Thursday, February 29, 2024
Homeರಾಜ್ಯನಂಬರ್‌ಪ್ಲೇಟ್‌ ಮರೆಮಾಚಿ ಸಂಚಾರ, ವಾಹನ ಜಪ್ತಿ

ನಂಬರ್‌ಪ್ಲೇಟ್‌ ಮರೆಮಾಚಿ ಸಂಚಾರ, ವಾಹನ ಜಪ್ತಿ

ಬೆಂಗಳೂರು, ಜ.4- ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಮರೆಮಾಚಿಕೊಂಡು ವಾಹನ ಚಲಾಯಿಸುತ್ತಿದ್ದ ಸವಾರನನ್ನು ವೈಟ್‍ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಜುನಾಥ್ ರಾವತ್ (24) ಬಂಧಿತ ಸವಾರ. ಈತ ಚಲಾಯಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ.

ಡಿ.19ರಂದು ರಾತ್ರಿ 10.48ರ ಸುಮಾರಿನಲ್ಲಿ ವೈಟ್‍ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಮರೆಮಾಚಿಕೊಂಡು ಸವಾರ ಚಾಲನೆಮಾಡಿಕೊಂಡು ಹೋಗುತ್ತಿದ್ದ ಬಗ್ಗೆ ಸಾರ್ವಜನಿಕರೊಬ್ಬರು ಫೋಟೋ ತೆಗೆದು ನಗರ ಸಂಚಾರ ವಿಭಾಗದ ಸಾಮಾಜಿಕ ಜಾಲತಾಣದ ಟ್ವಿಟ್ಟರ್ ಅಕೌಂಟಿನಲ್ಲಿ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನೋರ್ಕೆಲಿಂಗ್: ಸಮುದ್ರ ತಟದಲ್ಲಿ ನಡಿಗೆ

ಅದರನ್ವಯ ಕಾರ್ಯಚರಣೆ ಕೈಗೊಂಡು ಪೊಲೀಸರು ವಾಹನ ಹಾಗೂ ಸವಾರನನ್ನು ವಶಕ್ಕೆ ಪಡೆದು ವರ್ತೂರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಠಾಣೆಗೆ ನೀಡಿದ್ದು, ಸವಾರನ ವಿರುದ್ಧ ಎಫ್‍ಐಆರ್‍ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್.ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News