ಬೆಂಗಳೂರು, ಜ.4- ಕ್ರಿಮಿನಲ್‍ಗಳಿಗೆ ಬೆಂಬಲ ಮಾಡೋದು, ಜೈಲಿಂದ ಬಂದವರಿಗೆ ಸನ್ಮಾನ ಮಾಡೋದು ಕಾಂಗ್ರೆಸ್ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಬ್ಬಳ್ಳಿ ಕರಸೇವಕ ಶ್ರೀಕಾಂತ್ ಪೂಜಾರಿ ಎಂಬ ಬಡ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಅವರ ಮೇಲೆ ಬಹಳಷ್ಟು ಪ್ರಕರಣ ಇವೆ. 1992ರಲ್ಲಿಯೇ ಅವರ ಮೇಲೆ ಕೇಸ್ ಹಾಕಲಾಗಿದೆ.
ಪದೇ ಪದೇ ಕೇಸ್ ಹಾಕಿದ್ದಾರೆ. ಜೈಲಿಗೆ ಕಳುಹಿಸುವ ಕೃತ್ಯ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯಕ್ಕೆ ಕಲ್ಲು ಹಾಕಬೇಕು, ಅಡಚಣೆ ಮಾಡ್ಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ. 50 ಸಾವಿರ ಜನರ ಮೇಲೆ ಕೇಸ್‍ಗಳಿವೆ. ಬೆಂಗಳೂರಿನಲ್ಲೇ 10 ಸಾವಿರ ಕೇಸ್‍ಗಳಿವೆ. ಅವರನ್ನು ಯಾವ ಜೈಲಿಗೆ ಹಾಕುತ್ತೀರಾ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಯೇ ಶ್ರೀಕಾಂತ್ ಪೂಜಾರಿ ಬಂಧನ ಮಾಡಿದ್ದೇಕೆ? ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಶಶಿತರೂರ್ ಅವರ ಮೇಲೆ ಯಾವ ಕೇಸ್ ಇವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಯಾವ ಕೇಸ್ ಇದೆ. ಸಚಿವ ನಾಗೇಂದ್ರ ಅವರ ಮೇಲೆ 23 ಕೇಸ್‍ಗಳಿವೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಕ್ರಿಮಿನಲ್‍ಗೆ ರಾಮಭಕ್ತನ ಸೋಗು: ದಿನೇಶ್ ಗುಂಡೂರಾವ್
ಶಿವಕುಮಾರ್ ಕೇಸ್ ವೇಳೆ 5000 ಜನ ಧರಣಿ ಮಾಡಿದರು. ಅವರು ಜೈಲಿನಿಂದ ಬಂದಾಗ ಸಂಭ್ರಮಾಚರಣೆ ಮಾಡಿದಿರಿ. ಹಾಗಾದರೆ ನೀವು ಯಾರ ಪರವಾಗಿದ್ದೀರಾ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ನಿಮ್ಮ ಕಾರ್ಯಕರ್ತರನ್ನು ಈ ರೀತಿ ಜೈಲಿಗೆ ಹಾಕಿದ್ವಾ? ಆಯೋಧ್ಯೆಗೆ ಅಡೆತಡೆ ಮಾಡಲು ನೀವು ಹೊರಟಿದ್ದೀರಾ ಎಂದು ಆರೋಪಿಸಿದರು.
ಒಂದೆಡೆ ಸಿದ್ದರಾಮಯ್ಯ ಇನ್ನೊಂದೆಡೆ ಹರಿಪ್ರಸಾದ್ ಅವರು ರೈಲಿನಲ್ಲಿ ಹೋದರೆ ಗೋದ್ರಾ ರೀತಿ ಆಗುತ್ತದೆ ಅಂತಾರೆ. ಮಾಜಿ ಶಾಸಕ ಯತೀಂದ್ರ ಪಾಕ್, ಅಫ್‍ಘಾನಿಸ್ತಾನ ಅಂತಾರೆ, ನಿಮ್ಮ ಉದ್ದೇಶವೇನು ಎಂದು ಅವರು ಹರಿಹಾಯ್ದರು. ಹಿಂದೂ ಅನ್ನುವುದು ಒಂದು ಪರಂಪರೆ. ಹಿಂದೂ ರಾಷ್ಟ್ರ ಅನ್ನದೆ ಇನ್ನೇನು ಅನ್ನಬೇಕು. ರಾಜ್ಯದ ಜನ ಭಯಬೀತರಾಗಬೇಕು. ಯಾರೂ ಅಲ್ಲಿಗೆ ಹೋಗಬಾರದು ಎಂದು ಕುತಂತ್ರವನ್ನು ಮಾಡುತ್ತೀದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್: ಸಮುದ್ರ ತಟದಲ್ಲಿ ನಡಿಗೆ
ರಾಮಮಂದಿರ ಹೋರಾಟ 500 ವರ್ಷದಿಂದ ನಡೆದಿದೆ. ಸಾವಿರಾರು ರಾಜರು ಹೋರಾಟ ಮಾಡಿದ್ದಾರೆ. ಲಕ್ಷಾಂತರ ಸೈನಿಕರು ಸಾವನ್ನಪ್ಪಿದ್ದಾರೆ. ಅವರೇನು ಬಿಜೆಪಿ ಕಾರ್ಯಕರ್ತರೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ದೇವಸ್ಥಾನ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟಿಸಿದ ಮೇಲೆ ದೇಗುಲದ ಒಳಗೆ ಹೋಗಲ್ಲ. ಹೆಸರಲ್ಲೇ ರಾಮ ಇದ್ದಾನೆ ಅಂತಾರೆ. ದೇಗುಲದ ಒಳಗೆ ಹೋಗಿ ಪೂಜೆ ಮಾಡೋಕೆ ಹಿಂಜರಿಕೆ ಮಾಡುತ್ತಾರೆ ಎಂದು ಟೀಕಿಸಿದರು.