Thursday, May 2, 2024
Homeರಾಷ್ಟ್ರೀಯಕಾಂಗ್ರೆಸ್‍ನ ಆತ್ಮ ಹಿಂದೂ; ಶಿವಸೇನೆ

ಕಾಂಗ್ರೆಸ್‍ನ ಆತ್ಮ ಹಿಂದೂ; ಶಿವಸೇನೆ

ಮುಂಬೈ,ಜ.4- ಕಾಂಗ್ರೆಸ್‍ನ ಆತ್ಮ ಹಿಂದೂ ಎಂದು ಒತ್ತಿಹೇಳಿರುವ ಶಿವಸೇನೆ (ಯುಬಿಟಿ) ಬಣದ ಮುಖಂಡರು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ವಿಶೇಷ ಆಹ್ವಾನ ಪಡೆದಿದ್ದರೆ ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಆ ಪಕ್ಷದ ನಾಯಕರು ಹಾಜರಾಗಬೇಕು ಎಂದು ಕೇಳಿಕೊಂಡಿದೆ.
ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವು ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್‍ನ ಮಿತ್ರಪಕ್ಷವಾಗಿದೆ ಮತ್ತು ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿದೆ.

ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಶಿವಸೇನೆ (ಯುಬಿಟಿ) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ ಮತ್ತು ಆ ಸಮಯದಲ್ಲಿ ಪ್ರಧಾನಿ ಆ ಪಕ್ಷದವರಾಗಿದ್ದರೆ ಬಾಬ್ರಿ ಮಸೀದಿಯನ್ನು ಉರುಳಿಸುತ್ತಿರಲಿಲ್ಲ ಎಂದು ಬರೆದುಕೊಂಡಿದೆ. ಡಿಸೆಂಬರ್ 1992 ರಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿದಾಗ ಕಾಂಗ್ರೆಸ್ ಪಕ್ಷದ ಪಿ ವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು.

ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಕಾಂಗ್ರೆಸ್‍ಗೆ ಯಾವುದೇ ವಿಶೇಷ ಆಹ್ವಾನ ಬಂದಿದ್ದರೆ ಅದು (ನಾಯಕರು) ಅಯೋಧ್ಯೆಗೆ ಹೋಗಬೇಕು. ಅದರಲ್ಲಿ ತಪ್ಪೇನಿದೆ? ಸಂಪಾದಕೀಯ ಕೇಳಿದೆ.

ಹಮಾಸ್ ಉಗ್ರರು ಎಲ್ಲೇ ಇದ್ದರೂ ಬಿಡಲ್ಲ: ಇಸ್ರೇಲ್ ಘೋಷಣೆ

ಜನವರಿ 22 ರಂದು ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಲಾಗಿದೆ. ಖರ್ಗೆ ಮತ್ತು ಸೋನಿಯಾ ಗಾಂಧಿ ಅವರು ಕಾರ್ಯಕ್ರಮಕ್ಕೆ ಸೂಕ್ತ ಸಮಯದಲ್ಲಿ ಹಾಜರಾಗುವ ಬಗ್ಗೆ ನಿರ್ಧರಿಸುವುದಾಗಿ ಕಾಂಗ್ರೆಸ್ ಶುಕ್ರವಾರ ಹೇಳಿದೆ. ಲೋಕಸಭೆಯ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌಧರಿ ಅವರನ್ನೂ ಆಹ್ವಾನಿಸಲಾಗಿದೆ. ಕಾಂಗ್ರೆಸ್‍ನ ಆತ್ಮ ಹಿಂದೂ. ಅದರಲ್ಲಿ ಮುಚ್ಚಿಡಲು ಏನೂ ಇಲ್ಲ ಎಂದು ಬರೆದುಕೊಳ್ಳಲಾಗಿದೆ.

ಆ ಪಕ್ಷ ಹೇಳಿಕೊಂಡಂತೆ ಬಿಜೆಪಿ ಹಿಂದುತ್ವದ ವೀಕ್ಷಕ ಎಂದು ಹೇಳುವುದು ತಪ್ಪು. ಹಿಂದೂ ಸಂಸ್ಕøತಿಯ ಬೆಳವಣಿಗೆಗೆ ಕಾಂಗ್ರೆಸ್ ಸಮಾನ ಕೊಡುಗೆ ನೀಡಿದೆ ಎಂದು ಅದು ಹೇಳಿದೆ. ಕಾಂಗ್ರೆಸ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಲಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದರು. ರಾಜೀವ್ ಗಾಂಧಿಯವರ ಸೂಚನೆಯ ಮೇರೆಗೆ ದೂರದರ್ಶನದಲ್ಲಿ ಪ್ರಸಿದ್ಧ ಧಾರಾವಾಹಿ ರಾಮಾಯಣವನ್ನು ಪ್ರಸಾರ ಮಾಡಲಾಯಿತು ಸಂಪಾದಕಿಯದಲ್ಲಿ ಬರೆದುಕೊಳ್ಳಲಾಗಿದೆ.

RELATED ARTICLES

Latest News