮಂತ್ರಿ ಭಟ್ಟಿವಿಕ್ರಮಾರ್ಕ ಮಲ್ಲು ಸದಸ್ಯರಾಗಿ, ಉತ್ತಮ್ ಕುಮಾರ್ ರೆಡ್ಡಿ ಮತ್ತು ವಿ ಹನುಮಂತ ರಾವ್ ಇದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪಿಸಿಸಿ ಮುಖ್ಯಸ್ಥೆ ಪ್ರತಿಭಾ ಸಿಂಗ್ ಅವರ ಅಧ್ಯಕ್ಷರಾಗಿ ,ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಮತ್ತು ಆನಂದ್ ಶರ್ಮಾ, ವಿಪ್ರೋವ್ ಠಾಕೂರ್, ಆಶಾ ಕುಮಾರಿ, ರಾಮ್ ಲಾಲ್ ಠಾಕೂರ್, ಠಾಕೂರ್ ಕೌಲ್ ಸದಸ್ತರಾಗಿದ್ದಾರೆ.

ಇನ್ನು ಮಧ್ಯಪ್ರದೇಶದ ಪ್ರದೇಶ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್‍ನೇಮಿಸಲಾಗಿದ್ದು ಜಿತು ಪಟ್ವಾರಿ ,ದಿಗ್ವಿಜಯ ಸಿಂಗ್, ವಿವೇಕ್ ಟಂಖಾ, ಸುರೇಶ್ ಪಚೌರಿ, ಕಾಂತಿಲಾಲ್ ಭೂರಿಯಾ ಮತ್ತು ಸದಸ್ಯರಾಗಿದ್ದಾರೆ.

RELATED ARTICLES

Latest News