ದೋಷಪೂರಿತ ನಂಬರ್ ಪ್ಲೇಟ್ ಬದಲಿಸಿಕೊಳ್ಳದಿದ್ದರೆ ವಾಹನ ಸೀಜ್

ಬೆಂಗಳೂರು,ಡಿ.25- ದೋಷಪೂರಿತ ನಂಬರ್ ಪ್ಲೇಟ್‍ಗಳನ್ನು ಕೂಡಲೇ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಪೊಲೀಸರಿಂದ ದಂಡ ಜೊತೆಗೆ ನಿಮ್ಮ ವಾಹನವು ಕೂಡ ಜಪ್ತಿಯಾಗಬಹುದು ಹುಷಾರ್. ಬೆಂಗಳೂರು ನಗರ ಪೊಲೀಸರು ವಿವಿಧೆಡೆ ನಂಬರ್ ಪ್ಲೇಟ್‍ಗಳಿಲ್ಲದೆ ಓಡಾಡುವ ವಾಹನಗಳನ್ನು ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿರುವುದು ಗೊತ್ತಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಶೋಕಿಗಾಗಿ ನಿಯಮ ಮೀರಿ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ವಾಹನದ ನೋಂದಣಿ ಸಂಖ್ಯೆ ಸರಿಯಾಗಿ ಕಾಣುವುದಿಲ್ಲ. ಇನ್ನೊಂದೆಡೆ ನೋಂದಣಿ ಸಂಖ್ಯೆಯೇ […]